;

ಬಡವರಿಗೆ ಸೂರು ಕಲ್ಪಿಸುವುದೆ ಸರ್ಕಾರದ ಗುರಿ : ಸಿದ್ದು ಸವದಿ…!!!

ಬಡವರಿಗೆ ಸೂರು ಕಲ್ಪಿಸುವುದೆ ಸರ್ಕಾರದ ಗುರಿ : ಸಿದ್ದು ಸವದಿ

ಮಹಾಲಿಂಗಪುರ ಪಟ್ಟಣದ ಟೋಣಪಿನಾಥ ಸಮುದಾಯ ಭವನದಲ್ಲಿ ಸ್ಥಳೀಯ ನಿವಾಸಿಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಮಾತನಾಡಿ ಈಗಾಗಲೇ ಹಲವಾರು ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡಿದ್ದು ಸದ್ಯಕ್ಕೆ 134 ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು. ಈಗಾಗಲೇ ಸ್ಲಮ್ ಬೋರ್ಡ್ ದಲ್ಲಿ 500 ಮನೆಗಳನ್ನು ಮಂಜೂರು ಮಾಡಿ ಕಲಸ ಪ್ರಾರಂಭವಾಗಿದ್ದು ಬರುವ ದಿನಮಾನಗಳಲ್ಲಿ ಇನ್ನು ಹೆಚ್ಚುವರಿಯಾಗಿ 200 ಮನೆಗಳನ್ನು ಮಂಜೂರು ಮಾಡಿ ಮನೆ ಇಲ್ಲದ ಬಡ ಕುಟಂಬಗಳಿಗೆ ನೀಡಲಾಗುವುದು ಎಂದು ಹೇಳಿದರು. ಪುರಸಭೆಯ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮಾತನಾಡಿ ಸದ್ಯ ಸಿಕ್ಕಲಗಾರ ಸಮಾಜದ 44 ಕುಟುಂಬಗಳಿಗೆ ಮತ್ತು ಹರುಳಯ್ಯ ಸಮಾಜದ 90 ಕುಟುಂಬಗಳಿಗೆ ಒಟ್ಟು 134 ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದರು. ಪುರಸಭೆಯ ಮುಖ್ಯಾಧಿಕಾರಿ ಜಗದೀಶ್ ಈಟಿ,ಬಸನಗೌಡ ಪಾಟೀಲ,ಸಜನಸಾಬ ಪೆಂಡಾರಿ,ಚನಬಸು ಯರಗಟ್ಟಿ,ಶೇಖರ ಅಂಗಡಿ,ಜಯವಂತ ಕಾಗಿ,ಶಿವಾನಂದ ಅಂಗಡಿ, ರಾಜು ಚಮಕೇರಿ ಉಪಸ್ಥಿತಿಯಲ್ಲಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;