“ಸುಬುದೇಂದ್ರ ತೀರ್ಥ ಆದರ್ಶ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿಗೆ” ಭಾಜನರಾದ ಶ್ರೀ ಎ.ಪಂಪಾಪತಿ ಶಿಕ್ಷಕರು ಇಟ್ಟಿಗಿ. ಹಾವೇರಿ ಜಿಲ್ಲೆಯ ಹೊಸರಿತ್ತಿ ಶ್ರೀ ಶ್ರೀ ಡಾ!! ಸುಬುಧೇಂದ್ರ ತೀರ್ಥ ವಿದ್ಯಾ ಸಂಸ್ಥೆ (ರಿ)ಹೊಸರಿತ್ತಿ ಇವರಿಂದ ಬಡ ಮತ್ತು ಅನಾಥ ಮಕ್ಕಳ ಉಚಿತ ವಸತಿ ನಿಲಯದ ಕಟ್ಟಡ ಸಹಾಯಾರ್ಥದ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜನವರಿ 8 ರಂದು ಹೊಸರಿತ್ತಿಯ ಮೈಲಾರ ಮಹಾದೇವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಾ ಬಂದಿದ್ದ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದ ಶ್ರೀ ಎ.ಪಂಪಾಪತಿ ಶಿಕ್ಷಕರಿಗೆ ನೀಡಿ ಗೌರವಿಸಿರುವುದು ನಮಗೆಲ್ಲಾ ಸಂತಸದ ವಿಷಯ. ಇದು ಹೊಸರಿತ್ತಿಯಲಿ ನಡೆದ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರಮ.
ತುಂಬಾ ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ರಾಯರ ಭಕ್ತಗಣ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.ರಾಯರ ಆಶೀರ್ವಾದದ ಫಲವೇ ಸದರಿ ಕಾರ್ಯಕ್ರಮ.
ಅದ್ಭುತ ಕಾರ್ಯಕ್ರಮಕ್ಕೆ ಕಾರಣೀಭೂತರಾದ ಶ್ರೀ ಸಿದ್ಧಲಿಂಗೇಶ್ ಅಂಕಲಕೋಟಿ ಸರ್ ಗೆ ಹೃತ್ಪೂರ್ವಕ ಧನ್ಯವಾದಗಳು. ಸಿದ್ದಲಿಂಗೇಶ ಅಂಕಲಕೋಟಿ ಇವರು ಅಧ್ಯಕ್ಷರು. ಮಾರುತೇಶ ಮಂತ್ರಾಲಯ ಶ್ರೀಗಳವರ ಪರವಾಗಿ ಬಂದಿದ್ದರು. ಹಾಗೂ ಶಿಶುನಾಳ ಶರೀಫರ ಮೊಮ್ಮಗ ಸಂತ ಹುಸೇನ್ ಸಾಹೇಬ್ರವರ ನೇತೃತ್ವದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ ಪ್ರಶಸ್ತಿ, ಪ್ರಧಾನ ಮಾಡಿದರು. ಸನ್ಮಾನಿತರಾದ ಶ್ರೀ ಎ.ಪಂಪಾಪತಿ ಶಿಕ್ಷಕರು ಪ್ರಸಕ್ತವಾಗಿ ಇಟ್ಟಿಗಿ ಪಕ್ಕದ ಮೋರಿಗೇರಿ ಗ್ರಾಮದಲ್ಲಿ ಶಿಕ್ಷಕ ಸೇವೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಾ ಇದ್ದು ಇಂತಹ ಪ್ರಶಸ್ತಿಗಳಿಂದ ನಮಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರೇಪಿಸಿದೆ ಎಂದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
