;

ಹೊಸ ವರ್ಷದ ಪ್ರಯುಕ್ತ ಮಹಿಳೆಯರಿಗೆ ವಿಶೇಷವಾಗಿ ಕ್ರೀಡೆಗಳನ್ನು ಹಾಡಿಸುವುದರ ಮೂಲಕ ಶುಭಕೋರಿದರು…!!!

ಹೊಸ ವರ್ಷದ ಪ್ರಯುಕ್ತ ಮಹಿಳೆಯರಿಗೆ ವಿಶೇಷವಾಗಿ ಕ್ರೀಡೆಗಳನ್ನು ಹಾಡಿಸುವುದರ ಮೂಲಕ ಶುಭಕೋರಿದರು.

ಹರಪನಹಳ್ಳಿ:- ಪಟ್ಟಣದ ಎಸ್ ಸಿ ಎಸ್ ಫಾರ್ಮಸಿ ಕಾಲೇಜ್ (ಜ್ಞಾನಗಂಗೋತ್ರಿ ಆವರಣ) ಎಂ.ಪಿ.ರುದ್ರಂಬಾ ಅಮ್ಮನವರು ಹಾಗೂ ಎಂ.ಪಿ. ವೀಣಾ ಮಹಾಂತೇಶ್ ಅವರು ಚಾಲನೆ ನೀಡಿದರು.

ಹೊಸ ವರ್ಷದ ಆಚರಣೆ ಒಂದು ಮಹತ್ವ ಪೂರ್ಣ ಕಾರ್ಯಕ್ರಮವನ್ನ ಮಾಡಬೇಕೆಂದು ವಿಶೇಷವಾಗಿ ಮಹಿಳೆಯರಿಗೆ ವಿವಿಧ ಸಾಂಸ್ಕೃತಿಕ ಕ್ರೀಡೆಗಳನ್ನು ಹಾಡಿಸುವುದರ ಮೂಲಕ ರಂಗೋಲಿ,ಲೇಮನ್ & ಸ್ಫೂನ್
ಮ್ಯೂಸಿಕಲ್ ಚೇರ್, ಬಾಸ್ಕೆಟ್ ಬಾಲ್ ಫಿಲ್ ದಾ ವಾಟರ್ ಬಕೆಟ್ ಇತರೆ ಆಟಗಳನ್ನು ಹಾಡಿಸುವುದರ ಜೊತೆಗೆ ಕ್ರೀಡೆಗಳನ್ನು ಪ್ರೋತ್ಸಾಹಿಸ ಬೇಕೆಂದು ತಿಳಿಸಿದರು.

 

ತಮ್ಮೆಲ್ಲ ಕಾರ್ಯ
ವೈಖರಿಗಳಲ್ಲಿಯೂ ಮಹಿಳೆಯರನ್ನು ತೊಡಗಿಸಿಕೊಂಡು ಬಂದಂತಹ ವೀಣಕ್ಕ ಅವರು ಮಹಿಳೆಯರು ಯಾವುದಕ್ಕೂ ಕಡಿಮೆ ಇಲ್ಲಾ ಎಂಬಂತೆ ಇಂದು ಜೊತೆ ಜೊತೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಏರ್ಪಡಿಸಿ ಅತ್ಯಂತ ವಿಜೃಂಭಣೆ ಯಿಂದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಹಾಗೂ ಕ್ರೀಡೆಗಳಲ್ಲಿ ಜಯಗಳಿಸಿದ ಪ್ರಥಮ ದ್ವಿತೀಯ ತೃತೀಯ ಹಾಗೂ ಇತರೆ ನಾಲ್ಕು ಸಮಾಧಾನಕರ ಬಹುಮಾನಗಳನ್ನು ನೀಡುವುದರ ಮೂಲಕ ಕ್ರೀಡೆಗಳನ್ನು ಪ್ರೋತ್ಸಾಹಿಸಿದರು ಹಾಗೂ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಹರಪನಹಳ್ಳಿ ಪಟ್ಟಣದ ಹಾಗೂ ಕ್ಷೇತ್ರದ ಮಹಿಳೆಯರು ಪಾಲ್ಗೊಂಡು ಅತ್ಯಂತ ಸಂತೋಷದಾಯಕವಾಗಿ ಕ್ರೀಡೆಗಳಲ್ಲಿ ಪಾಲ್ಗೊಂಡು ಖುಷಿಪಟ್ಟರು. ಹಾಗೂ ಕ್ಷೇತ್ರದ ಅನೇಕ ಕಾಂಗ್ರೇಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ವೀಣಕ್ಕ ಅವರ ಅಭಿಮಾನಿಗಳು ಭಾಗವಹಿಸಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;