ವಿಜಯನಗರ ಜಿಲ್ಲೆಯ,ಕೂಡ್ಲಿಗಿ ತಾಲೂಕಿನ, ಎಂ,ಬಿ,ಅಯ್ಯನಹಳ್ಳಿ ಎಂಬ ಪುಟ್ಟ ಹಾಗೂ ಅತೀ ಬಡತನದ ಕುಟುಂಬದಲ್ಲಿ ಜನಿಸಿದ ಇವರು ಎಚ್ಚರಿಕೆ ಕನ್ನಡ ನ್ಯೂಸ್ ಹಾಗೂ ಉಕ್ಕಿನಕೋಟೆ ವಾರ ಪತ್ರಿಕೆಯ ಸಂಪಾದಕರಾಗಿ ಜನ ಸಾಮಾನ್ಯರ ಸೇವೆ ಮಾಡುವ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಗೊತ್ತಿಲ್ಲದಂತೆ ಎತ್ತರಕ್ಕೆ ಬೆಳೆಯುವುದರೊಂದಿಗೆ ಎಲ್ಲಾ ಜಾತಿ ವರ್ಗಗಳ ಕಲ್ಯಾಣ ಮತ್ತು ಸಮಸ್ತ ಸಮಾಜದ ಜನರ ಮನ ಗೆದ್ದಿರುವ ಇವರು ಮಹಾನಗರದಲ್ಲಿ ವಾಸವಾಗಿರುವ ಶ್ರೀಯುತ ಸಂಪಾದಕರಾದ ಮಂಜುನಾಥ್, ಎನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್, ಜೆಡಿಎಸ್ ಮತ್ತು ಇದೀಗ ಜನರ ನಜರಿಗೆ ಬಂದಿರುವ ಆಮ್ ಆದ್ಮಿ ಪಕ್ಷ , ಅನೇಕ ಪಕ್ಷಗಳು ಕರ್ನಾಟಕ ರಾಜ್ಯದಲ್ಲಿ ನೆಮ್ಮದಿಯಿಂದ ಆಡಳಿತ ನಡೆಸದೆ ಜಾತಿ ಮತ್ತು ರಾಜಕೀಯ ಜಗಳಗಳನ್ನು ಅಚ್ಚಿ ನೆಮ್ಮದಿಯನ್ನು ಹಾಳು ಮಾಡಿ ಸಾರ್ವಜನಿಕರ ಹಾಗೂ ಜಾತಿ ಜಾತಿಗಳ ಒಗ್ಗಟ್ಟನ್ನು ಒಡೆದು ನೆಮ್ಮದಿಯನ್ನು ದೂರ ಮಾಡುವುದರಲ್ಲಿ ಕಾಲ ಕಳೆಯುತ್ತಿದೆ ವಿನಹ ಯಾವುದೇ ರೀತಿಯ ಜನಪರ ಕೆಲಸ ಮಾಡುತ್ತಿಲ್ಲ ಅಧಿಕಾರದ ಆಸೆಗಾಗಿ ಅವರನ್ನು ಇವರು ಹೊಗೊಳೋದು ಇವರನ್ನ ಅವರು ಹೊಗಳೋದು ಮತ್ತು ಅವರಲ್ಲಿ ಇರತಕ್ಕಂತಹ ಮಾನ ಮರ್ಯಾದೆ ಹರಾಜು ಹಾಕುವುದು ಬಿಟ್ಟರೆ ಯಾವುದೇ ರೀತಿಯ ಜನಪರವಾದ ಕೆಲಸಗಳು ಮಾಡುತ್ತಿಲ್ಲ, ಅಧಿಕಾರ ಬಂದಾಗ ಅಭಿವೃದ್ಧಿ ಕೆಲಸಗಳು ಮಾಡದೆ ಚುನಾವಣೆ ಬರುವ ತನಕ ತಮ್ಮ ಸ್ವಾರ್ಥಕ್ಕಾಗಿ ತಾವುಗಳು ಜೀವನ ನಡೆಸುತ್ತಾರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರ ಮನೆಗಳಿಗೆ ಆಯ ಕ್ಷೇತ್ರದ ತಾಲೂಕುಗಳಿಗೆ ನಾಟಕ ಮಾಡಲು ತೆರಳುತ್ತಿದ್ದಾರೆ. ಅದಕ್ಕಾಗಿ ಇಂಥ ಪಕ್ಷವನ್ನು ಬಿಟ್ಟು ಬಳ್ಳಾರಿಯಲ್ಲಿ ಹತ್ತು ವರ್ಷಗಳ ಹಿಂದೆ ಧೂಳು ಇರುವಂತಹ ಗಡಿನಾಡಿನಲ್ಲಿ ಎರಡು ಬದಿಯಲ್ಲಿ ರಸ್ತೆ ಬೀದಿ ದೀಪ ಮತ್ತು ಉತ್ತಮವಾದ ಆಸ್ಪತ್ರೆ ಮುಂದಿನ ಅಧಿಕಾರ ವಹಿಸಿರುವ ಪ್ರವಾಸೋದ್ಯಮ ಇಲಾಖೆ ಅಧಿಕಾರ ಸಮಯದಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಪಕ್ಷವನ್ನು ಉತ್ತರ ಕರ್ನಾಟಕ ಭಾಗದಲ್ಲಿ ಎತ್ತಿ ಹಿಡಿದರು.ಬಳ್ಳಾರಿ ಜಿಲ್ಲೆಯಿಂದ ದಿಲ್ಲಿಯವರೆಗೆ ಬಿಜೆಪಿ ಪಕ್ಷವನ್ನು ಸದ್ದು ಮಾಡಲು ಗಾಲಿ ಜನಾರ್ದನ ರೆಡ್ಡಿ ಅವರು ಮುಖ್ಯವಾಗಿ ಕಾರಣರಾಗಿದ್ದಾರೆ ಎಂದು” ಮಂಜುನಾಥ್ ಎನ್” ಅವರು ಹೇಳಿದ್ದಾರೆ . ಅದಕ್ಕಾಗಿ ಮೊನ್ನೆ ನಡೆಸಿದ ಡಿಸೆಂಬರ್ 25 ರಂದು ಬೆಂಗಳೂರಿನ ಹಾಗೂ ರಾಜ್ಯದ ಪಕ್ಷದ ಬಲವರ್ಧನೆಗೆ ತುಂಬಾ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದು ಮತ್ತು ಬಿಜೆಪಿ ಪಕ್ಷವನ್ನು ತೊರೆದು ನೂತನವಾಗಿ ಹೊಸ ಪಕ್ಷ ಅದುವೆ ಕಲ್ಯಾಣ ರಾಜ್ಯ ಪ್ರಗತಿಪಕ್ಷ ಎಂದು ಗಾಲಿ ಜನಾರ್ಧನ ರೆಡ್ಡಿ ಅವರು ನೂತನ ಪಕ್ಷವನ್ನು ಘೋಷಿಸಿದರು. ಮತ್ತು ರಾಜ್ಯದಲ್ಲಿ ಬಡವರ ಹಾಗೂ ಹಿಂದುಳಿದ ಕುಟುಂಬಗಳನ್ನು ಗುರುತಿಸಿ ಅಭಿವೃದ್ಧಿಗೆ ಹೆಚ್ಚು ಹೊತ್ತನ್ನು ಕೊಟ್ಟು ರಾಜ್ಯದ ಅಭಿವೃದ್ಧಿಗೆ ಶ್ರಮಿಸೋಣ ಎನ್ನುವ ಒಂದು ಉದ್ದೇಶದಿಂದ ನಾನು ಹೊಸಪಕ್ಷವನ್ನು ಕಟ್ಟಿದ್ದೇನೆ ಅದಕ್ಕೆ ರಾಜ್ಯದ ಜನತೆ ಆಶೀರ್ವದಿಸಿ ಎಂದು,ಆ ಪತ್ರಿಕಾ ಗೋಷ್ಠಿಯಲ್ಲಿ ಜನಾರ್ಧನ ರೆಡ್ಡಿ ಅವರು ಮಾತನಾಡಿದ ಕೆಲವು ವಿಷಯಗಳು ಬೇರೆ ಬೇರೆ ಪಕ್ಷದವರು ಜಾತೀಯ ಬಗ್ಗೆ ರಾಜಕೀಯ ಮಾಡಿದರೆ ನಾನು ಎಲ್ಲಾ ಜಾತಿಯನ್ನು ಧರ್ಮವನ್ನು ಜೊತೆಯಲ್ಲಿಟ್ಟುಕೊಂಡು ರಾಜ್ಯಕ್ಕಾಗಿ ದುಡಿಯುತ್ತೇನೆ ಎಂದು ಹೇಳಿಕೊಟ್ಟ ಹಿನ್ನೆಲೆಯಲ್ಲಿ ನಾನು ಕೂಡ , ಕೆ,ಆರ್, ಪಿ, ವಿಧಾನಸಭಾ ಕ್ಷೇತ್ರ ರಾಜ್ಯ ಪ್ರಗತಿಪಕ್ಷದಿಂದ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ ಎಂದು ಬಳ್ಳಾರಿ, ವಿಜಯನಗರ (ಹೊಸಪೇಟೆ ) ಚಿತ್ರದುರ್ಗ ಜಿಲ್ಲೆಗಳ ವಿಧಾನಸಭಾ ಕ್ಷೇತ್ರದ ಸೇವಾಕಾಂಕ್ಷಿಯಾಗಿ ಪಕ್ಷದ ಪರ ಮತ್ತು ಪಕ್ಷದ ಅಭ್ಯಾರ್ಥಿಗಳ ಪರ ಸದಾ ಸೇವೆಯನ್ನು ಮಾಡಲು ನಾನು ಸಿದ್ದನಿದ್ದೇನೆ ಎಂದು, ಮಂಜುನಾಥ್,ಎನ್ ಕೆಲವು ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ಮಾಡುವ ಸಂದರ್ಭದಲ್ಲಿ ತಿಳಿಸಿದ್ದಾರೆ….

ವರದಿ. ವಿರೇಶ್, ಎಚ್, ಬಳ್ಳಾರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
