ಗುಡೆಕೋಟೆ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಮನವಿ
ಕೂಡ್ಲಿಗಿ: ತಾಲೂಕಿನ ಗುಡೆಕೋಟೆ ಹೋಬಳಿ ಘಟಕದ ಗುಡೆಕೋಟೆ ಗ್ರಾಮದಲ್ಲಿರುವ. ಸರ್ಕಾರಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ. ವತಿಯಿಂದ ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳಿಂದ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ವಿಶ್ವನಾಥ್ ರವರ ಮೂಲಕ ತಾಲೂಕು ವೈದ್ಯಾಧಿಕಾರಿಗಳು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳಿಗೆ ರಾತ್ರಿ ವೇಳೆಯಲ್ಲಿ ವೈದ್ಯಾಧಿಕಾರಿಗಳು ಸೇವೆ ಸಲ್ಲಿಸುವಂತೆ ಹಾಗೂ ಮೂಲಸೌಕರ್ಯ ದೊರಕಿಸುವಂತೆ ಸ್ವಚ್ಛತೆ ಕಾಪಾಡಲು ಹಳ್ಳಿ ಜನರಿಗೆ ಅನುಕೂಲ ಮಾಡಿಕೊಡಲು ಮನವಿ ಸಲ್ಲಿಸಿದರು. ನಂತರ ಕರ್ನಾಟಕ ರಕ್ಷಣಾ ವೇದಿಕೆ ಗುಡೆಕೋಟೆ ಶಿವಕುಮಾರ್ ರವರು ಗುಡೆಕೋಟೆ ಹೋಬಳಿಗೆ ಸುಮಾರು 30 ಹಳ್ಳಿಗಳು ಸಂಬಂಧಪಟ್ಟದ್ದು ಹಲವಾರು ಊರುಗಳಿಂದ ರೋಗಿಗಳು ಬರುತ್ತಿರುತ್ತಾರೆ. ಅಲ್ಲದೆ ಇಲ್ಲಿ ಕರಡಿಗಳ ಕಾಟ ಹಾಗೂ ಕಾಡು ಪ್ರಾಣಿಗಳು. ಮನುಷ್ಯರ ಮೇಲೆ ಆಗಾಗ ದಾಳಿ ಮಾಡುತ್ತಿರುತ್ತಾನೆ ಯಾವಾಗ ಬೇಕಾದರೂ ಚಿಕಿತ್ಸೆಗಾಗಿ ಬರುತ್ತಿರುತ್ತಾರೆ ಆದರೆ ಈ ಆಸ್ಪತ್ರೆಯಲ್ಲಿ. ಔಷಧಿಗಳ ಕೊರತೆ ಹಾಗೂ. ರಾತ್ರಿ ವೈದ್ಯರ ಕೊರತೆಯಿಂದ. ಇಲ್ಲಿಯ ನರ್ಸ್ಗ ಗಳಾಗಲಿ ಇನ್ನಿತರೆ ಸಿಬ್ಬಂದಿಗಳಾಗಲಿ ಎಮರ್ಜೆನ್ಸಿ ರೋಗಿಗಳಿಗೆ. ತಕ್ಷಣವೇ ಸ್ಪಂದಿಸುವುದಿಲ್ಲ ಆದ್ದರಿಂದ ಎಷ್ಟೋ ಜನರು ಪ್ರಾಣ ಸಹ ಹೋಗಿವೆ. ಜನನ ಪ್ರಮಾಣ ಪತ್ರ ಕೊಡುವುದಕ್ಕೂ ಸಹ ಅಲೆದಾಡಿಸುತ್ತಿದ್ದು ಬೇಜವಾಬ್ದಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ ಸ್ವಚ್ಛತೆ. ಶೌಚಾಲಯಗಳು ವ್ಯವಸ್ಥೆ ಕೊರತೆಯಿದ್ದು. ಸೊಳ್ಳೆಗಳ ಕಾಟ ಜಾಸ್ತಿಯಾಗಿತ್ತು ವಿದ್ಯುತ್ ವ್ಯವಸ್ಥೆಯ ಸಹ ಸರಿ ಇಲ್ಲ. ಅಲ್ಲದೆ ಆಸ್ಪತ್ರೆಯಲ್ಲಿ ಸೂಕ್ತವಾದ ಪೀಠೋಪಕರಣಗಳು ವ್ಯವಸ್ಥೆಯೂ ಸಹ ಇಲ್ಲ ಮುಖ್ಯವಾಗಿ ವೈದ್ಯರು ಇಲ್ಲೇ ವಾಸವಿತ್ತು ರಾತ್ರಿ ವೇಳೆ ಸೇವೆ ಸಲ್ಲಿಸಬೇಕು ಎಂದು ಮಾತನಾಡಿದರು ಈ ವೇಳೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ. ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಕೆ ಮುರುಳಿರಾಜ್ ರವರು. ಈಗಾಗಲೇ ನಮ್ಮ ರಕ್ಷಣಾ ವೇದಿಕೆ ಅಧ್ಯಕ್ಷರು ಈ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ರೀತಿಯಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇವೆ ಸಲ್ಲಿಸುವಂತೆ ಮತ್ತು ಅತಿ ಮುಖ್ಯವಾಗಿ ಸ್ವಚ್ಛತೆಯನ್ನು ಕಾಪಾಡಬೇಕು ಈ ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ವೈದ್ಯಾಧಿಕಾರಿಗಳಲ್ಲಿ ಮಲೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ. ಗ್ರಾಮ ಪಂಚಾಯಿತಿ ಸದಸ್ಯರಾದ ಎನ್ ಕೃಷ್ಣ ರಕ್ಷಣಾ ವೇದಿಕೆ ಪದಾಧಿಕಾರಿಗಳಾದ. ಎಂ. ಶ್ರೀನಿವಾಸ್. ನಾಗರಾಜ್. ಆಚಾರಿ. ಸೂರ್ಯನಾರಾಯಣ. ಓಬಣ್ಣ. ಪ್ರಭಾಕರ್ . ಹಾಗೂ ಕೆಲ ಗ್ರಾಮದ ಗ್ರಾಮಸ್ಥರು ಇದ್ದರು..

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
