;

ಇತಿಹಾಸ ವಸ್ತು ಸಂಗ್ರಹಾಲಯ ಉದ್ಘಾಟನೆ…!!!

ಇತಿಹಾಸ ವಸ್ತು ಸಂಗ್ರಹಾಲಯ ಉದ್ಘಾಟನೆ.
ಹ.ಬೊ. ಹಳ್ಳಿ. ಪಟ್ಟಣದ ಜಿ.ವಿ.ಪಿ. ಪಿ. ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಸ್ತು ಸಂಗ್ರಹಾಲಯ ಉದ್ಘಾಟನೆಯನ್ನು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಾ. ವೆಂಕಟೇಶ್ ರಿಬ್ಬನ್ ಕಟ್ ಮಾಡುವುದರ ಮೂಲಕ ವಸ್ತು ಸಂಗ್ರಹಾಲಯಕ್ಕೆ ಚಾಲನೆ ನೀಡಿ, ವೀಕ್ಷಿಸಿ, ನಂತರ ಮಾತನಾಡಿ, ಈ ನಮ್ಮ ಕಾಲೇಜಿನಲ್ಲಿ ಇತಿಹಾಸ ವಸ್ತು ಸಂಗ್ರಹ ಆಗುತ್ತಿರುವುದು ನಮಗೆ ಎಲ್ಲರಿಗೂ ಖುಷಿ ಕೊಡುವಂತದ್ದು ಚರಿತ್ರೆ ಎಂದರೆ ಕೇವಲ ಹಿಂದಿನ ಘಟನೆಗಳು ಅದು ಒಂದು ಪರಂಪರೆ ಯಾರಿಗೆಚರಿತ್ರೆ ಯು ಅರಿವು ಇರುವುದಿಲ್ಲವೋ, ಅವರ ವರ್ತಮಾನವು ಸರಿಯಾಗಿರುವುದಿಲ್ಲ ಭವಿಷ್ಯ ಸಹ ಸರಿಯಾಗಿರುವುದಿಲ್ಲ, ಹಾಗಾಗಿ ನಮ್ಮ ನೆಲದ ಹಿರಿಯರು, ಸಾಮ್ರಾಜ್ಯಗಳು, ಅವರ ಚರಿತ್ರೆ ಅವರ ಸಂಸ್ಕೃತಿ, ಪರಂಪರೆಗೆ ವಾಸ್ತು ಶಿಲ್ಪ ಸಂಗೀತ ಈ ಎಲ್ಲಾ ಕ್ಷೇತ್ರಗಳಲ್ಲಿ ಅವರು ಮಾಡಿರುವಂತ ಸಾಧನೆ ತೋರಿದಂತ ಕ್ರಿಯಾಶೀಲತೆ ಅವೆಲ್ಲವೂ ಕೂಡ ನಮ್ಮ ಕಾಲೇಜಿನ ಈ ವಸ್ತು ಸಂಗ್ರಹಾಲಯದಲ್ಲಿ ನಡೆದಿದೆ. ಇದಕ್ಕೆ ಕಾರಣರಾದಂತ ಇತಿಹಾಸ ವಿಭಾಗದ ಮುಖ್ಯಸ್ಥರಾದಂತಹ ಶ್ರೀ ವೀರೇಶ್ ಬಡಿಗೇರ್ ಹಾಗೂ ಈ ವಿಭಾಗದ ಎಲ್ಲಾ ಅಧ್ಯಾಪಕರುಗಳಿಗೂ ನನ್ನ ತುಂಬು ಹೃದಯದ ಧನ್ಯವಾದಗಳು , ವಸ್ತು ಸಂಗ್ರಹಾಲಯದ ಈ ಚಿತ್ರಗಳನ್ನು ಬೇರೆ ಬೇರೆ ಬಗೆಯ ಆಕಾರ ಗಳನ್ನು ವೀಕ್ಷಣೆ ಮಾಡುವುದು ಅಷ್ಟೇ ಅಲ್ಲ, ಚರಿತ್ರೆಯನ್ನು ಗೌರವಿಸುವ, ಚರಿತ್ರೆಯನ್ನು ಒಂದು ಬಗೆಯಲ್ಲಿ ಶ್ರದ್ಧಾಪೂರಕವಾಗಿ, ನೋಡುವಂತ ಒಂದು ಮನಸ್ಥಿತಿ ನೋಡಬೇಕಾಗಿದೆ. ನಾವು ಇನ್ನೊಂದು ಹಂಪೆಯನ್ನು, ಕೋಗಳಿಯನ್ನು ಸೃಷ್ಟಿ ಮಾಡಲಿಕ್ಕೆ ಆಗುವುದಿಲ್ಲ,. ಎಲ್ಲಾ ಪರಂಪರೆ ಯ ನೋಟ ಈ ಚರಿತ್ರೆ. ನಾವು ಮುಂದಿನ ಜನಾಂಗಕ್ಕೆ ದಾಟಿಸಬೇಕಾದಂತ ಜವಾಬ್ದಾರಿ ಕೂಡ ಅಧ್ಯಾಪಕರದ್ದು, ವಿದ್ಯಾರ್ಥಿಗಳು, ಪ್ರಜ್ಞಾವಂತರು, ಚರಿತ್ರೆಯನ್ನು ಯಾವುದೇ ನಂಜಿರದ ಕಣ್ಣುಗಳಿಂದ ಓದಿ, ಯಾವುದೇ ಪೂರ್ವಗ್ರಹದ ಚರಿತ್ರೆಯನ್ನು ನೋಡಿ, ರಾಷ್ಟ್ರಕವಿ ಕುವೆಂಪು ಹೇಳಿದ ಹಾಗೆ ” ಸರ್ವ ಜನಾಂಗದ ಶಾಂತಿಯ ತೋಟ” ಎಂಬಂತೆ ಇಂತಹ ಸರ್ವಾಂಗದ ಶಾಂತಿಯ ತೋಟ ಮತ್ತೆ ನಿರ್ಮಾಣಗೊಳ್ಳಲಿಕ್ಕೆ ನಾವೆಲ್ಲರೂ ಕೂಡ ಚರಿತ್ರೆಯು ಅತ್ಯಂತ ಗೌರವ ಪ್ರೀತಿಯಿಂದ ಕಾಣಬೇಕಾಗಿದೆ. ಇಂಥ ಚರಿತ್ರ ಯುಳ್ಳ ಎಲ್ಲ ವಿದ್ಯಾರ್ಥಿಗಳು ಗೌರವಿಸುತ್ತಾರೆ. ಇದರ ಬಗ್ಗೆ ವಿಶ್ವಾಸದಿಂದ, ಅಧ್ಯಯನ ಮಾಡುತ್ತಾರೆ. ಎಂದು ತಿಳಿಸಿದರು.

ನಂತರ ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ವೀರೇಶ್ ಬಡಿಗೇರ್ ಮಾತನಾಡಿ, ಮುಂದಿನ ಪೀಳಿಗೆಗೆ ಕ್ರಿಯಾಶಕ್ತಿ ಯೂ ಕೊಡಬೇಕು ಅಂತ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಸಲುವಾಗಿ, ಈ ತಾಲೂಕಿನಲ್ಲಿ ಮೊದಲನೆಯ ಬಾರಿಗೆ ವಿದ್ಯಾರ್ಥಿಗಳ ಎಲ್ಲರ ಪರಿಶ್ರಮ ಹಾಗೂ ನಮ್ಮ ವಿಭಾಗದ ಎಲ್ಲಾ ಉಪನ್ಯಾಸಕರ ಪರಿಶ್ರಮದಿಂದ ಈ ಇತಿಹಾಸಕ್ಕೆ ಸಂಬಂಧ ಪಟ್ಟಂತ , ವಸ್ತುಗಳನ್ನು ನಾವು ಜೋಡಿಸಿ ಈ ವಸ್ತು ಸಂಗ್ರಹಾಲಯವನ್ನು ನಾವು ನಿರ್ಮಾಣ ಮಾಡಿದ್ದೇವೆ ಇತಿಹಾಸವನ್ನು ಮುಂದಿನ ಪೀಳಿಗೆಗೆ ಉಳಿಸುವುದು ಮತ್ತು ನಮ್ಮ ಕೊಡುಗೆಗಳನ್ನು ಕೊಡುವುದು ಒಂದು ದೊಡ್ಡ ಜವಾಬ್ದಾರಿಯಿಂದ,ಈ ಇತಿಹಾಸದ ವಸ್ತು ಸಂಗ್ರಾಲಯವನ್ನು ನಿರ್ಮಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್.ಎಮ್. ಬಸವರಾಜ್, ಕೆ .ಬಿ‌. ಗುರುಬಸವರಾಜ್, ಟಿ ಜಗದೀಶ್, ಹೆಚ್ ಪಂಪಾಪತಿ, ಸತೀಶ್ ಪಾಟೀಲ್, ಎಲ್ ಶಿವಕುಮಾರ್ ನಾಯಕ್, ಅಧಿಕಾರ ರಾಧಾ, ಈ ಸುರೇಶ್, ಹಾಗೂ ಕಾಲೇಜ್ ಎಲ್ಲಾ ಉಪನ್ಯಾಸಕರು, ಅತಿಥಿ ಉಪನ್ಯಾಸಕರು, ಹಾಗೂ ಕಾಲೇಜು ಸಿಬ್ಬಂದಿಯವರು, ಎಲ್ಲಾ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;