;

ಹಳ್ಳಿಯಲ್ಲಿ ಹುಟ್ಟಿದರು, ಸಾಧನೆ ಯಾರಪ್ಪನ್ನ ಆಸ್ತಿಯಲ್ಲ ಎಂಬುದನ್ನು ಸಾಬೀತು ಮಾಡಿದ ಮಾಧ್ಯಮ ಚಕ್ರವರ್ತಿ…!!!

ಹಳ್ಳಿಯ ಯುವಕರು ಕೂಡ ಸಾಧನೆ ಮಾಡಬಹುದು ಎಂದು ಈ ವೇದಿಕೆಯಲ್ಲಿ ಎಚ್ಚರಿಕೆ ಪತ್ರಿಕೆಯನ್ನು ಹೊರ ತಂದು ಇಡೀ ರಾಜ್ಯದಲ್ಲಿ ಹೆಸರುಗಳಿಸಿರುವ. ನನ್ನ ಬಾಲ್ಯದ ಗೆಳೆಯ ಹಾಗೂ ಒಂದರಿಂದ ಆರನೇ ತರಗತಿವರೆಗೆ ಇಬ್ಬರು ಜೊತೆಗೆ ವಿದ್ಯೆ ಕಲಿತು ಇಂದು ಮಾಧ್ಯಮ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿದ ಪತ್ರಿಕಾ ಸಂಪಾದಕನಾಗಿರುವ ಸ್ನೇಹಿತ ಎನ್.ಮಂಜುನಾಥ್ ಎಂ.ಬಿ.ಅಯ್ಯನಹಳ್ಳಿ ಇವರಿಗೆ ಶುಭಾಶಯ ಕೋರುತ್ತೇನೆ.

ಹಾಗೂ ಇವತ್ತು ಹಲವಾರು, ಸಾಹಿತಿಗಳು, ಪತ್ರಕರ್ತರು, ಹಲವಾರು ರೀತಿಯಲ್ಲಿ ಸಾಧನೆಯನ್ನು ಮಾಡಿರುವವರು ಹಳ್ಳಿಗಳಲ್ಲಿ ವಿದ್ಯೆಯನ್ನು ಕಲಿತು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆಯನ್ನು ಗೈದವರಲ್ಲಿ ನನ್ನ ಸ್ನೇಹಿತನು ಸಹ ಒಬ್ಬರು.
ಇವರ ಬದಕು ಇವತ್ತು ಹಸನ, ಕಲಿಕಾ ಹಾಗೂ ಬಾಲ್ಯವಸ್ಥೆಯ ಜೀವನದಲ್ಲಿ ಒಂದು ಒತ್ತು ಊಟಕ್ಕೂ ಯುದ್ಧ, ಅಂದರೆ ಅತೀ ಕಿತ್ತು ತಿನ್ನುವ ಬಡತನದ ಜೀವನ ಅಮ್ಮನ ಅಶ್ರಯದಲ್ಲಿ ತನ್ನ ಬದುಕನ್ನು ಕಳೆದ ನನ್ನ ಗೆಳೆಯ ನಾನು ನೋಡಿದ ನಿಜವಾದ ಸಂಗತಿಯಂದರೆ ಅವತ್ತು.

ನಾನು, ಮತ್ತು ಇಂದಿನ ನನ್ನ ಗೆಳೆಯ 2018ರಲ್ಲೇ “ಮಾಧ್ಯಮ ಚಕ್ರವರ್ತಿ “ಹಾಗೂ 2022ರಲ್ಲಿ ರಾಷ್ಟ್ರೀಯ ಮಾಧ್ಯಮ ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಹಾಗೂ ನೇರವಾಗಿ ಹಾಗೂ ನಿಷ್ಟುರವಾದ ಮನಸ್ಥಿತಿಯನ್ನು ಉಳ್ಳ ವ್ಯಕ್ತಿ ಅವರೇ, ಎಚ್ಚರಿಕೆ ಕನ್ನಡ ನ್ಯೂಸ್ ಚಾನಲ್, ಹಾಗೂ ಉಕ್ಕಿನಕೋಟೆ ಪತ್ರಿಕೆ ಸಂಪಾದಕರಾದ, ಮಂಜುನಾಥ್, ಎನ್, ಇವರ ಬಗ್ಗೆ ಹೇಳುವುದಕ್ಕೆ ಮಾತೇ ಸಾಲದು ಏಕೆಂದರೆ ಇವತ್ತು, ಆಯ್ಕೆ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಇಂದು ತಾಲೂಕಿನಲ್ಲಿ ಹಲವಾರು ಸರ್ಕಾರಿ ನೌಕರರು ಸೇವೆಯನ್ನು ಸಲ್ಲಿಸುತ್ತಿದ್ದಾರೆ ಆದರೆ ಇವರಿಗೆ,2002ರಲ್ಲಿ ಭಾರತ ಸೇನೆಯಲ್ಲಿ ಎಲ್ಲಾ ರೀತಿಯಲ್ಲಿ ದೈಹಿಕ ಪರೀಕ್ಷೆಯಲ್ಲಿ ಉತ್ತಿರ್ಣರಾದರು ಇವರ ತಾಯಿ ನನಗೆ ಇರುವವರು ಇಬ್ಬರೇ ಮಕ್ಕಳು ನೀನು ನನ್ನನ್ನು ಬಿಟ್ಟು ಬೇರೆಡೆಗೆ ಹೋದರೆ ನಾವು ಜೀವಂತವಾಗಿರುವುದು ಹೇಗೆ!ಅಂತ ಏಳಿ ಅವರಿಗೆ ಅಡ್ಡಿ ಮಾಡಿರುವುದು ಅಷ್ಟೇ ಸತ್ಯ ಹಾಗೂ 2010ರಲ್ಲಿ ಪೊಲೀಸ್ ಇಲಾಖೆಯಲ್ಲಿ ದೈಯಿಕ ಪರೀಕ್ಷೆಯಲ್ಲಿ ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದರು ಸಹ, 0.7 ಸಮಟಿಂಗ್ ನಲ್ಲಿ ಪರೀಕ್ಷೆಯಲ್ಲಿ ಇಲಾಖೆಯಿಂದ ಒರಬಂದರು ಅಲ್ಲಿಂದ, ಎದೆಯನ್ನು ಗುಂದದೆ ಎಲೆಕ್ಟ್ರಿಕಲ್ ಸಾಧನೆಯಲ್ಲಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದ ಇವರು ಒಂದು, ಹಳ್ಳಿ ಮಟ್ಟದಲ್ಲಿ ITI ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ತನ್ನ ಒಂದು ವೃತ್ತಿಯನ್ನು ಆರಂಭಿಸಿದ ಇವರು ಸುಮಾರು 800ನೂರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ “ಅಲ್ಲಿ ನಡೆಯುವ ಹಗರಣಗಳ ಬಗ್ಗೆ ಪ್ರಶ್ನೆ ಮಾಡಿದ ಸಲುವಾಗಿ ಅಲ್ಲಿಂದ ದೂರ ಉಳಿದು” ನಿರಂತರವಾಗಿ ಮಾದ್ಯಮದಲ್ಲಿ ತಮ್ಮ ವೃತ್ತಿ ಜೀವನದ ಬದುಕನ್ನು ಆರಂಭಿಸಿದ ಇವರು ಹಲವಾರು ಸಮಾಜ ಮುಖಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಂದರೆ ಬಡ ಮಕ್ಕಳಿಗೆ ತನ್ನ ಹುಟ್ಟುಹಬ್ಬದ ಪ್ರಯುಕ್ತ ತನ್ನ ಕೈಲಾದಷ್ಟು ಸಹಾಯ ಹಾಗೂ ಹಲವಾರು ವಿದ್ಯಾರ್ಥಿಗಳಿಗೆ ಅಸ್ಟೇಲ್ ವ್ಯವಸ್ಥೆ, ಹಾಗೂ ಹಲವಾರು ಸಮಾಜಮುಖಿ ಕಾರ್ಯಕ್ರಮದಲ್ಲಿ ಬಾಗಿ ಇನ್ನಿತರ ಕಾರ್ಯಕ್ರಮದಲ್ಲಿ ಭಾಗಿಯಾಗಿ ತನ್ನ ಹೆಸರನ್ನು ಇಂದು ರಾಷ್ಟ್ರೀಯ ಮಟ್ಟದಲ್ಲಿ ಅದು ಯಾರೊಬ್ಬರ ಸಹಾಯವಿಲ್ಲದೆ ಬೆಳೆದು ನಿಂತ ನನ್ನ ಸ್ನೇಹಿತನ ಸಾಧನೆಗೆ ಸಾಧನೆಗೆ ನಾ ಮತ್ತು ನಮ್ಮ,ಎಂ,ಬಿ, ಅಯ್ಯನಹಳ್ಳಿ ಬಾಲ್ಯದ ಗೆಳೆಯರ ಬಳಗ ಸದಾ ಚಿರಋಣಿ, ಏಕೆಂದರೆ ಮಂಜುನಾಥ್, ಎನ್, ಎಂದರೆ ಬರೀ ಅಂದು ಹಾವುರಿಗಷ್ಟೇ ಹೆಸರು ಇಂದು ರಾಷ್ಟ್ರ ಮಟ್ಟದಲ್ಲಿನ ಒಂದು ವಿಭಿನ್ನ ಮಟ್ಟದಲ್ಲಿನ ಪ್ರತಿಭಾವಂತ ವ್ಯಕ್ತಿ,ಕಾಲ ಯಾವತ್ತೂ ನಮ್ಮನ್ನು ಬದಲಾವಣೆ ಮಾಡಲ್ಲ ನಾವು ಬದಲಾವಣೆಯನ್ನು ಹೊಂದಬೇಕು ಎನ್ನುವುದಕ್ಕೆ ಇವರೇ ಮಾದರಿ, ಎಚ್ಚರಿಕೆ ಮಂಜುನಾಥ್ ಎನ್ನುವ ಹೆಸರು ಇಂದು ಅಜರಾಮರ, ಗೆಳೆಯ ನೀನು ಇನ್ನು ವಿಶ್ವ ಮಟ್ಟದಲ್ಲಿ ಬೆಳೆದು ನಿಮ್ಮ ಹಳ್ಳಿ ಹಾಗೂ ನಿಮ್ಮ ಒಂದು ಗೆಳೆಯರ ಬಳಗಕ್ಕೂ ಸಹ ಮಾರ್ಗದರ್ಶನವಾಗೂ ಎನ್ನುವುದೇ ನಮ್ಮ ಆಶಯ..

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;