ಖೋಖೋ ಖೋಖೋ ಆಟಗಾರರು ಜಿಲ್ಲಾ ಮಟ್ಟಕ್ಕೆ ಆಯ್ಕೆ!!!

ಖೋಖೋ ಖೋಖೋ ಆಟಗಾರರು ಜಿಲ್ಲಾ ಮಟ್ಟಕ್ಕೆ ಆಯ್ಕೆ!!!!!! ಕೂಡ್ಲಿಗಿ, ದಿ.22.12.22 ಗುರುವಾರ ತಾಲೂಕಿನ ಮಹದೇವ ಮೈಲಾರ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ 25 ಗ್ರಾಮ ಪಂಚಾಯಿತಿಗಳ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು, ಈ ಕ್ರೀಡಾಕೂಟದಲ್ಲಿ ಚೌಡಾಪುರ ಗ್ರಾಮ ಪಂಚಾಯಿತಿಯ ಖೋಖೋ ಖೋಖೋ ಆಟಗಾರರು ತಾಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಚೌಡಾಪುರ ಗ್ರಾಮ ಪಂಚಾಯಿತಿಯ ಖೋಖೋ ಖೋಖೋ ಆಟಗಾರರಿಗೆ ಕೂಡ್ಲಿಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ ರವಿಕುಮಾರ್ ಅವರು ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ವಿತರಣೆ ಮಾಡಿ ಮಾತನಾಡಿ ಉತ್ತಮವಾಗಿ ನೀವು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಟವನ್ನು ಆಡಿ ತಾಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುವುದು ನನಗೆ ತುಂಬಾ ಹೆಮ್ಮೆಯಾಗಿದೆ ಇದೇ ರೀತಿ ಜಿಲ್ಲಾಮಟ್ಟದಲ್ಲಿ ಸಹ ವಿಜೇತರಾಗಿ ಪ್ರಥಮ ಸ್ಥಾನ ತಂದು ನಮ್ಮ ತಾಲೂಕಿಗೆ ಹಾಗೂ ಗ್ರಾಮಕ್ಕೆ ಹೆಸರು ತನ್ನಿ ಎಂದು ಹೇಳಿ ಆಟಗಾರರಿಗೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಚೌಡಾಪುರ ಗ್ರಾಮ ಪಂಚಾಯಿತಿ ಪಿ ಡಿ ಓ ಎಂ. ಪ್ರಶಾಂತ್, ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಉಪಾಧ್ಯಕ್ಷ ವೈ ಮಲ್ಲಿಕಾರ್ಜುನ್, ಬಿಲ್ ಕಲೆಕ್ಟರ್ ಚನ್ನಮಲ್ಲಪ್ಪ, ಕಂಪ್ಯೂಟರ್ ಆಪರೇಟರ್ ಜಿ. ವೀರಭದ್ರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸಿಬ್ಬಂದಿ ವರ್ಗ ಆಟಗಾರರು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend