ಮನೋವಿಕಾಸಕ್ಕೆ ಕಲಾ ಚಟವಟಿಕೆಗಳು ಸ್ಫೂರ್ತಿ-ಜಿ, ಎಸ್, ಗಿರೀಶ್
ಕೂಡ್ಲಿಗಿ : ಮಕ್ಕಳು ಸದಾ ಆಟ ಪಾಠ ಗಳಿಗೆ ಮಾತ್ರ ಸೀಮಿತವಾಗದೆ ನಮ್ಮ ನಾಡಿನ ಸಂಸ್ಕತಿಯನ್ನು ಶ್ರೀಮಂತ ಗೊಳಿಸಿದ ಕಲಾತ್ಮಕ ಚಟವಟಿಕೆಗಳನ್ನು ಮಕ್ಕಳು ಅನುಸರಿಸಿದಾಗ ಮನಸ್ಸು ಸದಾ ಸಂತೋಷದಿಂದ ವಿಕಸನ ಗೊಳ್ಳುತ್ತದೆ.ಎಂದು ಸ್ಪಂದನ ಸಂಸ್ಥೆಯ ಅಧ್ಯಕ್ಷ ಜಿ, ಎಸ್, ಗಿರೀಶ್ ನುಡಿದರು.
ಅವರು ಕೂಡ್ಲಿಗಿ ಪಟ್ಟಣದ ಮೇನ್ ಬಾಯ್ಸ್ ಸ್ಕೂಲ್ ಚಂದ್ರಶೇಖರ್ ಆಜಾದ್ ರಂಗಮಂದಿರದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ ವಿಜಯನಗರ, ಮಹಿಳಾ ಮತ್ತು ಮಕ್ಕಳ ಇಲಾಖೆ ವಿಜಯನಗರ ಹಾಗೂ ಸ್ಪಂದನ ಸಮಾಜ ಸೇವಾ ಸಾಂಸ್ಕೃತಿಕ ಸಂಸ್ಥೆ ಕೂಡ್ಲಿಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತೋತ್ಸವ ಭರತನಾಟ್ಯ, ಹಾಗೂ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮ ವನ್ನು ಎಸ್, ಜಿ, ಶಿವಾನಂದ್ ಶಿಕ್ಷಕರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶಾರದಾ ಬಾಯಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ದುರುಗೇಶ್ ಶ್ರೀಮತಿ ಅಂಬಿಕಾ ಗಿರೀಶ್ ವೀಣಾ ಪಾಟೀಲ್ ಬಿ, ಕೆ ಮಹಾಲಕ್ಷ್ಮೀ ಶಿಕ್ಷಕರಾದ ಕೊಟ್ರೇಶ್ ಬಿ,ಮಲ್ಲಿಕಾರ್ಜುನ ಟಿ, ಜಿ,ಪಟ್ಟಣಶೆಟ್ಟಿ ಕಾವ್ಯಶ್ರೀ ಮಂಜುನಾಥ ನಾಗರಾಜ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಯು,ನಾಗರಾಜ್ ಸಿದ್ದಪ್ಪ ಮಹೇಶ್ ಸೇರಿದಂತೆ ತಾಲೂಕಿನ ವಿವಿಧ ಆಯ್ದ ಶಾಲಾ ಮಕ್ಕಳು ಉಪಸ್ಥಿತರಿದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
