ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಗ್ರಾಮ ಘಟಕ ಉದ್ಘಾಟನೆ,..!!!

ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಗ್ರಾಮ ಘಟಕ ಉದ್ಘಾಟನೆ,,,,, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ಇಂದು ನಡೆದ ರಾಜ್ಯ ಕಟ್ಟಡ ಇತರ ನಿರ್ಮಾಣ ಕಾರ್ಮಿಕರ ಗ್ರಾಮ ಘಟಕವನ್ನು ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ನೂತನ ಗ್ರಾಮ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಹಾಗೂ ಅಧ್ಯಕ್ಷ, ಉಪಾಧ್ಯಕ್ಷರನ್ನು ಘೋಷಿಸಿದರು. ನೂತನ ಅಧ್ಯಕ್ಷರಾಗಿ ಕೆ. ಅಜ್ಜಪ್ಪಾಚಾರಿ. ಉಪಾಧ್ಯಕ್ಷರಾಗಿ ಬಿ.ರವಿಕುಮಾರ್, ಖಜಾಂಚಿಯಾಗಿ ವೈ ದೇವೇಂದ್ರಪ್ಪ ಆಯ್ಕೆಯಾದರು. ಸದಸ್ಯರಾಗಿ ಕೆ ಪ್ರದೀಪ್, ಎಚ್ .ಕೋಟೇಶ್, ಕೆ ಶ್ರೀಧರಮೂರ್ತಿ, ಜಿ .ಗೋಪಿನಾಥ, ಎ. ಜಿ. ಕರೇಗೌಡ, ಎಚ್. ತಿಪ್ಪೇಸ್ವಾಮಿ, ಎಂ. ಜಿ. ಗಣೇಶ್, ಆರ್.ಎನ್. ಬಸವರಾಜ್, ಎಂ. ರುದ್ರೇಶ್, ನಾಗರಾಜ್ (ಕೊಟಗಿ). ಕೆ. ಎಮ್ .ಕೊಟ್ರಯ್ಯ, ಸಿ. ಕರಿಯಪ್ಪ, ಎಚ್. ಸಿದ್ದಪ್ಪ, ಕೆ . ಕೆ .ಪ್ರವೀಣ, ಕೆ.ಜಗದೀಶ್, ಎಚ್‌.ಬಿ. ಚೌಡೇಶ್, ಬಸವರಾಜ್, ಕೆ. ವೀರಾಚಾರಿ, ಡಿ .ಎನ್ ಸಂತೋಷ್, ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ. ಸಿ ಐ ಟಿ ಯು ನ ಜಿಲ್ಲಾ ಕಾರ್ಯದರ್ಶಿ ಗುನ್ನಳ್ಳಿ ರಾಘವೇಂದ್ರ ರವರು ಪ್ರತಿಯೊಬ್ಬರು ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರು ಕಾರ್ಮಿಕರ ಕಾರ್ಡುಗಳನ್ನು ತಪ್ಪದೆ ಮಾಡಿಸಿಕೊಳ್ಳಬೇಕು, ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜದಲ್ಲಿ ಉತ್ತಮ ಜೀವನವನ್ನು ನಡೆಸುವ ಮೂಲಕ ನಾವುಗಳು ಮಾದರಿಯಾಗಬೇಕು ಎಂದು ತಿಳಿಸಿದರು. ಇನ್ನೋರ್ವ ಮುಖಂಡರಾದ,ವಕೀಲರಾದ ವಿರೂಪಾಕ್ಷಪ್ಪನವರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು ಇದೇ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಕೆ. ಕರಿಯಪ್ಪ, ಹಾಗೂ ಗ್ರಾಮದ ಮುಖಂಡರುಗಳಾದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮೂಗಮ್ಮ ಮುನಿಯಪ್ಪ, ಉಪಾಧ್ಯಕ್ಷ ಶೇಖರಪ್ಪ, ಎಸ್. ಶೇಖರಪ್ಪ, ಸದಸ್ಯರಾದ ಸಿ.ಮಹಾಲಿಂಗಪ್ಪ ಸರ್, ಹಡಪದ ಸಮಾಜದ ಜಿಲ್ಲಾ ಕಾರ್ಯದರ್ಶಿ ಎಚ್. ಕೋಟೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend