ಗಣಿತ ಕಲಿಕಾ ಆಂದೋಲನಕ್ಕೆ ಚಾಲನೆ…!!!

ಗಣಿತ ಕಲಿಕಾ ಆಂದೋಲನಕ್ಕೆ ಚಾಲನೆ,,,, ಜಿಲ್ಲಾ ಪಂಚಾಯತ್ ವಿಜಯನಗರ, ತಾಲೂಕು ಪಂಚಾಯತ್ ಕೂಡ್ಲಿಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಮುದಾಯ ಹಾಗೂ ಅಕ್ಷರ ಫೌಂಡೇಶನ್ ಗ್ರಾಮ ಪಂಚಾಯಿತಿ ಬಣವಿಕಲ್ಲು ಇವರುಗಳ ಸಮುಕ್ತಾಷರದಲ್ಲಿ ಗಣಿತ ಕಲಿಕಾ ಆಂದೋಲನ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಕಾರ್ಯಕ್ರಮವು ದಿನಾಂಕ 9.12.2022ರಂದು ಬಣವಿಕಲ್ಲು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ.ರೇಣುಕಾಚಾರಿ ಇವರು ಗಿಡಕ್ಕೆ ನೀರರೆಯುವುದರ ಮೂಲಕ ಚಾಲನೆ ನೀಡಿದರು ಇದೇ ಸಂದರ್ಭದಲ್ಲಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಾದ ಎಂ. ಬಿ ಅಯ್ಯನಹಳ್ಳಿ, ಉಲ್ಲಾನಹಳ್ಳಿ, ಚಿಕ್ಕೊಬನಹಳ್ಳಿ, ಕಂಚೋಬನಹಳ್ಳಿಯ ಐದರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ ಮೂಲಕ ಸ್ಪರ್ಧಾ ಪರೀಕ್ಷೆ ನಡೆಸಿದರು. ಇನ್ನು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಬಿ.ಶಾಂತಕುಮಾರಿ, ಹಾಗೂ ಬಣವಿಕಲ್ಲು ಶಾಲೆಯ ಸಹ ಶಿಕ್ಷಕರು ಹಾಗೂ ಶಿಕ್ಷಕಿಯರು, ಮತ್ತು ಎಂ.ಬಿ. ಅಯ್ಯನಹಳ್ಳಿಯ ಶಾಲೆಯ ಶಿಕ್ಷಕರು, ಉಲ್ಲಾನಹಳ್ಳಿ, ಚಿಕ್ಕೋಬನಹಳ್ಳಿ, ಕಂಚೋಬನಹಳ್ಳಿ ಶಾಲೆಗಳ ಶಿಕ್ಷಕರಗಳು ಹಾಗೂ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರು ಮತ್ತು ಪಂಚಾಯಿತಿ ಸಿಬ್ಬಂದಿಯವರು ಹಾಜರಿದ್ದರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend