ಗ್ರಾಮ ಸ್ವರಾಜ್ಯಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯರ ಬೆಂಗಳೂರು ಚಲೋ…. ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಕೆ ಮುರಳಿರಾಜ್ ನಾಯ್ಕ ರವರ ನೇತೃತ್ವದಲ್ಲಿ ಇಂದು ತಾಲೂಕಿನ ಗ್ರಾಮ ಪಂಚಾಯಿತಿಗಳಾದ ಬಣವಿಕಲ್ಲು, ಸೂಲದಹಳ್ಳಿ, ಹಾರಕಬಾವಿ, ಗುಂಡುಮುಣುಗು, ಮಾಕನಡುಕು,ಚಿರತಗುಂಡು (ಚಿಕ್ಕಜೋಗಿಹಳ್ಳಿ). ಪೂಜಾರಹಳ್ಳಿ, ಆಲೂರು ಪಂಚಾಯಿತಿಗಳಿಗೆ ಭೇಟಿಕೊಟ್ಟು ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಹೊರಡುವ ಸಂಬಂಧ ಈಗಾಗಲೇ ನಮ್ಮ ತಾಲೂಕಿನ ಹಲವು ಪಂಚಾಯಿತಿಗಳಿಗೆ ಭೇಟಿಕೊಟ್ಟು ಗ್ರಾಮ ಪಂಚಾಯಿತಿ ಸದಸ್ಯರ ಬೇಡಿಕೆಗಳನ್ನು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಸದಸ್ಯರ ಒಕ್ಕೂಟವುರಚನೆಯಾಗಿದೆ. ನಮ್ಮ ಹಲವು ಬೇಡಿಕೆಗಳಿಗ ಒತ್ತಾಯಿಸಿ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಹೊರಡುವುದಕ್ಕೆ ಸಜ್ಜಾಗಿದ್ದೇವೆ ಎಂದು ತಾಲೂಕು ಅಧ್ಯಕ್ಷ ಕೆ.ಮುರಳೀರಾಜ್ ನಾಯ್ಕ ತಿಳಿಸಿದರು, ಇದೇ ಸಂದರ್ಭದಲ್ಲಿ ಬಣವಿಕಲ್ಲು, ಸೂಲದಹಳ್ಳಿ, ಹಾರಕಬಾವಿ, ಗುಂಡುಮುಣುಗು, ಮಾಕನಡುಕು (ಚಿಕ್ಕಜೋಗಿಹಳ್ಳಿ). ಪೂಜಾರಹಳ್ಳಿ, ಚಿರತಗುಂಡು, ಆಲೂರು ಪಂಚಾಯಿತಿಗಳ ಸದಸ್ಯರುಗಳು ಹಾಜರಿದ್ದರು…

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
