ನಗರದಲ್ಲಿ ಶಾಸಕರ ಬೆಂಬಲಿಗರಿಂದ ಸಿಸಿ ರಸ್ತೆ ಕಳಪೆ ಕಾಮಗಾರಿ – ಬಾಬುಗೌಡ ಬಾದರ್ಲಿ.
ಸಿಂಧನೂರು:ನ.25.ನಗರದ ಗಂಗಾವತಿ ರಸ್ತೆಯ 19 ನೇ ವಾರ್ಡಿನ ಸ್ವರಾಜ್ ಟ್ರಾಕ್ಟರ್ ಶೋರಂ ಎದುರಿಗೆ ಮಾಡಿರುವ ಸಿಸಿ ರಸ್ತೆಯು ಸಂಪೂರ್ಣ ಕಳಪೆಯಾಗಿದ್ದು, ಮಾಡಿದ 4 ತಿಂಗಳುಗಳಲ್ಲಿ ಕಿತ್ತು ಹೋಗಿದೆ.ಶಾಸಕ ವೆಂಕಟರಾವ್ ನಾಡಗೌಡರು ತಮ್ಮ ಸಂಭಂಧಿಕರಿಗೆ ಗುತ್ತಿಗೆ ಕೊಟ್ಟು ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳುತ್ತಿದ್ದಾರೆ ಅವರ ನಡೆ ಸಾದನೆ ಕಡೆ ಅಲ್ಲಾ ಫರ್ಸೆಂಟೇಜಿನ ಕಡೆ ಎಂದು ಬಾಬುಗೌಡ ಬಾದಾರ್ಲಿ ಆರೋಪಿಸಿದರು.
ತಮ್ಮ ಸಂಬಂಧಿಕರಿಗೆ ಗುತ್ತಿಗೆ ಕೊಟ್ಟಿದ್ದು ಸುಳ್ಳು ಎಂದು ಹೇಳುವ ನಾಡಗೌಡರೇ ಈ ರಸ್ತೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಕರಿಬಸ್ಸಪ್ಪ ಎಸ್ ಪಾಟೀಲ್ ಮುದ್ದೇಬಿಹಾಳ ತಮ್ಮ ಸಂಭಂದಿಕರಲ್ಲವೇ ಎಂಬುದನ್ನು ಬಹಿರಂಗ ಪಡಿಸಲಿ ಎಂದು ಸವಾಲೆಸೆದರು.
ನಗರಸಭೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ 48% ಪರ್ಸೆಂಟೇಜ್ ತೆಗೆದುಕೊಂಡರೆ ಕೆಲಸಗಳನ್ನು ಗುಣಮಟ್ಟದಿಂದ ಮಾಡಲು ಸಾಧ್ಯವೇ ಎಂದು ಶಾಸಕರನ್ನು ಪ್ರಶ್ನಿಸಿದರು. ಇಷ್ಟೊಂದು ಕಳಪೆ ಕಾಮಗಾರಿ ನಡೆದಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾಮಗಾರಿ ಸರಿಪಡಿಸಬೇಕು ಹಾಗೂ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರ ಲೈಸೆನ್ಸ್ ಕಪ್ಪುಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು. ಹಾಗೂ ನಗರಸಭೆ ಸದಸ್ಯರೆಲ್ಲರೂ ನಾಡಗೌಡರು ನಗರದಲ್ಲಿ ಮಾಡಿರುವ ಕಳಪೆ ಕಾಮಗಾರಿ ಬಗ್ಗೆ ದಾಖಲೆ ಸಮೇತ ಚರ್ಚೆಗೆ ನಾವು ಸಿದ್ದರಿದ್ದೇವೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಪಾಟಿಲ್, ಬಾಬುಗೌಡ ಬಾದರ್ಲಿ, ಮುರ್ತುಜಾ ಹುಸೇನ್, ಎಚ್. ಭಾಷಾ, ಬಸವರಾಜ್ ಹಿರೇಗೌಡ, ಭೀಮನಗೌಡ ಗೊರೆಬಾಳ್, ಅಮರೇಗೌಡ ಬೊಮ್ಮನಾಳ ಶೇಖರಪ್ಪ ಗಿಣಿವಾರ, ಆಲಂ ಬಾಷಾ ಆನಂದ್ ಬೊಮ್ಮನಾಳ ಬಸವರಾಜ್ ಗೊರೇಬಾಳ ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
