ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ .ವಿಶ್ವಕರ್ಮ .ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು . ಜಿಲ್ಲಾ ಪಂಚಾಯತ್ ಹಾಗೂ ಕಾರ್ಮಿಕ ಇಲಾಖೆ ವಿಜಯನಗರ ಜಿಲ್ಲೆ ಸಹಯೋಗದೊಂದಿಗೆ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು ಶಾಸಕರು ಭೀಮಾನಾಯ್ಕ್ ಅವರು ಮಾತನಾಡಿ.ಈ ಕಟ್ಟಡ ಕಾರ್ಮಿಕರು ಶ್ರಮಿಕರಾಗಿದ್ದಾರೆ ಉರಿಬಿಸಿಲಿನಲ್ಲಿ ಕಾರ್ಯನಿರ್ವಹಿಸುವ ದಣಿವರಿಯದಂತೆ ಶ್ರಮಪಡುವ ಸಮುದಾಯ ಇದಾಗಿದೆ .ಅವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕೆಲಸವನ್ನು ಅರಸಿ ಹತ್ತಾರು ಕಿಲೋಮೀಟರ್ ದೂರ ಪ್ರಯಾಣ ಬೆಳೆಸಿ ಹಳಸಿದ ಅನ್ನ ತಿಂದು ಕಾರ್ಯನಿರ್ವಹಿಸಿದ್ದು ಸತ್ಯಸಂಗತಿಯಾಗಿದೆ ಎಷ್ಟೇ ಹಣ ಸಂಪಾದನೆ ಮಾಡಿದ ವ್ಯಕ್ತಿಯಾಗಲಿ ತನ್ನ ಮನೆಯನು ತನು ನಿರ್ಮಿಸಿ ಮಾಡಿಕೊಳ್ಳಲಾರ ಅದಕ್ಕೆ ಕಾರ್ಮಿಕರು ಬೇಕೇಬೇಕು ಗ್ರಾಮೀಣ ಪ್ರದೇಶಗಳು ಕೇವಲ 3ಅಂತಸ್ತಿನ ಕಟ್ಟಡಕ್ಕೆ ಸೀಮಿತವಾಗಿರಬಹುದು ಏನೇ ಆದರೂ ನಗರ ಪ್ರದೇಶಗಳಲ್ಲಿ ನಿರ್ಮಿಸುವ ಹತ್ತಾರು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸುತ್ತಿರುವ ಕಾರ್ಮಿಕರು ಪ್ರಾಣ ಕಳೆದುಕೊಂಡರೆ ಯಾರು ಜವಾಬ್ದಾರರು ಅದಕ್ಕಾಗಿ ಅವರಿಗೆ ಸರಕಾರದ ಸೌಲಭ್ಯ ಸಮರ್ಪಕವಾಗಿ ಸಿಗಬೇಕು ಪ್ರಸ್ತುತ ಪಿಂಚಣಿ ಹತ್ತು ಸಾವಿರಕ್ಕೆ ಹೆಚ್ಚಿಸುವಂತೆ ಚಳಿಗಾಲದ ಅಧಿವೇಶನದಲ್ಲಿ ಅವರು ಪಿಂಚಣಿ ಹೆಚ್ಚಳದ ಕೂಗಿಗೆ ಧ್ವನಿಯಾಗವೆ .2017ರಲ್ಲಿ ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕ ಇಲಾಖೆ ಸಚಿವರಾಗಿದ್ದಾಗ ಕಾರ್ಮಿಕರಿಗೆ ನೀಡುವ ಸವಲತ್ತುಗಳನ್ನು ಈಗ ದೊರೆಯುತ್ತಿವೆ ಈಗ ನೋಂದಾಯಿತ ಕಾರ್ಮಿಕರಿಗೆ 665 ಕಿಟ ಗಳನ್ನು ನಡಲಾಗುತ್ತಿದೆ ಅರ್ಹ ಫಲಾನುಭವಿಗಳಿಗೆ ತಪ್ಪಿದರೆ ಶೀಘ್ರವೇ ನೀಡಲಾಗುವುದು ಎಂದರು .ಕಟ್ಟಡ ಕಾರ್ಮಿಕರು ಶ್ರಮ ಜೀವಿಗಳಾಗಿದ್ದಾರೆ ಶೀಘ್ರವೇ ಪಟ್ಟಣದಲ್ಲೊಂದು ನಿವೇಶನ ಗುರುತಿಸಿ ನೋಂದಾಯಿತ ಕಟ್ಟಡ ಕಾರ್ಮಿಕರ ಭವನ ನಿರ್ಮಾಣ ಮಾಡಿಕೊಡಲಾಗುವುದು ಎಂದು ಶಾಸಕ ಎಸ್ ಭೀಮಾನಾಯ್ಕ ಹೇಳಿದರು .ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಮಿಕ ಅಧ್ಯಕ್ಷ ಯು ಬಾಬುವಲಿ ಪುರಸಭೆ ಸದಸ್ಯ ಮರಿ ರಾಮಣ್ಣ ಮುಖಂಡರಾದ ಅಕ್ಕಿ ತೋಟೇಶ್ .ಹುಚ್ಚಪ್ಪ .ಪುರಸಭೆ ಸದಸ್ಯರು ಹುಡೇದ ಗುರುಬಸವರಾಜ ದೇವಿಂದ್ರಪ್ಪ ಡಿಶ್ ಮಂಜುನಾಥ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
