;

ಕೂಡ್ಲಿಗಿ:ವೃದ್ಧರಿಗೆ ಬಾಳಿಗೆ ಚೈತನ್ಯ ನೀಡದ ಪುನಶ್ಚೇತನ ವೃದ್ಧಾಶ್ರಮ…!!!

ಕೂಡ್ಲಿಗಿ:ವೃದ್ಧರಿಗೆ ಬಾಳಿಗೆ ಚೈತನ್ಯ ನೀಡದ ಪುನಶ್ಚೇತನ ವೃದ್ಧಾಶ್ರಮ..
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, ಸಂಡೂರು ರಸ್ತೆಯಲ್ಲೊಂದು ಪುನಶ್ಚೇತನ ಅನಾಥ ವೃದ್ಧಾಶ್ರಮವಿದೆ. ಇದು ಹೆಸರಿಗೆ ಮಾತ್ರ ವೃದ್ಡಾಶ್ರಮವಾಗಿದೆ, ದಾಖಲುಗಳಿಗೆ ಅಂಕೆ ಸಂಖ್ಯೆ ತೋರಿಸಲು ಮಾತ್ರ, ತಾವು ಸರ್ಕಾರದ ಅನುದಾನ ಪಡೆಯಲಿಕ್ಕಾಗಿ ಅನಾಥ ವೃದ್ಧರನ್ನು ಬಳಸಿಕೊಳ್ಳಲಾಗುತ್ತಿದೆ. ಎಂಬ ಗಂಭೀರ ಆರೋಪವನ್ನು ಕೆಲ ಪ್ರಜ್ಞಾವಂತರು ಮಾಡುತ್ತಿದ್ದಾರೆ. ಕಾರಣ ಅದಕ್ಕೆ ಪುಷ್ಠಿ ನೀಡುವಂತಹ ಸನ್ನಿವೇಶಗಳು ವೃದ್ಧಾಶ್ರಮದಲ್ಲಿ ಕಾಣಸಿಗುತ್ತವೆ. ಮತ್ತು ನಿರ್ವಹಣೆ ಅತ್ಯಂತ ಕೀಳು ಮಟ್ಟದಲ್ಲಿದೆ ಎಂದು ಕೆಲವರ ದೂರಾಗಿದೆ, ಆಶ್ರಮದ ಬಾಗಿಲಲ್ಲಿಯೇ ಕೆಲ ದಿನಗಳಿಂದ ಅನಾಥ ವೃದ್ಧ ಹೆಣ್ಣುಮಗಳು ಪ್ರಜ್ಞೆ ತಪ್ಪಿರುವ ಸ್ಥಿತಿಯಲ್ಲಿದ್ದರೂ ಗಮನಿಸಿಲ್ಲ ಎಂದು ಕೆಲ ಸಂಘಟನಕಾರರು ದೂರಿದ್ದಾರೆ. ಅಪರಿಚಿತರ್ಯಾರೋ ವೃದ್ಧಾಶ್ರಮದ ಬಾಗಿಲ ಮುಂದೆ ಒರ್ವ ವೃದ್ಧೆಯನ್ನು ಬಿಟ್ಟು ಹೋಗಿದ್ದು, ಪುನಶ್ಚೇತನ ವೃದ್ಧಾಶ್ರಮ ಬಾಗಿಲ ಮುಂದೆ ಅನಾಥ ವೃದ್ಧೆಯೋರ್ವಳು, ಆಹಾರ ನೀರಿಲ್ಲದ ಕಾರಣ ಏಳಲಾಗದ ದುಸ್ಥಿತಿಯಲ್ಲಿ ಅಸ್ವಸ್ಥಳಾಗಿದ್ದಳು. ಎರಡು ರಾತ್ರಿ ಒಂದು ಹಗಲು ಈ ವೃದ್ಧಾಶ್ರಮದ ಬಾಗಿಲ ಮಂದೆ ಮಲಗಿರುದ್ದು,ವೃದ್ಧಾಶ್ರಮದವರು ಕಂಡೂ ಕಾಣದಂತಿದ್ದು. ಇದು ಅವರು ಅಮಾನವಿತೆಗೆ ಸಾಕ್ಷಿಯಾಗಿದೆ ಎಂದು ಪ್ರಜ್ಞಾವಂತರು ಆಶ್ರಮದ ನಿರ್ಲಕ್ಷ್ಯ ಧೋರಣೆಯನ್ನ ಖಂಡಿಸಿದ್ದಾರೆ. ಆಶ್ರಮದ ವ್ಯವಸ್ಥಾಪಕರಾಗಲಿ ಹಾಗೂ ವಯಸ್ಸಾದ ವೃದ್ಧರನ್ನು ನೋಡಿಕೊಳ್ಳುವ ಮೇಲ್ವಿಚಾರಕರಾಗಲಿ, ಬಾಗಿಲ ಮುಂಭಾಗದಲ್ಲಿ ಅನಾಥ ವೃದ್ಧೆ ಮಲಗಿರುವ ವಿಚಾರವನ್ನು ವೀರೇಶ್ ಅನ್ನೋ ವ್ಯಕ್ತಿಗೆ ಅಡುಗೆ ಸಹಾಯಕರು ತಿಳಿಸಿರುತ್ತಾರೆ, ಇದನ್ನು ಆಶ್ರಮದವಾಸಿಗಳೇ ಖಚಿತಪಡಿಸಿದ್ದಾರೆ. ಆದರೂ ಸಹ ತಮಗೆ ಏನು ಸಂಬಂಧವಿಲ್ಲ ಎನ್ನುವ ಹಾಗೆ ಬಿದ್ದಿರುವುದು ನೋಡಿದರೂ ಕೂಡ, ಕಾಣದ ಹಾಗೆ ಇರುವುದನ್ನು ಕಂಡು ಸಾರ್ವಜನಿಕರು ಹಾಗೂ ಆಮ್ ಆದ್ಮಿ ಪಕ್ಷದ ಯುವಕರು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸುದ್ದಿ ತಿಳಿದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮಹಿಳಾ ಸಿಬ್ಬಂದಿ, ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅನಾಥ ವೃದ್ಧೆಯ ವಿಳಾಸ ಹಾಗೂ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ, ತೀರ ಅಸ್ವಸ್ಥತೆಯಿಂದ ನರಳುತಿದ್ದ ಅನಾಥ ವೃದ್ಧೆ ಮಾತನಾಡಲೂ ಶಕ್ತಿ ಇಲ್ಲದೇ, ನನಗೆ ಯಾರೂ ಇಲ್ಲ..ನನ್ನನ್ನು ಯಾರೋ… ಇಲ್ಲಿ ಬಿಟ್ಟು ಹೋದರು. ಅನ್ನೋ ಮಾತು ಮಾತ್ರ ಹೇಳುತ್ತಿದ್ದಾಳಷ್ಟೇ. ಹಾಗೆ ನಿನಗೆ ಮಕ್ಕಳ ಇದ್ದಾರೋ ಅಥವಾ ಇಲಾವೋ ಅಂತ ಅಧಿಕಾರಿ ಕೇಳಿದಾಗ, ನನಗ್ಯಾರು ಇಲ್ಲ ಎಂದು ಆ ಅನಾಥ ವೃದ್ಧೆ ತಿಳಿಸಿರುತ್ತಾಳೆ. ಅನಾಥ ವೃದ್ಧೆಯನ್ನ ವಿಚಾರಿಸಿದ ಸಿಡಿಪಿಓ ಮಾತನಾಡಿ, ಈ ಅಜ್ಜಿಯನ್ನು ಇಲ್ಲಿಯೇ ಇರಿಸಿಕೊಂಡು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುವುದು. ಅಗತ್ಯವಾದರೆ ಜಿಲ್ಲಾ ವೃದ್ಧಾಶ್ರಮಕ್ಕೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ. ಪುನಶ್ಚೇತನ ವೃದ್ದಾಶ್ರಮದಲ್ಲಿ ಏಳು ಜನ ಅನಾಥವೃದ್ಧರಿದ್ದು, ಆಶ್ರಮ ಅವ್ಯವಸ್ಥೆಗಳ ಕೂಪವಾಗಿದೆ ಹಾಗೂ ಪಾಳುಬಿದ್ದು ಸಮಸ್ಯೆಗಳ ಕೊಂಪೆಯಾಗಿದೆಯಾಗಿದೆ ಎಂದು ಕೆಲ ಸಂಘಟನೆಕಾರರು ದೂರಿದ್ದಾರೆ. ಆಶ್ರಮಕ್ಕೆ ಭೇಟಿ ನೀಡಿದ ಆಮ್ ಆದ್ಮಿ ಪಕ್ಷದ ಕೆಲ ಕಾರ್ಯಕರ್ತರು ಆಶ್ರಮದ ಮುಂಭಾಗದಲ್ಲಿ, ಹಸುವಿನ ಸಗಣಿ ತಿಪ್ಪೆ ಹಾಕಿರುವುದು ಹಾಗೂ ವಿಪರೀತ ಸೊಳ್ಳೆಗಳು, ಹಾಗೂ ಇನ್ನಿತರ ಸಮಸ್ಯೆಗಳನ್ನು ಕಂಡು ವ್ಯವಸ್ಥಾಪಕರನ್ನ ತೀವ್ರ ತರಾಟೆಗೆ ತೆಗೆದು ಕೊಂಡಿದ್ದಾರೆ. ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ವೃದ್ಧಾಶ್ರಮ ನಡೆಸುತ್ತೇವೆಂದು ತೋರ್ಪಡಿಸುವುದು ಮಾತ್ರವಲ್ಲ. ವೃದ್ಧರಿಗೆ ಉತ್ತಮವಾದ ವಾತಾವರಣದೊಂದಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ವೃದ್ಧರನ್ನು ಮೇಲ್ವಿಚಾರಕರು ತಮ್ಮ ಸ್ವಂತ ತಂದೆ ತಾಯಿಗಳಂತೆ, ಸ್ವಯಂ ಕಾಳಜಿಯಿಂದ ನೋಡಿಕೊಳ್ಳಬೇಕೆಂದು ಸಾರ್ವಜನಿಕರು ಹಾಗೂ ನಾಗರೀಕರು ಒತ್ತಾಯಿಸಿದ್ದಾರೆ..

ವರದಿ.ಜಿ.ವೃಷಭೇಂದ್ರ ಕೂಡ್ಲಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;