ಕೂಡ್ಲಿಗಿ:ದಲಿತ ಯುವಕ ಅಮೆಜಾನ್ ಕಂಪನಿ ಕಾರ್ಮಿಕನ ಮೇಲೆ ಶಾಸಕರ ಆಪ್ತನಿಂದ ಹಲ್ಯೆ.!? ಆರೋಪ ದೂರು ದಾಖಲು..
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಅಮೆಜಾನ್ ಕಚೇರಿಯಲ್ಲಿ, ಕೆಲಸ ಮಾಡುವ ಪರಿಶಿಷ್ಟ ಪಂಗಡ( ST) ಸಮುದಾಯದ ಬಡ ಕುಟುಂಬದ ಯುವಕನಾದ ನಾಗರಾಜ್ ನಿರ್ಕಲಪ್ಪನವರ್ ಮೇಲೆ . ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ರವರ ಬಲಗೈ ಬಂಟ ನೆಂದು ತನ್ನನ್ನ ತಾನೇ ಗುರುತಿಸಿಕೊಳ್ಳೊ ಮೂಲಕ.

ಸ್ವಯಂ ಘೋಷಿತ ವೀರಶೈವ ಮುಖಂಡ ನೆಂದು ಗುರುತಿಸಿಕೊಂಡು, ತಾಲೂಕು ಹಾಗೂ ನೆರೆ ಹೊರೆ ತಾಲೂಕಿನಾಧ್ಯಂತ ನಿತ್ಯ ಸಾವಿರಾರು ಲೀಟರ್ ಮದ್ಯ ಬೈಕ್ ಗಳ ಮೂಲಕ ಸಾಗಿಸಿ ಮಾರಾಟದಲ್ಲಿ ತೊಡಗಿಕೊಂಡು ವೈನ್ ಲೋಕದ ಕಿಂಗ್ ಪಿನ್ ಎಂದೆ ಗುರುತಿಸಿ ಕೊಂಡಿರಿವ ಟಿ.ಜಿ.ಮಲ್ಲಿ ಕಾರ್ಜುನನ ನಿಜ ಬಣ್ಣ ಇಂದು ಬಯಲಾಗಿದೆ, ಈತ ಹಾಗೂ ಈತನ ಸಹೋದರ ನಾಗರಾಜ ಗೋಮುಖ ವ್ಯಾಘ್ರಗಳಾಗಿದ್ದಾರೆ ಎಂದು ಕೆಲ ದಲಿತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರು ಎಸ್ಸಿ ಎಸ್ಟಿ ಯುವಕರನ್ನು ತನ್ನ ವೈನ್ ನ್ನು ಅಕ್ರಮ ಸಾಗಾಣಿಕೆ ಮಾಡಲು ದುರುಪಯೋಗಪಡಿಸಿಕೊಂಡು ಅವರಿಗೆ ಬಿಡಿಗಾಸು ಕೊಟ್ಟು ತಾನು ಮಾತ್ರ ಆರ್ಗರ್ಭ ಶ್ರೀಮಂತನಾಗಲು ದಲಿತ ಯುವಕರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ.
ಎಂಬ ಗಂಭೀರ ಆರೋಪವಿದೆ. ತಾಲೂಕು ಹಾಗೂ ನೆರೆ ಹೊರೆ ತಾಲೂಕುನಾಧ್ಯಂತ ತನ್ನ ವೈನ್ ಅಕ್ರಮ ವ್ಯಾಪಾರ ಮಾಡೋ ಮೂಲಕ ಗುರುತಿಸಿಕೊಂಡಿದ್ದ, ಅಕ್ರಮ ವ್ಯಾಪಾರಕ್ಕಾಗಿ ಶಾಸಕರ ಹೆಸರು ದುರುಪಯೋಗ ಮಾಡಿಕೊಳ್ಳುತ್ತಿದ್ದನೆಂಬ ಆರೋಪ ಕೇಳಿಬಂದೆ. ಪಟ್ಟಣದ ಅಶ್ಟಮೇದ ಗ್ರೂಪ್ಸ್ ಮಾಲೀಕನಾದ ಮಲ್ಲಿಕಾರ್ಜುನ್ ಗೌಡ, ಹಾಗೂ ಆತನ ಸಹೋದರ ನಾಗರಾಜ್ ಗೌಡ ತಮ್ಮ ಸಹಚರರೊಡಗೂಡಿ. ಎಲ್ಲರೂ ಸೇರಿ ಅಮಾಯಕ ದಲಿತವಯುವಕ ನಾಗರಾಜನ ನಿರ್ಕಲ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆಂದು ಆರೋಪ ಕೇಳಿಬಂದಿದೆ. ಸಂಬಂಧಿಸಿದಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿರುವ ಹಾಗೂ ಕಚೇರಿ ಅತಿಕ್ರಮ ಪ್ರವೇಶ, ಹಲ್ಲೆ ಮತ್ತು ಎಸ್ಟಿ ಎಸ್ಸಿ ಕಾಯ್ದೆಯಡಿ ಜಾತಿ ನಿಂದನೆ ಆರೋಪದ ಪ್ರಖರಣ ದಾಖಲಾಗಿದೆ. ಹಲ್ಲೆಗೊಳಗಾದ ನಾಗರಾಜ ಚಿಕಿತ್ಸೆ ಪಡೆಯುತ್ತಿದ್ದಾನೆ, ಹಲ್ಲೆ ಮಾಡಿರುವ ಟಿ.ಜಿ.ಮಲ್ಲಿಕಾರ್ಜುನ ಗೌಡ್ರು ಹಾಗೂ ಸಹೋದರ ಶಿಕ್ಷಕ ಟಿ.ಜಿ.ನಾಗರಾಜ ಗೌಡ ಅನಾರೋಗ್ಯದ ನೆಪ ವಡ್ಡಿದ್ದಾರೆಂದು ಕೇಳಿಬಂದಿದೆ. ಇದೆಲ್ಲಾ ನಾಟಕವೆಂದು ಪ್ರಕರಣದಡಿ ಬಂಧನಕ್ಕೊಳಗಾಗೋ ಇದ್ದು, ಬಂಧನ ಭೀತಿಯ ಕಾರಣ ತಪ್ಪಿಸಿಕೊಳ್ಳೋ ನಾಟಕವಾಡುತ್ತಿದ್ದಾರೆಂದು ಆರೋಪ ಕೇಳಿಬಂದಿದೆ. ವೀರಶೈ ಸಮುದಾಯದ ಹೆಸರು ಹೇಳಿಕೊಂಡು ಶಾಸಕರ ಹತ್ತಿರ ಗುರುತಿಸಿಕೊಳ್ಳೋ ಟಿ.ಜಿ.ಮಲ್ಲಿಕಾರ್ಜುನಗೌಡ, ಸಮುದಾಯಕ್ಕೆ ಮಾಡಿರೋ ಸೇವೆ ಶೂನ್ಯ ಇಂತಹ ಪಾಖಂಡಿಯನ್ನ ಹತ್ತಿರ ಇಟ್ಟುಕೊಂಡಿರುವ ಹಿರಿಯ ಶಾಸಕರ ಪ್ರತಿಷ್ಠೆ ಧಕ್ಕೆಯಾಗೋದಂತು ಖಾಯಂ ಅದರ ಪ್ರಭಾವ ಮುಂಬರುವ ಚುನಾವಣೆಯಲ್ಲಿ ಫಲಿತಾಂಶ ನೀಡಲಿದೆ ಎಂದು ಹಿರಿಯ ನಾಗರೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, ಕೂಡ್ಲಿಗಿ ಉಪ ಅಧೀಕ್ಷಕರ ಕಚೇರಿ ಮುಂಭಾಗದಲ್ಲಿ. ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಯುವಕರು ಕಚೇರಿಗೆ ಮುತ್ತಿಗೆ ಹಾಕಿ ಕಚೇರಿ ಮುಂದೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
