ಹಂದಿಗುಂದ ದಡ್ಡಿಮನಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗುರುಗಳು ನಿದ್ರೆಗೆ ಜಾರಿದ್ರಾ, ಶಾಲೆ ತೆರೆಯದ ಸಿಬ್ಬಂದಿಗಳು, ಆಟವಾಡಿದ ಮಕ್ಕಳು

ಬೆಳಗಾವಿ :ರಾಯಬಾಗ ತಾಲೂಕು ಹಂದಿಗುಂದ ಗ್ರಾಮದಲ್ಲಿ ಇಂದು ಶನಿವಾರ ಶಾಲೆಯ ವೇಳೆ ಬೆಳೆಗ್ಗೆ 7:45 ಇರುತ್ತದೆ.ಆದರೇ 9 ಗಂಟೆಯಾದರು ಯಾವ ಶಿಕ್ಷಕರು ಶಾಲೆಯಲ್ಲಿ ಇರೋದಿಲ್ಲ ಶಿಕ್ಷಕರು ಬಂದೆ ಇಲ್ಲ, ಶಾಲೆ ಕೊಠಡಿಗಳ ಕೀಲಿ ತೆಗೆಯುವವರಿಲ್ಲ, ಮಕ್ಕಳು ಶಾಲೆಯ ಮುಚ್ಚಿದ ಬಾಗಿಲ ಮುಂದೆ ಅಂಗಳದಲ್ಲಿ ಆಟ ಆಡುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಬಾರದ ಶಿಕ್ಷಕರನ್ನು ಕೇಳವರಿಲ್ಲ ಹೆಳವರಿಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ವರದಿ :-ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
