ನಾಡಗೌಡರ ನಡೆ ಸಾಧನೆ ಕಡೆ ಗ್ರಾಮ ವಾಸ್ತವ್ಯ ಚಾಲನೆ.
ಜನರ ಸಮಸ್ಯೆ ಆಲಿಸುವ ಜನನಾಯಕ ನಾಡಗೌಡ – ಸೋಮನಾಥ ಶಿವಾಚಾರ್ಯ
ಸಿಂಧನೂರು :ನ.4.ಗುಡಿಸಲಿನ ಹಳ್ಳಿಯಿಂದ ನಗರದವರೆಗೆ ಎಲ್ಲಾ ಜನರ ಸಮಸ್ಯೆಗಳನ್ನು ಆಲಿಸುವ ಜನನಾಯಕ ಶಾಸಕ ವೆಂಕಟರಾವ್ ನಾಡಗೌಡ ಎಂದು ಕರಿಬಸವನಗರದ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಉಧ್ಬಾಳ ಗ್ರಾಮದ ಹತ್ತಿರ ಇರುವ ಜೋಳದರಾಶಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ” ನಾಡಗೌಡರ ನಡೆ ಸಾಧನೆಕಡೆ ” ಎಂಬ ಪ್ರಚಾರದ ವಾಹನಕ್ಕೆ ಚಾಲನೆ ನೀಡಿ ನಂತರ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಾಸಕ ನಾಡಗೌಡರು ಶಿಕ್ಷಣ,ನೀರಾವರಿ,ಆಸ್ಪತ್ರೆಗೆ ಬಹಳಷ್ಟು ಒತ್ತುಕೊಡುತ್ತಾರೆ.ಯಾವುದೇ ಚಿಕಿತ್ಸೆ ಗಾಗಿ ಬಡವರು ರೈತಾಪಿ ವರ್ಗದವರು ಯಾವುದೇ ಸಮಯದಲ್ಲಾದರು ಹೆಚ್ಚಿನ ಚಿಕಿತ್ಸೆಗಾಗಿ ದೂರದ ದೊಡ್ಡ ದೊಡ್ಡ ಆಸ್ಪತ್ರೆಗೆ ಒಂದೇ ಒಂದು ಫೋನ್ ಕರೆ ಮೂಲಕ ಚಿಕಿತ್ಸೆ ಕೊಡಿಸಿ ಜೀವ ಉಳಿಸಿ ಮಾನವೀಯತೆ ಅನೇಕರಿಗೆ ದಾರಿ ದೀಪ ವಾಗಿದ್ದಾರೆ ಅಭಿವೃದ್ದಿ ವಿಷಯದಲ್ಲಿ ಆಡಳಿತ ಪಕ್ಷದಲ್ಲಿ ಇರುವ ಶಾಸಕರಿಗಿಂತ ಅತಿ ಹೆಚ್ಚು ಅನುದಾನ ತಂದವರಲ್ಲಿ ರಾಜ್ಯದಲ್ಲಿಯೇ ಮೊದಲಿಗರು ಅವರು ತಮ್ಮ ಅರೋಗ್ಯದ ಕಡೆ ಗಮನ ಕೊಡದೆ ಜನರ ಸಮಸ್ಯೆಗಳನ್ನು ಆಲಿಸಲು ಒತ್ತು ಕೊಡುತ್ತಾರೆ ಆಗಲು ರಾತ್ರಿಯನ್ನದೆ ಸುತ್ತಾಡಿ ಜಾತಿ ಪಕ್ಷ ಏನ್ನದೆ ಸುತ್ತಾಡಿ ಜನರ ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಅವರು ಇನ್ನೂ ಹೆಚ್ಚಿನ ಹುದ್ದೆಗಳು ಸಿಗಲಿ ಎಂದು ಆಶೀರ್ವಾದ ಮಾಡಿ ರೈತರ ಬೆಳೆದ ಬೆಳೆಗೆ ಹೆಚ್ಚಿನ ಬೆಲೆಗೆ ಕೊಡಿಸುವದು ಹಾಗೂ ಖರೀದಿ ಕೇಂದ್ರವನ್ನು ಪ್ರಾರಂಭ ಮಾಡಬೇಕು ಎಂದು ಎಲ್ಲಾ ಸ್ವಾಮೀಜಿಗಳ ರೈತರ ಪರವಾಗಿಶಾಸಕರಿಗೆ ಸಲಹೆ ನೀಡಿದರು.
ಮಾನ್ವಿ ಕ್ಷೇತ್ರದ ಶಾಸಕ ರಾಜ ವೆಂಕಟಪ್ಪ ನಾಯಕ ಮಾತನಾಡಿ ಇತಿಹಾಸದಲ್ಲಿ ಸಿಂಧನೂರು ತಾಲ್ಲೂಕು ಸಚಿವ ಸ್ಥಾನದಿಂದ ವಂಚಿತವಾಗಿತ್ತು. ನಿಮ್ಮೆಲ್ಲರ ಆರ್ಶೀವಾದ ದಿಂದ ನಾಡಗೌಡ್ರು ಶಾಸಕರಾಗಿ ಮಂತ್ರಿಯಾಗಿ ಅದನ್ನು ಅಳಿಸಿ ಹಾಕಿದ್ದಾರೆ. 2023 ರ ವಿಧಾನಸಭಾ ಚುನಾವಣೆ ಯಲ್ಲಿ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ,ನಾಡಗೌಡ್ರು ಉಪ ಮುಖ್ಯಮಂತ್ರಿ ಆಗುತ್ತಾರೆ ಇದನ್ನು ತಪ್ಪಿಸಲು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.
ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ ನಮ್ಮ ನಡೆ ಹಳ್ಳಿಯ ಕಡೆ ಎಂಬ ಶ್ಲೋಗನ ಇಟ್ಟು ಕೊಂಡು ಪಾದಯಾತ್ರೆ ಹೋಗಿದ್ದೇವು.ಆದರೆ ಇಂದು ನಮ್ಮ ನಡೆ ಸಾಧನೆ ಕಡೆ ಎಂಬ ಶ್ಲೋಗನೊಂದಿಗೆ 25 ದಿನಗಳ ವರೆಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಪಟ್ಟಿ ತಯಾರಿ ಸುವುದು ನಮ್ಮ ಧ್ಯೇಯವಾಗಿದೆ. ಮುಂದಿನ 2023ರ ವಿಧಾನ ಸಭಾ ಚುನಾವಣೆ ಯಲ್ಲಿ ಸಂಪೂರ್ಣ ಬಹುಮತ ಕೊಡಿ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಪಂಚತಂತ್ರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇವೆ. ನಮ್ಮ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಎಲ್ಲಾ ಬ್ಯಾಂಕುಗಳು ಸಾಲ ಮನ್ನಾ ಮಾಡಿದ ಇತಿಹಾಸ ಅದು ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದಾಗ ಅದನ್ನು ಯಾರು ಮರೆಯಬಾರದು. ರಾಷ್ಟ್ರೀಯ ಪಕ್ಷಗಳು ಮಾನವೀಯ ಮೌಲ್ಯಗಳನ್ನು ಕಳೆದು ಕೊಂಡಿವೆ. ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ರಾಜ್ಯದಲ್ಲಿ ಪಾದಯಾತ್ರೆ ಹಮ್ಮಿಕೊಂಡಿ ದ್ದರು.ಆದರೆ ರಾಜ್ಯಕ್ಕೆ ತಮ್ಮ ಪಕ್ಷದ ಏನು ಕೊಡುಗೆ ಕೊಡುತ್ತಾರೆ ಎಂಬುದು ಹೇಳಲಿಲ್ಲ ಜನರಿಗೆ ಕೈಬೀಸಿ ಹೋಗಿಬಿಟ್ಟರು ಎಂದರು.
ಈ ಸಂದರ್ಭದಲ್ಲಿ ಸದಾನಂದ ಶರಣರು ವೆಂಟಗಿರಿಕ್ಯಾಂಪ್, ಅಮರಗುಂಡಯ್ಯ, ಮಾದಯ್ಯ ಗುರುವಿನ ತುರ್ವಿಹಾಳ, ವಿಶ್ವನಾಥ ಸ್ವಾಮಿ ಪಗಡದಿನ್ನಿ,ಮಲ್ಲಯ್ಯತಾತ ಗೋನ್ವಾರ, ಯದ್ದಲ ದೊಡ್ಡಿ ಶ್ರೀಗಳು, ವೇದಮೂರ್ತಿ, ಡಾ.ಸಿದ್ದಯ್ಯ ತಾತ ಮರಳು ಗೋರೆಬಾಳ ದಿವ್ಯಾ ಸಾನಿಧ್ಯ ವಹಿಸಿದ್ದರು. ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖಂಡರಾದ ಜಿ.ಸತ್ಯನಾರಾಯಣ, ಜಿಲಾನಿ ಪಾಷ, ಚಂದ್ರಶೇಖರ ಮೈಲಾರಿ, ದಾಸರಿ ಸತ್ಯ ನಾರಾಯಣ, ಧರ್ಮನಗೌಡ ಮಲ್ಕಾಪುರ, ವೆಂಕೋಬ ಕಲ್ಲೂರು, ಬಿ.ಶ್ರೀಹರ್ಷ, ನಾಗೇಶ ಹಂಚಿನಾಳ ಕ್ಯಾಂಪ್, ವೆಂಕಟೇಶ ನಂಜಲದಿನ್ನಿ, ಲಿಂಗರಾಜ ಹೂಗಾರ್, ನದಿಮುಲ್ಲಾ, ಅಶೋಕ ಉಮಲೂಟಿ, ಬಸನಗೌಡ ಹುಡಾ, ಎಸ್.ಪಿ. ಟೇಲರ್, ಶಿವನಗೌಡ ಗೊರೆಬಾಳ, ಕೃಷ್ಣಮೂರ್ತಿ, ಸುಮೀತ ತಡಕಲ್, ಜಕ್ಕರಾಯ,ತಿಮ್ಮನಗೌಡ, ಬಸವರಾಜ ಕೆಸರಟ್ಟಿ, ಮಲ್ಲೇಶ್ವರ ರಾವ್, ಆಜಯ ದಾಸರಿ, ಅಯ್ಯನಗೌಡ ಆಯನೂರ, ಸೇರಿದಂತೆ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು..

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
