;

ಆಶಾ ಕಾರ್ಯಕರ್ತರಿಗೆ ಕ್ಷಯರೋಗ ನಿರ್ಮೂಲನ ಕುರಿತು ಪುನರ್ ಮನನ ತರಬೇತಿ…!!!

ಆಶಾ ಕಾರ್ಯಕರ್ತರಿಗೆ ಕ್ಷಯರೋಗ ನಿರ್ಮೂಲನ ಕುರಿತು ಪುನರ್ ಮನನ ತರಬೇತಿ.

ಸಿಂಧನೂರು :ನ.4. ಭಾರತ ದೇಶದಲ್ಲಿ 2025 ಕ್ಕೆ ಕ್ಷಯ ಮುಕ್ತ ಮಾಡುವ ಸಲುವಾಗಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲಾಗಿದ್ದು ಹಾಗೂ ತಾವುಗಳು ಕ್ಷೇತ್ರ ಮಟ್ಟದಲ್ಲಿ ಸಂಭಾವ್ಯ ರೋಗಿಗಳನ್ನು ಕಫ ಪರೀಕ್ಷೆಗೆ ಕಳಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಅಯ್ಯನಗೌಡ ಹೇಳಿದರು.
ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಕ್ಷಯ ರೋಗ ವಿಭಾಗ ರಾಯಚೂರು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಇಂದು ತಾಲೂಕಿನ ಆಶಾ ಕಾರ್ಯಕರ್ತರಿಗೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದ ಕುರಿತು ಪುನರ್ ಮನನ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಪ್ರೀತ, ಡಾ. ನಿಖಿಲ್ ಹಾಗೂ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿ ಕಾರಿಗಳಾದ ಸಂಗನಗೌಡ ಮಾಲಿ ಪಾಟೀಲ್ ಮತ್ತು ತಾಲೂಕು ಕ್ಷಯ ರೋಗದ ಮೇಲ್ವಿಚಾರಕರಾದ ಅಮೀರ್, ಯಮುನೂರ, ಅಬ್ದುಲ್ ಹಮೀದ್ ಹಾಗೂ ಆರೋಗ್ಯಮ್ಮ ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;