;

ಗುಡೇಕೋಟೆ :ಕ ಸಾ ಪ ಹೋಬಳಿ ಘಟಕ ಅಸ್ತಿತ್ವಕ್ಕೆ ಚಾಲನೆ…!!!

ಗುಡೇಕೋಟೆ :ಕ ಸಾ ಪ ಹೋಬಳಿ ಘಟಕ ಅಸ್ತಿತ್ವಕ್ಕೆ ಚಾಲನೆ
ಕೂಡ್ಲಿಗಿ : ಶತಮಾನಗಳ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ನಾಡು-ನುಡಿಗೆ ಅಪಾರ ಸೇವೆ ಗೈದಿದೆ ಎಂದು ಅಖಂಡ ಬಳ್ಳಾರಿ ಜಿಲ್ಲಾ ಘಟಕದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ನಿ.ರುದ್ರಪ್ಪ ಬಣ್ಣಿಸಿದರು. ಅವರು ತಾಲೂಕಿನ ಗುಡೆಕೋಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸರಳವಾಗಿ ಮತ್ತು ಅಚ್ಚುಕಟ್ಟಾಗಿ ಆಯೋಜನೆಗೊಂಡಿದ್ದ ಹೋಬಳಿ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಲಲಿತಮ್ಮ ಗೋವಿಂದಪ್ಪ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ಎಂ ಎಂ ರವಿಕುಮಾರ್ ಮಾತನಾಡಿ ಜನರ ಬಳಿಗೆ ಸಾಹಿತ್ಯವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಹೋಬಳಿ ಘಟಕಗಳ ಪಾತ್ರ ಮಹತ್ವದ್ದು ಎಂದು ತಿಳಿಸಿದರು.
ನೂತನ ಅಧ್ಯಕ್ಷರಾದ ಶೇಖರಯ್ಯ ಟಿ ಎಚ್ ಎಂ ರವರು ಮಾತನಾಡಿ ಕನ್ನಡಸಾಹಿತ್ಯಪರಿಷತ್ತಿನ ಹೋಬಳಿ ಘಟಕವು ಹಲವು ಮುನ್ನೋಟದ ಚಟುವಟಿಕೆಗಳ ಮೂಲಕ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಮೌಲ್ಯಯುತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಗೌರವ ಕೋಶಾಧ್ಯಕ್ಷರಾದ ಶ್ರೀ ಶಿವಪ್ರಸಾದ್ ಜಿ, ಸ್ವರೂಪಾನಂದ ಎಂ, ಶ್ರೀ ಶಿವಶಂಕರಯ್ಯ ನಿವೃತ್ತ ಶಿಕ್ಷಕರು, ಶ್ರೀ ಶಿವಶಂಕರಪ್ಪ ನಿವೃತ್ತ ವಿಷಯ ಪರಿವೀಕ್ಷಕರು ಮಾತನಾಡಿದರು.
ತರುವಾಯ ಸರ್ವ ಪ್ರತಿನಿಧಿಗಳಿಗೆ ಆದೇಶ ಪ್ರತಿ ಮತ್ತು ಕನ್ನಡದ ಶಾಲು ಹಾಕುವ ಮೂಲಕ ಸೇವಾ ಸ್ವೀಕಾರ ನೆರವೇರಿತು. ಕಾರ್ಯಕ್ರಮದ ಪೂರ್ವದಲ್ಲಿ ಶ್ರೀನಾಗೇಶ್ ಶಿಕ್ಷಕರು ನಡೆಸಿಕೊಟ್ಟ ಕನ್ನಡ ಗೀತಗಾಯನ ಮುದನೀಡಿತು. ಕಾರ್ಯಕ್ರಮದ ಪ್ರಾರ್ಥನೆಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳು ಹಾಡಿದರೆ ನಾಡಗೀತೆಯನ್ನು ಶ್ರೀನಾಗೇಶ್ ಶಿಕ್ಷಕರು ನೆರವೇರಿಸಿದರು, ಸ್ವಾಗತವನ್ನು ಶ್ರೀ ಮಹಮ್ಮದ್ ರಫೀಕ್ ಎಂ ಪ್ರತಿನಿಧಿಗಳು ನೆರವೇರಿಸಿದರು, ಅಜ್ಜಯ್ಯ ಮೂರ್ತಿ ಶಿಕ್ಷಕರು ನಿರೂಪಿಸಿದರು ಎಂ ಶಾಂತಮೂರ್ತಿ ಗೌರವ ಕಾರ್ಯದರ್ಶಿಗಳು,ಹಯತ್ ಭಾಷ ನಿರ್ವಹಿಸಿದರು, ಅಶೋಕ ಜಿ ವಂದಿಸಿದರು.
ಕೊನೆಯಲ್ಲಿ ಸರ್ವ ಗಣ್ಯರನ್ನು ಪುಸ್ತಕಗಳನ್ನು ನೀಡುವ ಮೂಲಕ ಸನ್ಮಾನಿಸಲಾಯಿತು, ಕಾರ್ಯಕ್ರಮದಲ್ಲಿ ಅಪಾರ ಕನ್ನಡಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು..

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;