ಪ್ರಿಯಾಂಕ್ ಖರ್ಗೆ ಇಚ್ಛಾಶಕ್ತಿಯಿಂದ ಕ್ರೀಡಾ ವಾತಾವರಣ: ಗುತ್ತೇದಾರ
ಚಿತ್ತಾಪುರ: ಸೆ.27:ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರ ಇಚ್ಛಾಶಕ್ತಿಯಿಂದ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಿದ್ದರಿಂದ ತಾಲೂಕಿನ ಯುವಕರಲ್ಲಿ ಕೀಡಾಸಕ್ತಿ ಹೆಚ್ಚಾಗಿದ್ದು ಉತ್ತಮ ಕ್ರೀಡಾ ವಾತಾವರಣ ನಿರ್ಮಾಣವಾಗಿದೆ ಎಂದು ಪತ್ರಕರ್ತ ಕಾಶಿನಾಥ ಗುತ್ತೇದಾರ ಹೇಳಿದರು.
ಪಟ್ಟಣದ ಒಳಂಗಾಣ ಕ್ರೀಡಾಂಗಣದಲ್ಲಿ ತಾಲೂಕು ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ತಾಲೂಕು ಮುಂದುವರೆದ ತಾಲೂಕು ಅನ್ನಿಸಿಕೊಳ್ಳಬೇಕಾದರೆ ಅಲ್ಲಿ ಕ್ರೀಡಾ ಮತ್ತು ಶೈಕ್ಷಣಿಕ ವಾತಾವರಣ ನಿರ್ಮಾಣವಾಗಬೇಕು ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಈಗಾಗಲೇ ಕ್ರೀಡಾಂಗಣ ನಿರ್ಮಾಣವಾಗಿದೆ ಅಲ್ಲದೇ ದೊಡ್ಡ ದೊಡ್ಡ ಶೈಕ್ಷಣಿಕ ಸಂಸ್ಥೆಗಳೂ ಕೂಡ ಆರಂಭವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಪೂರಕ ವಾತವರಣ ನಿರ್ಮಾಣವಾಗಿದೆ ಎಂದು ಹೇಳಿದರು.
ಕ್ರೀಡೆ ಇರಲಿ ಅಥವಾ ಪರೀಕ್ಷೆ ಇರಲಿ ವಿದ್ಯಾರ್ಥಿಗಳಾದವರು ಆತ್ಮವಿಶ್ವಾಸದಿಂದ ಎದುರಿಸಬೇಕು, ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸವೇ ಗೆಲುವಿನ ದಡಕ್ಕೆ ತಲುಪಿಸಲಿದೆ ಹೀಗಾಗಿ ವಿದ್ಯಾರ್ಥಿಗಳು ಯಾವತ್ತೂ ಕೊಂಕು ಮಾತುಗಳಿಗೆ, ಟೀಕೆ ಟಿಪ್ಪಣೆಗಳಿಗೆ ತಲೆ ಕೆಡಿಸಿಕೊಳ್ಳದೆ ಅವುಗಳೇ ನಮಗೆ ಸ್ಪೂರ್ತಿ ಎಂದು ಭಾವಿಸಿಕೊಂಡು ಮುನ್ನುಗ್ಗಬೇಕು ಎಂದು ಕಿವಿಮಾತು ಹೇಳಿದರು.
ಪುರಸಭೆ ಮಾಜಿ ಸದಸ್ಯ ಸುರೇಶ ಬೆನಕನಳ್ಳಿ ಮಾತನಾಡಿ, ಚಿತ್ತಾಪುರದಲ್ಲಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ ಆದರೆ ಅವರಿಗೆ ಪೆÇ್ರೀತ್ಸಾಹ ಮಾಡುವ ಕೆಲಸ ಮಾಡಬೇಕಿದೆ. ಈಗಾಗಲೇ ಶಾಸಕರ ಪರಿಶ್ರಮದಿಂದ ಭವ್ಯ ಮತ್ತು ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಿದೆ ಹೀಗಾಗಿ ಕ್ರೀಡಾಪಟುಗಳು ಇದರ ಸದುಪಯೋಗ ಮಾಡಿಕೊಂಡು ಸಾಧನೆಗೈಯಬೇಕು ಎಂದು ಹೇಳಿದರು.
ಪತ್ರಕರ್ತ ವಿರೇಂದ್ರ ಕೊಲ್ಲೂರ ಮಾತನಾಡಿದರು. ಅಸೋಸಿಯೇಷನ್ ಅಧ್ಯಕ್ಷ ಸಾಯಬಣ್ಣ ಕಾಶಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕ್ರೀಡಾಪಟು ರಾಜಕುಮಾರ ಘವಾರಿಯಾ, ಲಖನಸಿಂಗ್ ರಜಪುತ್, ಶ್ರೀನಿವಾಸ ಪೆಂದು, ತಿರುಪತಿ ಚವ್ಹಾಣ, ಸುನೀಲ್ ಜಿತುರೆ, ರೋಹಿತ್, ರಾಹುಲ್, ಕೀರಣ್ ರಾಠೋಡ, ವಿಶ್ವನಾಥ ಕುಂಬಾರ, ಶಿವಬಸಪ್ಪ ಗುತ್ತೆಪ್ಪನವರ್, ಆನಂದ ಕಲ್ಲಕ್, ಸಂಗಮೇಶ ರೋಣದ್, ವಿಜಯಕುಮಾರ ಹರವಾಳ, ಸಂಜು ಚೌದರಿ ಇತರರು ಇದ್ದರು. ರಾಜಶೇಖರ ಬಳ್ಳಾ ಸ್ವಾಗತಿಸಿದರು, ಬಾಬು ಕಾಶಿ ನಿರೂಪಿಸಿದರು. ಕಬ್ಬಡ್ಡಿ, ವಾಲೀಬಾಲ್, ಬಾಕ್ಸಿಂಗ್, ಕುಸ್ತಿ, ರಿಲೇ, ತ್ರಿವಿದ ಜಿಗಿತ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದಲ್ಲಿ ದಿ.ಶೋಭಾ ಚಂದ್ರಶೇಖರ ಕಾಶಿ ಅವರ ವತಿಯಿಂದ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಚಿತ್ತಾಪುರ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡುವ ಯೋಜನೆ ಹಾಕಿಕೊಂಡಿದ್ದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುವುದು.ಸಾಯಬಣ್ಣ ಕಾಶಿ ಅಸೋಸಿಯೇಷನ್ ಅಧ್ಯಕ್ಷರು…

ವರದಿ. ಬಸಯ್ಯ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
