ಇಟ್ಟಿಗಿ ಗ್ರಾ ಪಂಚಾಯತಿಯಲ್ಲಿ ಜಮಾ ಬಂದಿ ವರದಿ ಕಾರ್ಯಕ್ರಮ….!!!

ಇಟ್ಟಿಗಿ ಗ್ರಾ ಪಂಚಾಯತಿಯಲ್ಲಿ ಜಮಾ ಬಂದಿ ವರದಿ ಕಾರ್ಯಕ್ರಮ.

ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿಯಲ್ಲಿ ಜಿಲ್ಲಾ ನೋಡಲ್ ಅಧಿಕಾರಿಗಳಾದ,ವಿಜಯನಗರ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳಾದ ಶ್ರೀ ಅಶೋಕ ತೋಟದ್ ಸರ್ ರವರು ಅವರ ಕಾರ್ಯದರ್ಶಿ ಚಂದ್ರನಾಯ್ಕ್ ರವರು, ಜಿ ಪಂ ಎಸ್ ಬಿ ಎಂ ಅಂಬರೀಷ್ ಸರ್ ರವರು ದಿನಾಂಕ -27-09-2022ನೇ, 2021-22ನೇ ಸಾಲಿನ ಜಮಾಬಂಧಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಗ್ರಾಮದ ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ, ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ತಾತ್ಕಾಲಿಕ ಮತ್ತು ಈಗಾಗಲೇ ಗುರುತಿಸಿರುವ ಶಾಶ್ವತ ಸ್ಥಳಗಳನ್ನು ಪರಿಶೀಲನೆ ಮಾಡಿದರು, ಹಾಗೆಯೇ 14&15ನೇ ಹಣಕಾಸು ಯೋಜನೆಯಲ್ಲಿ ನೆಡೆದ ಬಳಿಗಾರ ಪಾರ್ವತಮ್ಮ ಸರ್ಕಾರಿ ಪ್ರೌಢಶಾಲೆ & 2ನೇ ಅಂಗನವಾಡಿ ಕೇಂದ್ರ ದಲ್ಲಿ ನೆಡೆದ ಕಾಮಗಾರಿಗಳನ್ನು ಹಾಗೂ ನರೇಗಾ ಯೋಜನೆಯಡಿ ನೆಡೆದ ಪೌಷ್ಟಿಕ ತೋಟ, ಮಳೆ ನೀರು ಕೊಯ್ಲು, ಶಾಲಾ ಬಚ್ಚಲುಗುಂಡಿ ನಿರ್ಮಾಣ, ಶಾಲಾ ಮೈದಾನ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು, ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿಮಹಾಬಲೇಶ್ವರ, ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಅಂಬಿಕಾವಿರೇಶ್ ರವರು,ಗ್ರಾ ಪಂ ಕಾರ್ಯದರ್ಶಿ ಅಲ್ಲಭಕ್ಷಿ ಸರ್,ಕ್ಲರ್ಕ್ ಕಂ ಡಿ ಇ ಓ ಪ್ರಕಾಶ್, ಬಿಲ್ ಕಲೆಕ್ಟರ್ ಕೊಟ್ರೇಶ್,ನೀರುಗಂಟಿ ಜಯಕುಮಾರ್,ಡಿ ಇ ಓ ಮಲ್ಲಿಕಾರ್ಜುನ, ಗ್ರಾಮದ ಬೆಟ್ಟಜ್ಜ,ಮಹಾಬಲೇಶ್ವರ ಉಪಸ್ಥಿತರಿದ್ದರು.

ವರದಿ -ಪ್ರಕಾಶ್ ಆಚಾರ್ ಇಟ್ಟಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend