ರಾಜ್ಯಾಧ್ಯಂತ ವಿರುವ ಮಾಧ್ಯಮ ಮಾನ್ಯತಾ ಪತ್ರ ಹೊಂದಿಲ್ಲದ (Non Accridate Journalist) ಪತ್ರಕರ್ತರುಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಿಕೊಡಲು ಕಾನಿಪ ಧ್ವನಿ ಸಂಘಟನೆಯಿಂದ ಸಾರಿಗೆ ಸಚಿವರಾದ ರಾಮುಲು ರವರಿಗೆ ಇಂದು ಮನವಿ :- ಇಂದು ಬೆಳಿಗ್ಗೆ 9.30 ಕ್ಕೆ ಬೆಂಗಳೂರು ನಗರದ ಸಾರಿಗೆ ಸಚಿವರಾದ ಶ್ರೀರಾಮುಲು ರವರ ನಿವಾಸದಲ್ಲಿ ಅವರನ್ನು ಖುದ್ದಾಗಿ ಬೇಟಿ ನೀಡಿದಂತ ನಮ್ಮ ಸಂಘಟನೆಯ ಪದಾಧಿಕಾರಿಗಳು ರಾಜ್ಯಾಧ್ಯಂತವಿರುವ ಮಾಧ್ಯಮ ಮಾನ್ಯತಾ ಕಾರ್ಡ್ ಹೊಂದಿಲ್ಲದ (Non Accridate Journalist) ಪತ್ರಕರ್ತರುಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಿಕೊಡಬೇಕು, ನಿಯಮಗಳನ್ನು ಮೀರಿ ಸರ್ಕಾರಕ್ಕೆ ವಂಚಿಸಿ ಅಕ್ರಿಡೇಷನ್ ಕಾರ್ಡ್ ಪಡೆದಿರುವ ಪತ್ರಕರ್ತರುಗಳ ಕಾರ್ಡ್ ರದ್ದು ಪಡಿಸಿ ತಮ್ಮ ಇಲಾಖೆ ಅಂದರೆ ಸಾರಿಗೆ ಇಲಾಖೆಯ ಬೊಕ್ಕಸಕ್ಕೆ ಆಗುತ್ತಿರುವ ಸೋರಿಕೆಯನ್ನು ತಪ್ಪಿಸಬೇಕು.

ಹಾಗೂ ಈ ಕುರಿತು ಸದನದಲ್ಲಿ ಕೂಡಲೇ ಗಮನಕ್ಕೆ ತಂದು ಬೆಂಗಳೂರು ಜಿಲ್ಲಾ ವ್ಯಾಪ್ತಿಯ ಬಿ.ಬಿ.ಎಂ.ಪಿ ಯ ರೀತಿಯಲ್ಲಾದರೂ ರಾಜ್ಯಾಧ್ಯಂತವಿರುವ ಪತ್ರಕರ್ತರುಗಳಿಗೆ ಬಸ್ ಸೌಲಭ್ಯ ವಾಗಲೇಬೇಕೆಂದು ಮನವಿಯನ್ನು ರಾಮುಲು ರವರಿಗೆ ನೀಡಿದ ನಂತರ ಕೂಡಲೇ ತಮ್ಮ ಅಧಿಕಾರಿಗಳನ್ನು ಕರೆದು ಇಂದು ಈ ಕುರಿತು ಕ್ರಮವಹಿಸುವುದಾಗಿ ನಮಗೆ ತಿಳಿಸಿರುವ ಕುರಿತು ವೀಡಿಯೋ ಹಾಗೂ ಛಾಯಚಿತ್ರಗಳು ರಾಜ್ಯದ ಸಮಸ್ತ ಪತ್ರಕರ್ತರಿಗಾಗಿ. ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ…
ವರದಿ.ಮಂಜುನಾಥ್, ಎನ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
