ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಪ್ರತಿಭಾಕಾರಂಜಿ ಹನುಮಂತಪ್ಪ ಬಂಡಿವಡ್ಡರ
ಸಿಂಧನೂರು : ಸ.16.ತಾಲೂಕಿನ ದುಗ್ಗಮ್ಮನಗುಂಡ ಗ್ರಾಮದಲ್ಲಿ ಇಂದು ದೇವಿಕ್ಯಾಂಪ್ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಗುಡದೂರು ವಲಯದ ಶಿಕ್ಷಣ ಸಂಯೋಜಕರಾದಹನುಮಂತಪ್ಪ ಅವರು ಮಾತನಾಡಿ ಪ್ರತಿಭಾಕಾರಂಜಿ ಕಾರ್ಯಕ್ರಮ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆಯಾಗಿದೆ.ವಲಯ ದ ಎಲ್ಲ ವಿದ್ಯಾರ್ಥಿಗಳು ಒಳ್ಳೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಿ ಆರ್ ಪಿ ಗಿರೀಶ್ ವಿ ಮಾತನಾಡಿ ಸರಕಾರದ ಒಂದು ಒಳ್ಳೆಯ ಕಾರ್ಯಕ್ರಮ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಈ ಕಾರ್ಯಕ್ರಮ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಾಲಾ ಮುಖ್ಯ ಗುರುಗಳಾದ ಶಂಕರ ದೇವರು ಹಿರೇಮಠ ಅವರು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರತರಲು ಸೂಕ್ತ ವೇದಿಕೆ ಆಗಿದೆ. ಪ್ರತಿಭಾ ಕಾರಂಜಿ ಕಾರ್ಯಕ್ರಮವು ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಿದೆ ಎಂದು ಪ್ರತಿಭಾ ಕಾರಂಜಿ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಬರಹಗಳ ನೊಳಗೊಂಡ ಗೋಡೆ ಬರಹ, ಕನ್ನಡ ಕಂಪು ಪತ್ರಿಕೆಯ ೬೫ ನೇ ಸಂಚಿಕೆ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದೇವರಗುಡಿ ಗ್ರಾಮ ಪಂಚಾಯತಿ ಬಸವರಾಜ ಬಾವಿ,ಸದಸ್ಯರಾದ ವಿರೇಶ, ಶರಣಗೌಡ, ಅಂಬಣ್ಣ ವೇದಿಕೆಯ ಮೇಲೆ ವಲಯದ ಬಡ್ತಿ ಮುಖ್ಯ ಗುರುಗಳಾದ ಭರತ್ ಕುಮಾರ್, ಜಗದೀಶ್ ನಂದಿ, ಶಾಂತರಾಜ್, ಶ್ರೀಶೈಲ ಕೌದಿ ,ಗ್ರಾಮದ ಹುಚ್ಚಪ್ಪ ದೇವರಗುಡಿ, ಹನುಮಂತಪ್ಪ ಬೇರ್ಗಿ, SDMC ಅಧ್ಯಕ್ಷರಾದ ಗುಡುದಪ್ಪ, ಉಪಾಧ್ಯಕ್ಷರಾದ ರೇಣುಕಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಸರ್ವ ಮಂಗಳ, ಬಸವರಾಜ ಜಾಡರ್, ಮಂಜ ನಾಯಕ್, ಪರಪ್ಪ ಕರಿಗಾರ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಶ್ರೀಶೈಲ ಅಂಬಿಗೇರ, ವಿರುಪಾಕ್ಷಪ್ಪ ಫಕೀರಪೂರ ಸ್ವಾಗತಿಸಿದರು. ಪರಪ್ಪ ಕರಿಗಾರ ಅವರು ಪ್ರಾಥ೯ನೆ ಗೀತೆ ಹಾಡಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
