ಲೋಕಿಕೆರೆ ಗ್ರಾಮಕ್ಕೆ ಭೇಟಿ ನೀಡಿದ ವಿಜಯನಗರ ಜಿಲ್ಲಾ ಡಿಎಸ್ಎಸ್ (ಬಿ. ಕೆ ) ಸಂಚಾಲಕ,ಎಸ್ ದುರುಗೇಶ್…!!!

ಲೋಕಿಕೆರೆ ಗ್ರಾಮಕ್ಕೆ ಭೇಟಿ ನೀಡಿದ ವಿಜಯನಗರ ಜಿಲ್ಲಾ ಡಿಎಸ್ಎಸ್ (ಬಿ. ಕೆ ) ಸಂಚಾಲಕ,ಎಸ್ ದುರುಗೇಶ್.
ಕಾನಹೊಸಹಳ್ಳಿ :- ಕೂಡ್ಲಿಗಿ ತಾಲೂಕಿನ ಲೋಕಿಕೆರೆ ಗ್ರಾಮಕ್ಕೆ ವಿಜಯನಗರ ಜಿಲ್ಲಾ ಡಿಎಸ್ಎಸ್ ಸಂಚಾಲಕ ಕೂಡ್ಲಿಗಿ ಎಸ್ ದುರುಗೇಶ್ ರವರು ಭೇಟಿ ನೀಡಿ, ದಲಿತ ಸಂಘರ್ಷ ಸಮಿತಿ ಮುಖಂಡರನ್ನು ಭೇಟಿಯಾಗಿ ಬೋಕಿಕೆರೆ ಗ್ರಾಮದ ದಲಿತ ಕಾಲೋನಿಯ ಮೂಲಭೂತ ಸೌಕರ್ಯಗಳ ಬಗ್ಗೆ ವಿಚಾರಣೆ ಮಾಡಿದರು. ಕೆಲವು ದಲಿತರ ಸಣ್ಣಪುಟ್ಟ ಸಮಸ್ಯೆಗಳನ್ನು ಸ್ಥಳದಲ್ಲಿಯೇ ದಲಿತ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನಿಸಿದರು. ಮುಖ್ಯವಾಗಿ ಗ್ರಾಮದಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಿಸಲು ಸ್ಥಳದ ಅವಶ್ಯಕತೆಯಿದ್ದು ಕಟ್ಟಡವನ್ನು ಕಟ್ಟಿಸಲು ಕೆಲವು ಸಮಸ್ಯೆಗಳು ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಅಂಬೇಡ್ಕರ್ ಭವನವನ್ನು ನಿರ್ಮಿಸಲು ತೀರ್ಮಾನಿಸಲಾಗುವುದು ಎಂದು ಹೇಳಿದರು. ಹಾಗೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ ಪೋಷಕರು ಮಕ್ಕಳ ಶಿಕ್ಷಣಕ್ಕೆ ಮೊದಲಿನಆದ್ಯತೆ ಕೊಡಿ ಸರ್ಕಾರದಿಂದ sc. ಎಸ್ಟಿ ವಿದ್ಯಾರ್ಥಿಗಳಿಗೆ ಬೇಕಾದಷ್ಟು ಸೌಲಭ್ಯಗಳಿವೆ ಅವುಗಳನ್ನು ಉಪಯೋಗ ಮಾಡಿಕೊಳ್ಳಿ ನಿಮ್ಮ ಕಾಲೋನಿಯಲ್ಲಿ ಅಥವಾ ಊರಿನಲ್ಲಿ ಯಾವುದಾದರೂ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಮುಖಂಡರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿರಿ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬೇಡಿ ಪ್ರತಿಯೊಬ್ಬರು ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಆದರ್ಶವನ್ನು ಪಾಲಿಸಿರಿ ಅವರು ರಚಿಸಿದ ಸವಿಂದಾನದ ಕಾನೂನು ಅಡಿಯಲ್ಲಿ ನಡೆಯಿರಿ ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಜಿ ಮಾಕನಡಕು ಕುಮಾರ, ತಾಲೂಕು ಸಂಘಟನಾ ಸಂಚಾಲಕರಾದ ಕೂಡ್ಲಿಗಿ ಮಹೇಶ್, ಮೂಗಪ್ಪ ಕರಿಬಸಪ್ಪ, ಕಾಟನಹಳ್ಳಿ ದುರ್ಗಪ್ಪ. ತಿಪ್ಪೇಸ್ವಾಮಿ.ಕೆ. ರುದ್ರಮ್ಮ, ಹೆಚ್ ಕೆ ದುರ್ಗೇಶ್,ಹೆಚ್ ಕೆ ಹನುಮಂತಪ್ಪ,ಕೆಎಂ ಹಳ್ಳಿ ಓಬಳೇಶ,ಎಂ ಶಿವಪ್ಪ, ಟಿ ಬಸವರಾಜ ಮಂಜುನಾಥ. ಕೆಎಂ ಹಳ್ಳಿ ಶಾಂತ, ಮಲ್ಲಿಕಾರ್ಜುನ, ಪೂಜಾರಹಳ್ಳಿ ತಿಪ್ಪೇಸ್ವಾಮಿ, ಡ್ರೈವರ್ ಶರಣಪ್ಪ ಅಶೋಕ, ಸೇರಿದಂತೆ ಗ್ರಾಮದ ದಲಿತ ಮುಖಂಡರು ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend