ಕೂಡ್ಲಿಗಿ:ಹಿಂದೂ ಮಹಾಗಣಪತಿ ಸೇವಾ ಸಮಿತಿಯಿಂದ, ಸಮಾಜ ಸೇವಕರ ಸನ್ಮಾನ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹಳೇ ಸಂತೇ ಮೈದಾನದ ಹತ್ತಿರ, ಹಿಂದೂ ಮಹಾಗಣಪತಿ ಸೇವಾ ಸಮಿತಿಯಿಂದ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.ಐದು ದಿನಗಳ ಕಾಲ ಗಣೇಶನನ್ನು ಆರಾಧಿಸಲಾಯಿತು ಮತ್ತು ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಚಟುವಟಿಕೆಗಳನ್ನು ಜರುಗಿಸಲಾಯಿತು. ಮತ್ತು ಅಂತಿ ಸಂದರ್ಭದಲ್ಲಿ ಪ್ರಸಾಧ ಸೇವನೆ ಆಯೋಜಿಸಲಾಯಿತು ಮತ್ತು ಸಮಾಜ ಮುಖಿ ಹಾಗೂ ವಿವಿದ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವ ಗಣ್ಯರನ್ನ ಸನ್ಮಾನಿಸಲಾಯಿತು. ಸನ್ಮಾನಿತರು:
ಮಾನ್ಯ ಸಿಪಿಐ ಸಾರ್ ಆರಕ್ಷಕ ಇಲಾಖೆ, ಅಗ್ನಿಶಾಮಕ ಇಲಾಖೆ, ಆರೋಗ್ಯ ಇಲಾಖೆ, ಮಾಳಗಿ ನಾಗರಾಜ್, ತರಕಾರಿ ದುರುಗಪ್ಪ, ಕಲಾವತಿ, ಮಲ್ಲಮ್ಮ ಟೀಚರ್, ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ, ಕೊಟ್ರೇಶ್ ಡಿ.ಆರ್, ಪತ್ರಕರ್ತರಾದ ನಾಗರಾಜ್, ಸಿದ್ದಾಪುರ ಈಶ್ವರಪ್ಪ, ವಿ.ಜಿ. ವೃಷಭೆಂದ್ರ, ಮಂಜುನಾಥ, ಸಮಾಜ ಸೇವಕರಾದ ವಿವೇಕಾನಂದ, ಎನ್.ಬಿ. ಸುನಿಲ್, ಚಾರ್ಲಿ ,ಅಂಜಿನಣ್ಣ, ತೂಗದಲಿ ರಾಘವೇಂದ್ರ, ಡಂಬರ್ ವೆಂಕಟೇಶ್, ಡಿ ಸೋಮಶೇಖರ್, ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿಲಾಯಿತು.ಗಣೇಶೋತ್ಸವ ವವನ್ನು ಹಿಂದೂ ಮಹಾಗಣಪತಿ ಸೇವಾ ಸಮಿತಿಯ ಸರ್ವ ಸದಸ್ಯರು ಭಾಗಿಯಾಗಿ ಯಶಸ್ವಿಗೊಳಿಸಿದರು,ಈ ಸಂದರ್ಭದಲ್ಲಿ ಸಂತೆ ಮೈದಾನದ ಹಿರಿಯ ನಾಗರೀಕರು ಯುವಕರು,ಮಹಿಳೆಯರು ಮಕ್ಕಳು ಭಾಗಿಯಾಗಿದ್ದರು.ಅಸಂಖ್ಯಾತ ಭಕ್ತರು ಸಾಕ್ಷಿಯಾದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
