;

ಗಾಂಧಿನಗರ ಪಿಡಿಒ ವರ್ತನೆ ಖಂಡಿಸಿ ಸದಸ್ಯರೆಲ್ಲ ಸಭೆ ಬಹಿಷ್ಕಾರ…!!!

ಗಾಂಧಿನಗರ ಪಿಡಿಒ ವರ್ತನೆ ಖಂಡಿಸಿ ಸದಸ್ಯರೆಲ್ಲ ಸಭೆ ಬಹಿಷ್ಕಾರ.

ಸಿಂಧನೂರ. ಸೆ.6 ಆರು ತಿಂಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಯಾವುದೆ ಸರ್ಕಾರದ ಅಭಿವೃದ್ಧಿ ಕೆಲಸಗಳು ಯಾಗುತ್ತಿಲ್ಲ ಪಿಡಿಒ ವರ್ತನೆ ಖಂಡಿಸಿ ಇಂದು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯನ್ನು ಸರ್ವ ಸದಸ್ಯರು ಬಹಿಷ್ಕಾರ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಗಾಂಧಿನಗರ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಇಂದು ಗ್ರಾಮ ಪಂಚಾಯಿತಿಯಲ್ಲಿ ಕರೆಯಲಾಗಿತ್ತು ಚುನಾಯಿತ ಗ್ರಾಮ ಪಂಚಾಯಿತಿಯ ಸದಸ್ಯರನ್ನು ಗೌರವದಿಂದ ನೊಡದೆ ಕಡೆಗಣಿಸಿ ಮನಸ್ಸಿಗೆ ಬಂದ ಹಾಗೆ ಆಡಳಿತ ನಡೆಸಿದರೆ ನಾವ್ಯಾಕೆ ಗ್ರಾಮ ಪಂಚಾಯಿತಿಯ ಸಾಮಾನ್ಯ  ಸಭೆಗೆ ಬರಬೇಕು ಎಂದು  ಸುಮಾರು 26 ಜನ ಗ್ರಾಮ ಪಂಚಾಯಿತಿಯ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದರು.

ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಕರೆದಿಲ್ಲ ಅಲ್ಲದೆ ಗ್ರಾಮ ಸಭೆ ಮಾಡಲಾರದ ಕಾರಣ ಇನ್ನು ಬಡವರಿಗೆ ಮನೆಗಳು ದೊರಕಿಲ್ಲ ಅಲ್ಲದೆ 15 ನೆ ಹಣಕಾಸು ಖರ್ಚಯಾಗಿಲ ನಿಮಗೆ ಹೇಳುವರು ಕೇಳುವರು ಯಾರು ಇಲ್ಲವಾ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಇಲ್ಲದಿದ್ದರೆ ನೀವು ನಮ್ಮ ಪಂಚಾಯಿತಿಯಲ್ಲಿ ಕೆಲಸ ಮಾಡದೆ ಬೇರೆ ಕಡೆ ಹೋಗಿ ಎಂದು ಎಲ್ಲ ಸದಸ್ಯರು ಒಮ್ಮತದ ನಿರ್ಧಾರ ತೆಗೆದುಕೊಂಡು ಪಿಡಿಒ ಶೋಬಾರಾಣಿ ಗೆ ತೀರ್ವ ತರಾಟೆಗೆ ತೆಗೆದುಕೊಂಡರು

ನೀವು ಹೇಳಿದಂತೆ ನಾನು ಕೇಳುವುದಿಲ್ಲ ನಮ್ಮ ಮೇಲಾದಿಕಾರಿಗಳು ವರ್ಗಾವಣೆ ಮಾಡಿದರೆ ಹೋಗುತ್ತೆನೆ ಸಾಮಾನ್ಯ ಸಭ ಮಾಡದಿದ್ದರೆ ನನಗೇನು ಆಗುವದಿಲ್ಲ ನಿಮ್ಮ ಸದಸ್ಯತ್ವ ರದ್ದಾಗುತ್ತದೆ ಎನ್ನುವ ಮೂಲಕ ಸದಸ್ಯರಿಗೆ ಬೆದರಿಸುವ ಮಾತುಗಳನ್ನು ಪಿಡಿಒ ಆಡಿದ್ದು ಅವರ ಧೈರ್ಯ ಮೆಚ್ಚುವಂತಹದು. ವಾರದೊಳಗೆ ಫಿಡಿಒ ವರ್ಗಾವಣೆ ಮಾಡಬೇಕು ಇಲ್ಲದಿದ್ದರೆ ಇಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರು ರಾಜೀನಾಮೆ ಕೊಡುವುದಾಗಿ ಮೆಲಾದಿಕಾರಿಗಳಿಗೆ ದುರು ನೀಡಲಾಗಿದೆ ಎಂದು ಗ್ರಾಮ ಪಂಯಿತಿಯ ಅಧ್ಯಕ್ಷ ರಾದ ದುರ್ಗಪ್ಪ ನಾಯಕ ಹಿರಿಯ ಸದಸ್ಯರಾದ ಗೋಪಿ ನೀಡು ಕೃಷ್ಣ ಬಸವರಾಜ ಸೇರಿದಂತೆ 26 ಸದಸ್ಯರು ಅಗ್ರಹಿಸಿದರು..

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;