ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಕೋಡಿಹಳ್ಳಿ ಗ್ರಾಮದ ಕೆರೆಗೆ ಶಾಶ್ವತ ನೀರು ತುಂಬಿಸುವಂತೆ ಅಗ್ರಹ ಹ.ಬೊ. ಹಳ್ಳಿ. ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಕೆಆರ್‌ಎಸ್ ಪಕ್ಷದ ವತಿಯಿಂದ, ಕೋಡಿಹಳ್ಳಿ ಗ್ರಾಮದ ಕೆರೆಗೆ ಶಾಶ್ವತ ಕುಡಿಯುವ ನೀರು ತುಂಬಿಸುವ ಯೋಜನೆ ಕುರಿತು. ತಾಲೂಕ ಕಚೇರಿಯ ಮುಂಭಾಗದಲ್ಲಿ ಧರಣಿ ಕೊಡಲಾಯಿತು . ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ದೊಡ್ಮನಿ ಮಾತನಾಡಿ, ಜಿ ಕೋಡಿಹಳ್ಳಿ ಗ್ರಾಮದವರು ಕುಡಿಯುವ ನೀರಿನ ಸಮಸ್ಯೆ ಇದೆ ನಿಮ್ಮ ಪಕ್ಷದ ಹೋರಾಟದಿಂದ ನಮ್ಮ ಗ್ರಾಮದ ರೈತರಿಗೆ ಶಾಶ್ವತವಾಗಿ ಕುಡಿಯುವ ನೀರು ಒದಗಿಸಲು ಸಂಬಂಧ ಪಟ್ಟಂತ ಅಧಿಕಾರಿಗಳಿಂದ ನಮಗೆ ಸಹಾಯ ಮಾಡಿ, ಎಂದು ಸುಮಾರು 15 ದಿನಗಳಿಂದ ನಿರಂತರ. ಮೇಜರ್ ಇರಿಗೇಶನ್ ರಾಘವೇಂದ್ರ ಇವರಿಗೆ ಹಾಗೂ ಇಲ್ಲಿನ ದಂಡಾಧಿಕಾರಿಗಳಿಗೆ ಈಗಾಗಲೇ ಮೂರು ಬಾರಿ ಮನವಿ ಪತ್ರ ಸಲ್ಲಿಸಿದರು ಸಹ ಸ್ಪಂದಿಸಿರುವುದಿಲ್ಲ ಅನೇಕ ಭಾರಿ ದೂರವಾಣಿ ಮುಖಾಂತರ ಕರೆ ಮಾಡಿದರೆ ಅದಕ್ಕೆ ಸ್ಪಂದಿಸಿ ಮೂರು ದಿವಸ ಅಥವಾ ಒಂದು ವಾರ ಕಾಲಾವಕಾಶ ಕೊಡಿ ಅನ್ನುತ್ತಾರೆ, ಆದರೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕರೆ ಮಾಡಿದರೆ ಯಾವುದೇ ರೀತಿಯಿಂದ ಕರೆಗೆ ಸ್ಪಂದಿಸುತ್ತಿಲ್ಲ, ಮೂರು ಬಾರಿ ಕೆರೆ ಯು ಕೋಡಿ ಬಿದ್ದು ನಿರಂತರವಾಗಿ ನೀರು ಅನಾವಶ್ಯಕವಾಗಿ ನೀರು ಡ್ಯಾಮಿಗೆ ಹರಿದು ಹೋಗುತ್ತಿದೆ, ಅತಿ ಹೆಚ್ಚಾದ ನೀರನ್ನು ಕೋಡಿಹಳ್ಳಿ ಗ್ರಾಮದ ಕೆರೆಗೆ ನೀರನ್ನು ಹರಿಸಿ ಎಂದು ಈ ಸಂದರ್ಭದಲ್ಲಿ, ಎಷ್ಟೇ ಮನವಿ ಮಾಡಿಕೊಂಡರು, ಪ್ರಯೋಜನವಾಗದೆ, ದಂಡಾಧಿಕಾರಿಗಳು ಮಲತಾಯಿ ಧೋರಣೆ ಮಾಡುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ನಾವು ಹಗಲು-ರಾತ್ರಿ ತಹಸಿಲ್ದಾರ್ ಕಚೇರಿ ಮುಂದೇನೆ ಧರಣಿಗೆ ಕುಂತು ಆ ನೀರನ್ನು ಕೆರೆಗೆ ತುಂಬಿಸುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ ಈಗಾಗಲೇ ನಾವು ಮಾನ್ಯ ದಂಡಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಈಗಾಗಲೇ ಕೋಟಿಗಟ್ಟಲೆ ಖರ್ಚು ಮಾಡಿ ಪೈಪ್ಲೈನ್ ಮಾಡಿದ್ದಾರೆ, ಪೈಪ್ ಲೈನ್ ಮುಖಾಂತರವಾದರೂ ನೀರು ಹರಿಸಿ ಎಂದರೆ ಪೈಪ್ಲೈನ್ ದುರಸ್ತಿ ಇದೆ ಅಂತ ಹೇಳುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಜನಪ್ರತಿನಿಧಿಗಳು ಆ ಗ್ರಾಮಕ್ಕೆ ಭೇಟಿಯಾದಾಗ ರೈತರ ಸಮಸ್ಯೆಗೆ ಸ್ಪಂದಿಸಿ, ಕೇವಲ ಮೂರು ದಿನ ಮಾತ್ರ ನೀರು ಒದಗಿಸಿದರು.

ಆದರೆ ಇಲ್ಲಿಯವರೆಗೂ ಈ ಕಡೆ ಭೇಟಿ ನೀಡಿಲ್ಲ. ಮತ್ತೆ ಮುಂದೆ ಚುನಾವಣೆ ಬಂದಾಗ ಮಾತ್ರ ಈ ಗ್ರಾಮದ ರೈತರ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗುತ್ತಾರೆ, ಇದು ಕೇವಲ ಚುನಾವಣೆಗೋಸ್ಕರ ರೈತರಗೋಳಿಗೆ, ಮೊಸಳೆ ಕಣ್ಣೀರು, ಹಾಕುತ್ತಾರೆ. ಈ ವಿಷಯದ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳು ಸಹ ಮನವಿ ಪತ್ರದ ಪ್ರತಿಯನ್ನು ಸಲ್ಲಿಸಿರುತ್ತೇವೆ, ಇನ್ನು ಮುಂದೆ ಆದರೆ ಈ ತಾಲೂಕಿನ ದಂಡಾಧಿಕಾರಿಗಳು ಜಿ.ಕೋಡಿಹಳ್ಳಿ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಿ ಕೆರೆಗೆ ನೀರು ತುಂಬಿಸುವ ಯೋಜನೆ ಸಂಪೂರ್ಣಗೊಳಿಸುವಿರಾ? ಎಂದು ಆಕ್ರೋಶ ವ್ಯಕ್ತಪಡಿಸಿದ ರು. ಈ ಸಂದರ್ಭದಲ್ಲಿ, ಕೆ .ಆರ್. ಎಸ್. ಪಕ್ಷದ ವಿಜಯನಗರ ಜಿಲ್ಲಾ ಉಪಾಧ್ಯಕ್ಷರಾದ, ಎಂ ಮುದುಕಪ್ಪ, ಈಡಿಗರ ಕರಿಬಸಪ್ಪ ರೈತ ಘಟಕ ಜಿಲ್ಲಾಧ್ಯಕ್ಷರು, ಟಿ ನಜಿರ್ ಅಲ್ಪಸಂಖ್ಯಾತ ಘಟಕ (ವಿಜಯನಗರ). ವೀರನಗೌಡ ಎಚ್. ಜಿಲ್ಲಾ ಯುವ ಘಟಕ ಅಧ್ಯಕ್ಷ, ಹಾಗೂ ಜಿ. ಕೊಡಿಹಳ್ಳಿ ಗ್ರಾಮಸ್ಥರು ಮತ್ತು ಕೆ. ಆರ್. ಎಸ್ ಪಕ್ಷದ ಸೇನಾ ನಿಗಳು ಭಾಗವಹಿಸಿದ್ದರು…
ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
