;

ಪೌಷ್ಟಿಕ ಆಹಾರ ಸೇವನೆ ಸದೃಢ ಆರೋಗ್ಯ ನ್ಯಾ.ಆಚ್ಚಪ್ಪ…!!!

ಪೌಷ್ಟಿಕ ಆಹಾರ ಸೇವನೆ ಸದೃಢ ಆರೋಗ್ಯ ನ್ಯಾ.ಆಚ್ಚಪ್ಪ

ಸಿಂಧನೂರು ಸೆ.7.ಸೆಪ್ಟೆಂಬರ ತಿಂಗಳವನ್ನು ಪೌಷ್ಟಿಕ ಆಹಾರ ದಿನದ ಮಾಸಾಚರಣೆಯನ್ನಾಗಿ ಸರ್ಕಾರ ಆಚರಣೆ ಮಾಡುತ್ತಿದ್ದು ಸರ್ಕಾರದ ಪೌಷ್ಟಿಕ ಆಹಾರ ದಿನಾಚರಣೆಯ ಯೋಜನೆಯು ಒಳ್ಳೆಯ ಯೋಜನೆಯಾಗಿದ್ದು ಈ ಸೌಲಭ್ಯವನ್ನು ಎಲ್ಲಾರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಎರಡನೆ ಅಪರ ಸಿವಿಲ್ ನ್ಯಾಯಾಧೀಶರಾದ ಆಚಪ್ಪ ದೊಡ್ಡ ಬಸವರಾಜ ಹೇಳಿದರು.

ತಾಲುಕಾ ಕಾನೂನು ಸೇವಾ ಸಮಿತಿ,ತಾಲುಕು ನ್ಯಾಯವಾದಿಗಳ ಸಂಘ,  ತಾಲುಕಾ ಆಡಳಿತ, ತಾಲುಕಾ ಪಂಚಾಯತ, ಶಿಕ್ಷಣ, ಆರೋಗ್ಯ,ಮಹಿಳಾ ಮತ್ತು ಮಕ್ಕಳ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಆನಂದ ಪಬ್ಲಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪೌಷ್ಟಿಕ ದಿನಾಚರಣೆ ಹಾಗೂ ಕಾನುನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬೇರೆ ಆಹಾರ ಸೇವಿಸಿ ಆರೋಗ್ಯ ಕೆಡಿಸಿಕೊಳ್ಳದೆ ಪೌಷ್ಟಿಕ ಆಹಾರ ಸೇವಿಸಿ ಉತ್ತಮ ಆರೋಗ್ಯ ದಿಂದ ಸಂತೋಷದಿಂದ ಜೀವನ ನಡೆಸಬೇಕು ಎಂದರು

ಹಿಂದಿನ ನಮ್ಮ ಹಿರಿಯರು ಪೌಷ್ಟಿಕ ಆಹಾರ ಸೇವಿಸಿ ಗಟ್ಟಿ ಮುಟ್ಟಿಯಾಗಿ ಇದ್ದು ನೂರಾರು ವರ್ಷ ಬಾಳಿ ಬದುಕಿ ರೋಗ ರುಜೀನ ಗಳಿಂದ ದೂರ ಇರುತ್ತಿದ್ದರು, ಹಿಂದಿನ ಹಿರಿಯರಂತೆ ಪೌಷ್ಟಿಕ ಆಹಾರ ಸೇವಿಸಬೇಕು ಮಗುವಿಗೆ ಎದೆ ಹಾಲು ನೀಡಿದರೆ ಸೌಂದರ್ಯ ಹಾಳಾಗುತ್ತದೆ ಎನ್ನುವ ಮನೋಭಾವ ಹೊಂದಿದ್ದಾರೆ ಮಗುವಿಗೆ ತಾಯಿ ಎದೆ ಹಾಲು ಅಮೃತ ಸಮಾನವಾಗಿದೆ. ಎದೆ ಹಾಲು ಮಗುವಿಗೆ ನೀಡಿದರೆ ಮಗು ಆರೋಗ್ಯವಾಗಿರುತ್ತದೆ ಅಲ್ಲದೆ ಮಹಿಳೆಯರು ಸಹ ಸ್ಥನ ಕ್ಯಾನ್ಸರ್ ನಿಂದ ಬಚಾವ ವಾಗುತ್ತಾರೆ ಇದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರದಾನ ಸಿವಿಲ್ ನ್ಯಾಯಾಧೀಶರಾದ ಕೋಟೆಪ್ಪ ಕಾಂಬಳೆ ಮಾತನಾಡಿದರು .

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ  ಬೀಮನಗೌಡ, ಕಾರ್ಯದರ್ಶಿ ವಿರೇಶ ಚಿಂಚರಚಿ,  ಖಜಾಂಚಿ ವೀರಭದ್ರಗೌಡ,  ಸಹಾಯಕ ಅಬಿಯೋಜಕರಾದ ಮಾರುತಿ ಕಲ್ಲೂರ, ತಹಸೀಲ್ದಾರ ಅರುಣ್ ಹೆಚ್. ದೇಸಾಯಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ, ಬಿ.ಇ.ಒ ಶರಣಪ್ಪ ವಟಗಲ್,  ಸಿಡಿಪಿಒ ಅಶೋಕ,  ಲಿಂಗನಗೌಡ,  ಆನಂದ ಪಬ್ಲಿಕ ಶಾಲೆಯ ಅಧ್ಯಕ್ಷರಾದ  ಗೌತಮ ಮೆಹತಾ,  ಕ್ಷೇತ್ರ ಆರೋಗ್ಯ ಅಧಿಕಾರಿಗಳಾದ ಗೀತಾ ಹಿರೇಮಠ  ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು  ಮೇಲ್ವಿಚಾರಕಿಯರು  ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು .

ಇದೆ ಸಂದರ್ಭದಲ್ಲಿ ಹಲವಾರು ಗರ್ಭಿಣಿ ಮಹಿಳೆಯರಿಗೆ ಇಲಾಖೆಯ ವತಿಯಿಂದ ಉಡಿತುಂಬುವ ಹಾಗೂ ಮಕ್ಕಳಿಗೆ  ಅನ್ನ ಪ್ರಾಸನ ಮಾಡಲಾಯಿತು ವಿವಿಧ ರೀತಿಯ ಪೌಷ್ಟಿಕ ಆಹಾರ ಪದಾರ್ಥಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡಿಕೊಂಡು ಬಂದು ಕಾರ್ಯಕ್ರಮದಲ್ಲಿ ಪ್ರದರ್ಶನ ಕ್ಕೆ ಇಡಲಾಗಿತ್ತು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;