ಮಧ್ಯ ಮುಕ್ತ ಸಮಾಜ ನಿರ್ಮಾಣ ಸಂಕಲ್ಪ ಮಾಧವ
ಸಿಂಧನೂರ ಸೆ.7 ಕುಡಿತದ ಕೆಟ್ಟ ಚಟದಿಂದ ಬಡ ಜನರು ಹಾಗೂ ಕೃಷಿ ಕೂಲಿ ಕಾರ್ಮಿಕರ ಕುಟುಂಬಗಳು ಕಣ್ಣಿರಿನಲ್ಲಿ ಕೈತೋಳೆಯುತ್ತಿದ್ದು. ಇದರಿಂದ ಅವರು ಸಮಾಜದಲ್ಲಿ ತಲೆ ಎತ್ತಿ ನಡೆಯಲಾರದಂತಹ ಜೀವನ ನಡೆಸುತ್ತಿದ್ದು, ಮದ್ಯ ಚಟ ಬಿಡಿಸಿ ಅವರು ಸಮಾಜದಲ್ಲಿ ಎಲ್ಲರಂತೆ ತಲೆ ಎತ್ತಿ ನಡೆಯುವಂತೆ ಮಾಡುವ ಮೂಲಕ ಮದ್ಯ ಮುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ವನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯವರು ಕನಸು ಕಂಡಿದ್ದಾರೆ ಎಂದು ಜನ ಜಾಗೃತಿ ವೇದಿಕೆಯ ಯೋಜನಾಧಿಕಾರಿ ಮಾಧವ ನಾಯಕ ಹೇಳಿದರು .
ಅವರು ನಗರದ ಅಂಬೇಡ್ಕರ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ ಸಿಂಧನೂರ. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕರ್ನಾಟಕ ರಾಜ್ಯ ಮದ್ಯ ಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯೋಗದಲ್ಲಿ ನಡೆದ 1592 ನೆ ಮದ್ಯ ವರ್ಜನೆ ಶಿಬಿರದ ತಯಾರಿಕೆಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮದ್ಯ ಸೇವನೆಯಿಂದ ಆರೋಗ್ಯ ಕೆಟ್ಟು ಕುಟುಂಬಗಳು ಬೀದಿಗೆ ಬರುತ್ತಿವೆ ಅಲ್ಲದೆ ಮಕ್ಕಳ ಶಿಕ್ಷಣ ಕುಂಠಿತವಾಗಿ ಮಕ್ಕಳ ಭವಿಷ್ಯ ಕೂಡ ಹಾಳಾಗುತ್ತಿದೆ ಎಂದರು .
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಿಂದ ನಗರದಲ್ಲಿ ಸೆ.24 ರಿಂದ ಅಕ್ಟೋಬರ 2 ವರೆಗೆ ಎಂಟು ದಿನಗಳ ಕಾಲ ಮದ್ಯ ವರ್ಜನೆ ಶಿಬಿರ ನಡೆಸಲಾಗುತ್ತಿದ್ದು ಮದ್ಯ ವ್ಯಸನಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಇದಕ್ಕೆ ಜನ ಪ್ರತಿನಿಧಿಗಳು ಸಂಘ ಸಂಸ್ಥೆಗಳ ಮುಖಂಡರು ಸಾರ್ವಜನಿಕರ ಸಹಕಾರ ಅಗತ್ಯ ಎಂದರು .
ನಂಜುಂಡಯ್ಯಗುರುವಿನ ದಿವ್ಯ ಸಾನಿಧ್ಯ ವಹಿಸಿದ್ದರು. ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ, ಪಿಕಾರ್ಡಾ ಬ್ಯಾಂಕ ಅಧ್ಯಕ್ಷ ರಾದ ದೊಡ್ಡ ಬಸವರಾಜ, ಆರ್.ಡಿ.ಸಿ.ಸಿ ಬ್ಯಾಂಕ ನಿರ್ದೇಶಕರಾದ ಸೋಮನಗೌಡ ಬಾದರ್ಲಿ, ನಗರ ಸಭೆಯ ಸದಸ್ಯರಾದ ಕೆ.ರಾಜಶೇಖರ, ದಾಸರಿ ಸತ್ಯ ನಾರಾಯಣ, ಚಂದ್ರಶೇಖರ ಮೈಲಾರ, ಸುರೇಶ ಜಾಧವ, ಬಿಜೆಪಿ ಅಧ್ಯಕ್ಷರಾದ ಹನಮೇಶ ಸಾಲಗುಂದ, ಅಭಿಷೇಕ ನಾಡಗೌಡ, ಎನ್ ಅಮರೇಶ, ಅಂಬ್ರೂಸ, ಜಗದೀಶ, ಗಂಗಣ್ಣ ಡಿಸ್, ಜನ ಜಾಗೃತಿ ವೇದಿಕೆಯ ಮುಖಂಡರಾದ ವೀರುಪಾಕ್ಷಪ್ಪ ಬಳ್ಳಾರಿ,ಚಂದ್ರಶೇಖರ ಶೆಟ್ಟಿಬಳ್ಳಾರಿ, ಶರಣಬಸವ ಗೋರೆಬಾಳ, ಎಂ.ಭಾಸ್ಕರ, ಮರಿಬಸವ, ಸಂಗೀತ ಸಾರಂಗ ಮಠ, ಶೇಖರ ಶೆಟ್ಟಿ, ಮೇಲ್ವಿಚಾರಕಿರಾದ ನಂದಾ, ಪ್ರತಿಮಾ, ಎರಡು ವಲಯದ ಸೇವಾ ಪ್ರತಿನಿಧಿಗಳು ಹಾಗು ಸಾರ್ವಜನಿಕರು ಸಭಯಲ್ಲಿ ಪಾಲ್ಗೊಂಡಿದ್ದರು …

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
