;

90% ವಚನ ವಂಚನೆ,ಬಿಜೆಪಿ ಸರ್ಕಾರದ 40% ಕಮಿಷನ್ -ಬಸನಗೌಡ ಬಾದರ್ಲಿ…!!!

90% ವಚನ ವಂಚನೆ,ಬಿಜೆಪಿ ಸರ್ಕಾರದ 40% ಕಮಿಷನ್ -ಬಸನಗೌಡ ಬಾದರ್ಲಿ

ಸಿಂಧನೂರು : ಸ. 2. ಬಿಜೆಪಿ ವಚನ ಭ್ರಷ್ಟತೆ, ಭ್ರಷ್ಟಾಚಾರದಲ್ಲಿ 40% ಕಮಿಷನ್ ನಲ್ಲಿ ತೊಡಗಿದೆ ಎಂದು ರಾಜ್ಯ ಕಾಂಗ್ರೆಸ್‌ ಪಕ್ಷವು ‘90% ವಚನ ವಂಚನೆ’ ಹೆಸರಿನಲ್ಲಿ ಸರ್ಕಾರವನ್ನು ಪ್ರಶ್ನಿಸುವ ಜನ ಜಾಗೃತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬಸನಗೌಡ ಬಾದರ್ಲಿ ತಿಳಿಸಿದರು.

ನಗರದ ಕುಷ್ಟಗಿ ರಸ್ತೆಯಲ್ಲಿರುವ ತಮ್ಮ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ
2018 ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿಯು ಅಧಿಕಾರದ ಪಟ್ಟಕ್ಕೇರಲು ಜನತೆಗೆ 600 ಭರವಸೆ ನೀಡಿದ್ದ ಬಿಜೆಪಿಯು ಕೇಂದ್ರದಲ್ಲಿ ಎಂಟು ವರ್ಷ, ರಾಜ್ಯದಲ್ಲಿ ಮೂರು ವರ್ಷ ಅಧಿಕಾರ ನಡೆಸಿದರೂ ಶೇ.10ರಷ್ಟು ಭರವಸೆ ಮಾತ್ರ ಈಡೇರಿಸಿದೆ. ಹೀಗಾಗಿ ಶೇ.90ರಷ್ಟು ಭರವಸೆ ಈಡೇರಿಸದ ‘90 ಪರ್ಸೆಂಟೇಜ್‌ ವಚನ ವಂಚನೆ’ ಸರ್ಕಾರವಾಗಿದೆ. ರಾಜ್ಯದ ಜನರಿಗೆ ಉತ್ತರಿಸುವ ತಾಕತ್ತು ಬಿಜೆಪಿಗೆ ಇದೆಯೇ? ಎಂದು ಕಾಂಗ್ರೆಸ್‌ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬಸನಗೌಡ ಬಾದರ್ಲಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ 40 % ಸರ್ಕಾರವಾಗಿದ್ದು, ಲೂಟಿ ಹೊಡೆಯುವುದು ಬಿಟ್ಟು ಬೇರೇನು ಮಾಡುತ್ತಿಲ್ಲ, ರಾಜ್ಯದ ಮಾನ ಹರಾಜು ಹಾಕಿದ್ದಾರೆ. ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಿದ್ದಾರೆ ಎಂದರು.

ನಿಮ್ಮ ಹತ್ತಿರ ಇದೆಯಾ ಉತ್ತರ : ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಕ್ಕೆ ನಿಮ್ಮ ಹತ್ತಿರ ಇದೆಯಾ ಉತ್ತರ ಹೆಸರಿನಲ್ಲಿ ಸರಣಿ ಪ್ರಶ್ನೆಗಳನ್ನು ಕೇಳುವ ಅಭಿಯಾನಕ್ಕೆ ಕಚೇರಿಯಲ್ಲಿ ಪೋಸ್ಟರ್‌ ಗಳನ್ನು ಹಿಡಿದು ಚಾಲನೆ ನೀಡಿದರು.ಯುವಕರಿಗೆ ಎರಡು ಕೋಟಿ ಉದ್ಯೋಗ,ವಿಧ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಐದುನೂರು ಸಾವಿರ ಕೋಟಿ ದೇವಸ್ಥಾನಗಳ ಜಿರ್ಣೊದ್ದಾರ , ಹದಿನೈದು ಸಾವಿರ ಕೋಟಿ ವಸತಿ ಗೃಹಗಳ ನಿರ್ಮಾಣ,ವೆಬ್ ಸೈಟ್ ನಲ್ಲಿ ಕನ್ನಡ ಬಳಕೆ,ರೈತರ ಸಾಲಮನ್ನಾ ಉಚಿತ ಹತ್ತು ತಾಸು ವಿದ್ಯುತ್, ಮೂರು ಸಾವಿರ ಕೋಟಿ ನೀರಾವರಿ ಯೋಜನೆ, ಸ್ತ್ರೀ ಉನ್ನತ ನಿಧಿ, ಮಹಿಳೆಯರಿಗೆ ನೀಡಿದ್ದ ಭರವಸೆಗಳನ್ನು, ಹೊಸ ಪಿ.ಯು ಕಾಲೇಜುಗಳ ಅನುಮತಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ನೀಡಿ ಅಧಿಕಾರ ಹಿಡಿದು ಕೊನೆಗೆ ಭ್ರಷ್ಟಾಚಾರದ ಆಡಳಿತ ನಡೆಸಿ ಶ್ರೀಮಂತ ರನ್ನು ಶ್ರೀಮಂತರಾಗಿಸುವ ಕೆಲಸ ಮಾಡುತ್ತಾ ಮಧ್ಯಮ ವರ್ಗದವರ ದಿನ ನಿತ್ಯ ಬಳಕೆಯ ವಸ್ತುಗಳ ಗಗನಕ್ಕೆರಿಸಿ ಜನರು ಕಷ್ಟದ ಬದುಕಿನಲ್ಲಿ ಸಾಗಿಸುತ್ತಿದ್ದಾರೆಂದು ಆಕ್ರೋಶಭರಿತವಾಗಿ ಮಾತನಾಡಿದರು.

ಕಳೆಪೆ ಕಾಮಗಾರಿ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ :
ತಾಲೂಕಿನಾದ್ಯಂತ ನಡೆದ ಕಾಮಗಾರಿಗಳು ಸಿಸಿ ರಸ್ತೆ, ಕುಡಿಯುವ ನೀರು ಸೇರಿದಂತೆ ಪ್ರತಿಯೊಂದು ಕಳಪೆಯಿಂದ ಕೂಡಿವೆ ಅದನ್ನು ತೋರಿಸಲು ನಾವು ಸಿದ್ದರಿದ್ದೆವೆ ಶಾಸಕರು ಬಹಿರಂಗ ಚರ್ಚೆಗೆ ನಾಳೆನೇ ಬರಲಿ ಎಂದರು.

ಶಾಸಕ ವೆಂಕಟರಾವ್ ನಾಡಗೌಡರು 10 % ಕಮಿಷನ್ ತೆಗೆದು ಕೊಳ್ಳುವದರಿಂದ ಮಾಡುವ ಪ್ರತಿಯೊಂದು ಕೆಲಸಗಳು ಕಳಪೆಯಿಂದ ಕೂಡಿವೆ. ನಗರದಲ್ಲಿನ ಸಿಸಿರಸ್ತೆ ,ಡಾಂಬರಿಕರಣ ,ಜೆ.ಜೆ.ಎಮ್ ಯೋಜನೆ ಪ್ರತಿಯೊಂದು ಕಾಮಗಾರಿ ಮುಗಿದು ಎರಡು – ಮೂರು ತಿಂಗಳಲ್ಲಿ ಕಿತ್ತಿ ಹೋಗಿವೆ ತಾವು ಸಿದ್ದರಿದ್ದರೆ ಮಾದ್ಯಮದವರನ್ನೊಳಗೊಂಡಂತೆ ತೋರಿಸಲು ತಯಾರಿದ್ದೆವೆ ಜನರು ಮುಂದಿನ ಚುನಾವಣೆಯಲ್ಲಿ ಶಾಸಕರನ್ನು ಮನೆಗೆ ಕಳಿಸುವದರಲ್ಲಿ ಯಾವುದೇ ಸಂದೇಹವಿಲ್ಲ ಮತ್ತು ಕಳೆದ ಹದಿನೈದು ದಿನಗಳಲ್ಲಿ ಸುರಿದ ಬಾರಿ ಪ್ರಮಾಣ ಮಳೆಯಿಂದ ಸುಮಾರು 400ರಿಂದ 500 ಎಕರೆ ಬೆಳೆ ನಷ್ಟವಾಗಿದೆ ಮತ್ತು ಮೂರು ಜೀವ ಹಾನಿ, ಎರಡು ಪ್ರಾಣಿ ಬಲಿ ಯಾಗಿದ್ದು ಕೂಡಲೇ ಬೆಳೆ ಸರ್ವೆ ನಡೆಸಿ ಸಂಕಷ್ಟದ ರೈತರಿಗೆ ಪರಿಹಾರ ಕೊಡಿಸುವಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಎನ್ ಬಡಿಗೇರ, ವೆಂಕಟೇಶ ನಾಯಕ ರಾಗಲಪರ್ವಿ, ಶಿವಕುಮಾರ ಜವಳಿ ,ಶರಣಯ್ಯ ಸ್ವಾಮಿ , ಖಾಜಾ ಹುಸೇನ್ ರೌಡಕುಂದಾ ,ಸಿದ್ದು ಜಿನೂರು ,ಅಮರೇಶ ಗಿರಿಜಾಲಿ , ಇಂದುಮತಿ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;