ಕಿಚ್ಚ ಸುದೀಪ್ ಹುಟ್ಟುಹಬ್ಬ ವಿಶೇಷ ರೀತಿಯಲ್ಲಿ ಆಚರಣೆ.
ಸಿಂಧನೂರು :ಅ.2.ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ 49 ನೇ ಹುಟ್ಟು ಹಬ್ಬವನ್ನು ನಗರದ ಹೆಸರಾಂತ ಕಾರುಣ್ಯ ನೆಲೆ ಬುದ್ದಿಮಾಂದ್ಯ ವೃದ್ಧರ ಅನಾಥಾಶ್ರಮದಲ್ಲಿ ಹಣ್ಣು ಹಂಪಲು ಹಂಚುವ ಮೂಲಕ ಕೇಕ್ ಕತ್ತರಿಸಿ ಸುದೀಪ್ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ರಾಜು ಅಡವಿಬಾವಿ ಮಾತನಾಡಿ ಇದು ಬರಿ ಕಾರುಣ್ಯ ವೃದ್ಧಾಶ್ರಮ ಅಲ್ಲ ಅದು ದೇವರ ಆಶ್ರಮ ಎಲ್ಲ ದೇವರ ಆಶೀರ್ವಾದ ಕಿಚ್ಚ ಸುದೀಪ್ ಗೆ ಇರಲಿ.ಸಿನಿಮಾ ನೋಡುವುದರ ಮೂಲಕ ವಿದ್ಯಾವಂತ ಮತ್ತು ಅವಿದ್ಯಾವಂತರಿಗೆ ಸಮಾಜದ ಬಗ್ಗೆ ಸ್ಪಷ್ಟವಾಗಿ ಸಂದೇಶ ತಿಳಿಯುತ್ತದೆ.ಎಲ್ಲಾ ಕನ್ನಡ ಸಿನಿಮಾಗಳನ್ನು ಪ್ರೀತಿಸಿ ಗೌರವಿಸಿ ಅವರು ನನ್ನ ಹೀರೋ ಇವರು ನಮ್ಮ ಹೀರೋ ಅನ್ನೋದಕ್ಕಿಂತ ಸಿನಿಮಾ ಕನ್ನಡದ ನಟನ ಸಿನಿಮಾ ಎಂದು ಗೌರವಿಸಿ,ನಾನು ಕೊಹ್ಲಿ ಅಭಿಮಾನಿ ಅಂದ ಮಾತ್ರಕ್ಕೆ ಕೊಹ್ಲಿ ಔಟ್ ಆದ ನಂತರ ಮ್ಯಾಚ್ ಸೋಲಲಿ ಅಂತ ಹೇಳಲ್ಲ ಬಾಲರ್ ಗಳಾದರೂ ರನ್ ಹೊಡೆದು ಭಾರತ ಗೆಲ್ಲಲಿ ಅಂತ ಹೇಳ್ತೀವಿ ಅದೇ ರೀತಿ ಎಲ್ಲಾ ನಟರ ಚಿತ್ರಗಳು ಕನ್ನಡ ಚಿತ್ರ ಎಂದು ಭಾವಿಸಿ ಚಿತ್ರ ಗೆಲ್ಲಿಸೋಣ ಎಂದರು.

ನಂತರ ಶಿವನಗೌಡ ಗೋರೆಬಾಳ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮಾತನಾಡಿ ಕಲಾವಿದರನ್ನು ಒಂದು ಜಾತಿಗೆ ಸೀಮಿತ ಗೊಳಿಸಬೇಡಿ ಕನ್ನಡ ಚಿತ್ರರಂಗವನ್ನು ಭಾರತದಾದ್ಯಂತ ತಿರುಗಿ ನೋಡುವಂತೆ ಮಾಡಿದ ನಾಯಕ ನಟರು ನಮ್ಮ ಕನ್ನಡದ ಕಲಾವಿದರು ಕಿಚ್ಚ ಸುದೀಪ್ ಅಭಿಮಾನಿಗಳು ದುಂದುವೆಚ್ಚ ಮಾಡದೆ ಆಶ್ರಮದಲ್ಲಿ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವುದು ವಿಶೇಷವಾಗಿದೆ ಆಶ್ರಮದ ವೃದ್ಧರ ಆಶೀರ್ವಾದ ಕಿಚ್ಚ ಸುದೀಪ್ ಅವರಿಗೆ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಡಳಿತಾಧಿಕಾರಿಯಾದ ಚನ್ನಬಸಯ್ಯ ಸ್ವಾಮಿಯವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಸಿಕ್ಕಿದ್ದು ನಾಳೆತಮಿಳುನಾಡಿನಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದು ಅವರಿಗೆ ಕಿಚ್ಚ ಸುದೀಪ್ ಅಭಿಮಾನಿ ಬಳಗದಿಂದ ಶುಭಾಶಯಗಳು ತಿಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಿವನಗೌಡ ಗೊರೆಬಾಳ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ರಾಜು ಅಡವಿಭಾವಿ ರಾಜವಂಶ, ಯಂಕೋಬ ಭೂತಲದಿನ್ನಿ, ಲಕ್ಷ್ಮಣ್, ಪರಶುರಾಮ, ವರದಿಗಾರರು, ಪ್ರದೀಪ್ ಪೂಜಾರಿ, ನಾಗರಾಜ್ ತುರುವಿಹಾಳ, ಮೌನೇಶ್ ಬೇರ್ಗಿ, ಶರಣಬಸವ ನಾಯಕ,RK ಕಲಾವಿದ, ಇಂದುಮತಿ,ಸುರೇಶ ಸುಲ್ತಾನಪುರ, ಇನ್ನೂ ಅನೇಕ ಕಿಚ್ಚನ ಅಭಿಮಾನಿ ಬಳಗದವರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
