;

ಅಧಿಕಾರಿಗಳ ನಿರ್ಲಕ್ಷ್ಯ, ಕುಡಿಯುವ ನೀರಿಗಾಗಿ ಹಾಹಾಕಾರ…!!!

ಅಧಿಕಾರಿಗಳ ನಿರ್ಲಕ್ಷ್ಯ, ಕುಡಿಯುವ ನೀರಿಗಾಗಿ ಹಾಹಾಕಾರ.

ಸಿಂಧನೂರು : ತಾಲೂಕಿನ ಗೋರೆಬಾಳ ಕ್ಯಾಂಪಿನಲ್ಲಿ ಕಳೆದ 10 ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಕ್ಯಾಂಪಿನ ನಿವಾಸಿ ನಿವೃತ್ತ ಶಿಕ್ಷಕ ಹುಲುಗಪ್ಪ ಭೋವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋರೆಬಾಳ ಗ್ರಾಮ ಪಂಚಾಯಿತಿಗೆ ಸೇರಿದ ಗೋರೆಬಾಳ ಕ್ಯಾಂಪ್ ಗೆ ಕುಡಿಯುವ ನೀರು ಒದಗಿಸುವ ಕೊಳವೆ ಬಾವಿಯ ಮೋಟಾರ್ ದುರಸ್ತಿಗೀಡಾಗಿದ್ದು, ಕ್ಯಾಂಪಿನ ನಿವಾಸಿಗಳು ಕಳೆದ 10 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ.ನೀರಿಲ್ಲದೆ ಜನರ ಪರಿಸ್ಥಿತಿ ಅದೇಗೆಟ್ಟು ಹೋಗಿದೆ. ಇದುವರೆಗೂ ಯಾವುದೇ ಕಾರಣಕ್ಕೂ ಸರಕಾರ ಹಾಗೂ ಗ್ರಾಮ ಪಂಚಾಯತ್ ಆಡಳಿತ ಮಂಡಳಿ,ಗ್ರಾಮ ಪಂಚಾಯತಿಗೆ ಆಯ್ಕೆಯಾದ ಜನ ಪ್ರತಿನಿದಿಗಳು ಇದರ ಬಗ್ಗೆ ಗಮನಹರಿಸುತಿಲ್ಲ ಜನರಿಗೆ ಕುಡಿಯುವದಕ್ಕೆ ನೀರಿಲ್ಲ ಜನರಿಗೆ ತೊಂದರೆ ಆಗುತಿದ್ದೆ ಕೂಡಲೇ ಸರಕಾರ ಹಾಗೂ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಕ್ಯಾಂಪಿನ ಜನರಿಗೆ ಕುಡಿಯುವದಕ್ಕೆ ನೀರು ಬರುವಂತೆ ಮಾಡಬೇಕೆಂದು ನಿವೃತ್ತ ಶಿಕ್ಷಕರಾದ ಹುಲುಗಪ್ಪ ಬೊವಿ ಪತ್ರಿಕೆ ಮೂಲಕ ಮನವಿ ಮಾಡಿಕೊಂಡರು.

ನೂತನ ಹೊಸ ಕೆರೆಯಿಂದ ಕುದುರಿ ಪಂಪಣ್ಣ ಮನೆ ಹತ್ತಿರದ ಕೆರೆ ಪೈಪ್ ಲೈನ್ ಮಾಡಿ ಇಲ್ಲಿರುವ ಸಂಪಿಗೆ ನೀರು ಬಂದು ಬೀಳುತ್ತದೆ. ಅದಲ್ಲದೆ ಕ್ಯಾಂಪಿನಲ್ಲಿ ಮೂರು ಹಳೆಯ ಕೆರೆಗಳಿದ್ದು,ಕುದರಿ ಪಂಪಣ್ಣ ಅವರ ಮನೆ ಹತ್ತಿರ ಸುಮಾರು 1ಎಕರೆ ಕೆರೆ, ಗೀತಾ ಮಂದಿರ ಹತ್ತಿರ 30 ಗುಂಟೆ ಕೆರೆ, ಲೋಕನಗೌಡ ಮನೆ ಹತ್ತಿರ ಒಂದು ಎಕರೆ ಕೆರೆ, ಒಟ್ಟು 4 ಕೆರೆಗಳಿದ್ದು ಸಾವಿರಾರು ಜನಸಂಖ್ಯೆ ಇರುವ ಕ್ಯಾಂಪಿಗೆ 4 ಕುಡಿಯುವ ನೀರಿನ ಕೆರೆ ಇದ್ದರು ಕಳೆದ 10 ದಿನಗಳಿಂದ ನೀರಿಲ್ಲದೆ ಹಿಡಿ ಶಾಪ ಹಾಕುತ್ತಿದ್ದಾರೆ.ಮೋಟಾರ್ ದುರಸ್ತಿಗೀಡಾಗಿದ್ದು, ಸರಿಪಡಿಸಲು ಅಧಿಕಾರಿಗಳು ಮುಂದಾಗಿಲ್ಲ. ಅಲ್ಲದೇ ಸಾರ್ವಜನಿಕರು ಸಮಸ್ಯೆಯ ದೂರುಗಳನ್ನು ಸಲ್ಲಿಸಲು ತೆರಳಿದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಹತ್ತಿರ ಹಣ ಇಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಮನೆ ಮನೆಗೆ ಕುಡಿಯುವ ನೀರು (ಜೆ ಜೆ ಎಮ್ )ಜಾರಿಗೆ ತಂದಿದೆ. ಶಾಸಕರು ಹಾಗೂ ಸರಕಾರ ಕ್ಯಾಂಪಿನಲ್ಲಿ 3 ಎಕರೆಯಷ್ಟು ಹೊಲ ಖರೀದಿ ಮಾಡಿ ಆ ಸ್ಥಳದಲ್ಲಿ 3ಕೋಟಿಗೂ ಅಧಿಕ ಅನುದಾನ ನೀಡಿ ಹೊಸ ಕೆರೆ ನಿರ್ಮಾಣ ಮಾಡುತಿದ್ದೆ.ಆದರೆ ಆ ಕಾಮಗಾರಿ ಅರೆ ಬರೇ ಕಾಮಗಾರಿ ಮಾಡಿದ್ದು ಇನ್ನೂ ಸಾಕಷ್ಟು ಕಾಮಗಾರಿ ಬಾಕಿ ಇದೆ ಕಾಮಗಾರಿಯು ಆಮೇಗತಿಯಲ್ಲಿ ನಡೆಯುತ್ತಿದೆ.

 

ಸರಕಾರ ಮೊದಲ ಆದ್ಯತೆ ಗ್ರಾಮಗಳಲ್ಲಿನ ಜನರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಲು ಸಾವಿರಾರು ಕೋಟಿ ರೂಪಾಯಿಗಳು ಅನುದಾನ ನೀಡುತ್ತಿದೆ. ಆದರೆ ಕೆಲ ಗ್ರಾಮೀಣ ಭಾಗದ ಜನರಿಗೆ ಇನ್ನೂ ಕುಡಿಯುವದಕ್ಕೆ ನೀರು ಸಿಗುತ್ತಿಲ್ಲ.ಸರಕಾರ ಕುಡಿಯುವ ನೀರಿನ ಯೇಜನೆಯನ್ನು ಎಷ್ಟರ ಮಟ್ಟಿಗೆ ಅನುಷ್ಠಾನ ನೀಡಿದೆ. ಕ್ಯಾಂಪಿನಲ್ಲಿ ಸಾರ್ವಜನಿಕರು 10 ದಿನಗಳಿಂದ ಜನರಿಗೆ ಕುಡಿಯುವದಕ್ಕೆ ನೀರಿಲ್ಲವೆಂದು ಗ್ರಾಮ ಪಂಚಾಯತ್ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಮತ್ತು ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳನ್ನು ಕೇಳಿದರೆ ಕುಡಿಯುವ ನೀರಿನ ಮೋಟಾರ್ ಸುಟ್ಟು ಹೋಗಿದೆ ಅದನ್ನು ರಿಪೇರಿ ಮಾಡಲು ನಮ್ಮ ಬಳಿ ಹಣವಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ಪತ್ರಿಕೆ ಮುಂದೆ ತೋಡಿಕೊಂಡರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;