ಹರ್ ಘರ್ ತಿರಂಗಾ ಅಭಿಯಾನ, 8 ಸಾವಿರ ಶಾಲಾ ಮಕ್ಕಳಿಂದ ಜಾಥಾಕ್ಕೆ ಚಾಲನೆ.
ಸಿಂಧನೂರು : ಅ.12.ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಆ.13 ರಿಂದ 15ರ ವರೆಗೆ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.
ತಾಲೂಕು ಆಡಳಿತ, ನಗರಸಭೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಮಿನಿ ವಿಧಾನಸೌಧ ಮುಂಭಾಗದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದಲ್ಲಿ ಹುಟ್ಟಿದ ನಾವುಗಳು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವನ್ನು ಆಚರಿಸುತ್ತಿದ್ದೇವೆ. ಆದರೆ ನೂರು ವರ್ಷ ಆಚರಣೆ ಮಾಡುವ ಬಾಗ್ಯ ನಿಮಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಆಚರಣೆ ಮಾಡುವ ಬಾಗ್ಯ ಮೊದಲ ಬಾರಿಗೆ ಸಿಕ್ಕಿದೆ, ರಾಷ್ಟದ್ವಜಕ್ಕೆ ಅಗೌರವ ಆಗದೆ ಹಾಗೆ, ಅಪವಿತ್ರವಾಗದೆ ಹಾಗೇ , ಪ್ರತಿಯೊಬ್ಬರು ನೋಡಿಕೊಳ್ಳಬೇಕು.ಅಂದಾಗ ಮಾತ್ರ ದೇಶಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಗಾಂಧಿ ವೃತ್ತದಿಂದ ಸಾಗಿದ ಜಾಥಾ ಬಸವ ವೃತ್ತ, ಟಿಪ್ಪು ಸುಲ್ತಾನ್ ಸರ್ಕಲ್, ಹಳೆ ಬಜಾರ, ಕಿತ್ತೂರ ರಾಣಿ ಚೆನ್ನಮ್ಮ ಸರ್ಕಲ್, ಕನಕದಾಸ ಸರ್ಕಲ್, ವಾಲ್ಮೀಕಿ ವೃತ್ತದ ಮೂಲಕ “ಸ್ವಾತಂತ್ರ್ಯದ ನಡಿಗೆ, ಅಮೃತ ಮಹೋತ್ಸವದೆಡೆಗೆ” ನಡಿಗೆಯಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಜಾಥಾದಲ್ಲಿ ಭಾಗವಹಿಸಿದ್ದರು.
ಪಿ.ಎಸ್.ಐ.ಗಳಾದ ಯರಿಯಪ್ಪ,ಸೌಮ್ಯಹಿರೇಮಠ, ಸಂಚಾರಿ ಪಿ. ಎಸ್. ಐ. ಬಸವರಾಜ, ಪೋಲಿಸ್ ಸಿಬ್ಬಂದಿಗಳು ಸೇರಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷರಾದ ಕೊಲ್ಲಾ ಶೇಷಗಿರಿ ರಾವ್, ಪಿಎಲ್ ಡಿ. ಬ್ಯಾಂಕ ಅಧ್ಯಕ್ಷ ಎಂ. ದೊಡ್ಡ ಬಸವರಾಜ , ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಮದ್ವರಾಜ ಆಚಾರ್ಯ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್,ಬಸವರಾಜ ನಾಡಗೌಡ, ರಾಜೇಶ್ ಹಿರೇಮಠ, ಹನುಮೇಶ ಕೆ, ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ತಹಸೀಲ್ದಾರ ಅರುಣ್. ಹೆಚ್ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಕ್ಷೇತ್ರ ಶಿಕ್ಷಣ ಅಧಿಕಾರಿ ಶರಣಪ್ಪ ವಟಗಲ್, ತಾ.ಪಂ. ಇಓ ಲಕ್ಷ್ಮಿದೇವಿ, ಜಿ.ಪಂ.ಎಇಇ ಅನ್ನಪೂರ್ಣ, ಅಶೋಕರಡ್ಡಿ, ಸ.ಕ.ಇ.ಪ್ರಭಾರಿ ಅಧಿಕಾರಿ ವಿಜಯ್ ಎಸ್.ಕೆ, ಪ.ಪಂ.ಅಧಿಕಾರಿ ಶಿವಮಾನಪ್ಪ,ತಾಲೂಕು ಮಟ್ಟದ ಅಧಿಕಾರಿಗಳು, ಶಾಲಾ ಕಾಲೇಜಿನ ಉಪನ್ಯಾಸಕರು, ಪ್ರಾಧ್ಯಾಪಕರು,ಶಾಲಾ ಕಾಲೇಜು ವಿಧ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು….
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
