ತಾಯಕನಹಳ್ಳಿ ಗ್ರಾಮದಲ್ಲಿ ಸಾಮರಸ್ಯ ಸಾರುವ ಮೋಹರಂ ಅದ್ದೂರಿ ಆಚರಣೆ
ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ
ಸಮುದಾಯದವರು ಹೊನ್ನೂರ ಸ್ವಾಮಿಯ ಹಬ್ಬ ಆಚರಣೆ ಯನ್ನು ಸಂಭ್ರಮದಿಂದ
ವೇಷಗಳನ್ನು ಧರಿಸಿ ರಸ್ತೆಗಳಲ್ಲಿ ಓಡಾಡಿ ಕುಣಿದು
ಕುಪ್ಪಳಿಸಿ. ಹೊನ್ನೂರ ಸ್ವಾಮಿ ದೇವಸ್ಥಾನದ ಮುಂದೆ ಅಲೆಗುಣಿ ತೊಡುವ ಮೂಲಕ ಏಳು ದಿನಗಳ ಸವಾರಿ, ಕತ್ತಲರಾತ್ರಿ ಹಾಗೂ ಮೊಹರಂ ಕೊನೆ ದಿನ ಇಂದು ದೇವರನ್ನು ಹೊತ್ತು ಕೆಂಡಹಾಯುವ ಪರಿಪಾಠವಿದ್ದು ಅನೇಕ ಭಕ್ತರ ಹರಕೆಯನ್ನು ಮಾತನಾಡದೆ ಸನ್ನೆಯಲ್ಲೇ ಹರಕೆ ತೀರಿಸುವ ದೈವ ಎಂದು ತಿಳಿದ ಭಕ್ತರು ದೇವರ ಹರಕೆ ಹೊತ್ತು ಅನೇಕ ವೇಷ ಭೂಷಣ ಧರಿಸಿ ಹಲಗೆ ಸದ್ದಿನಲ್ಲಿ ಕುಣಿದು ಕುಪ್ಪಳಿಸಿ ಇನ್ನು ಕೆಲವರು ಅಲೆಕುಣಿಯಲ್ಲಿ ಹಾಕಿದ ಬೆಂಕಿಗೆ ಉಪ್ಪು ಹುಳ್ಳಿ ಕಟ್ಟಿಗೆ ತುಂಡುಗಳನ್ನು ಹಾಕಿ ಹರಕೆ ಕಟ್ಟಿಕೊಳ್ಳುತ್ತಾರೆ ಈ ಹಬ್ಬ ಮುಸ್ಲಿಂ ಸಮುದಾಯದ ಹಬ್ಬವಾದರೂ ಅನ್ಯ ಧರ್ಮದವರೇ ಹೆಚ್ಚಾಗಿ ಆಚರಿಸಲಿದ್ದಾರೆ.
ವರದಿ.ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
