;

ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾದರೂ ದಲಿತರಿಗೇಕೆ ಸಿಕ್ಕಿಲ್ಲ ಸ್ವಾತಂತ್ರ್ಯ.???

ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾದರೂ ದಲಿತರಿಗೇಕೆ ಸಿಕ್ಕಿಲ್ಲ ಸ್ವಾತಂತ್ರ್ಯ.

ಸಿಂಧನೂರು : ಅ. 8. 21ನೇ ಶತಮಾನದ ಈ ಆಧುನಿಕ ಯುಗದಲ್ಲಿ ನಾವಿದ್ದರೂ, ಕಾನೂನುಗಳು ಬಲಿಷ್ಠವಾಗಿದ್ದರು ಕೂಡಾ ಸಮಾಜದ ಕೆಲವು ಕಡೆಯಲ್ಲಿ ಸರ್ಕಾರದ ಆದೇಶ ಜಾರಿಗೆ ಬಾರದೆ ಪುಸ್ತಕದ ಬದನೇಕಾಯಿ ಯಂತಾಗಿದೆ.ಇನ್ನೂ ಕೂಡ ಜಾತಿ ಪದ್ಧತಿ, ಅಸ್ಪೃಶ್ಯತೆ ಹಾಗೆಯೇ ಉಳಿದುಕೊಂಡಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿ 75 ನೇ ವರ್ಷದ ಅಮೃತ ಮಹೋತ್ಸವ ಆಚರಿಸಲು ದೇಶ ಸಜ್ಜಾಗಿದೆ, ಆದರೆ ತಾಲೂಕಿನ ಗೋನವಾರ ಗ್ರಾಮದಲ್ಲಿನ ದಲಿತರಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬುದಕ್ಕೆ ಉದಾಹರಣೆ. ದೇವಸ್ಥಾನದಲ್ಲಿ 11 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಮೇಲ್ಜಾತಿಯವರಿಗೆ ಮತ್ತು ಕೆಳ ಜಾತಿಯವರಿಗೆ ಭೋಜನದ ವೇಳೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿದ್ದಾರೆ.

ಸುಕ್ಷೇತ್ರ ಗೋನವಾರ ಶ್ರೀ ಘನಮಠ ಶಿವಯೋಗಿಗಳ ಶಿಲಾ ಗದ್ದುಗೆ ಪ್ರತಿಷ್ಠಾಪನೆ ಹಾಗೂ ಪಂಚ ಕಳಸಾರೋಹಣ 46ನೇ ವರ್ಷದ ಶ್ರಾವಣ ಮಾಸದ ಪುರಾಣ ದಿ.ಅಗಸ್ಟ್ 01 ರಿಂದ 12 ರ ವರೆಗೆ ಪುರಾಣ ಪ್ರವಚನ ಪ್ರತಿದಿನ ಸಾಯಂಕಾಲ 7 ಘಂಟೆಗೆ ಸವರ್ಣೀಯರು ಗುಡಿಯೊಳಗಡೆ ಹಾಗೂ ಕಟ್ಟೆಯ ಮೇಲೆ ಕುಳಿತು ಕೊಂಡು ಪೂರಾಣ ಕೇಳಬೇಕು. ಗುಡಿಯ ಹೊರಗೆ ಅದು ರಸ್ತೆಯಲ್ಲಿ ಕುಳಿತು ದಲಿತರು ಪೂರಾಣ ಕೇಳಬೇಕು ಅದು ಸವರ್ಣೀಯರನ್ನು  ಮುಟ್ಟಿಸಿ ಕೊಳ್ಳುವಂತ್ತಿಲ್ಲ. ಪುರಾಣ ಮುಗಿದು ರಾತ್ರಿ ದಾಸೋಹ ನಡೆಯುತ್ತಿದ್ದು ಭೋಜನ ಸಂದರ್ಭದಲ್ಲಿ ಕುಳಿತುಕೊಳ್ಳಲು ಮೇಲ್ಜಾತಿಯವರಿಗೆ ಸಮುದಾಯ ಭವನದಲ್ಲಿ ತಟ್ಟೆ , ಕೆಳಜಾತಿಯ (ದಲಿತರು) ಜನರಿಗೆ ದೇವಸ್ಥಾನದ ಬಯಲು ಮೈದಾನದಲ್ಲಿ ಪತ್ರೂಳಿ ಪಡೆದು ಕುಳಿತು ಅನ್ನ ಸಾಂಬರ ಎತ್ತಿ ಹಾಕಿ ಅವಮಾನಿಸಿ  ಅಮಾನೀಯವಾಗಿ ವರ್ತಿಸಿ ಬಹಿರಂಗವಾಗಿ ಜಾತೀಯತೆ ಆಚರಣೆ ಮಾಡಲಾಗುತ್ತಿದ್ದು, ಊಟ ಮಾಡಿ ಮನೆಗೆ ಹೋಗಿ ನೀರು ಕುಡಿಯುವಂತ ಅನಿಷ್ಟ ಪದ್ಧತಿ ಆಚರಣೆ ಇರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ.

ಈ ಪಂತಿಬೇಧ ಪದ್ಧತಿಯನ್ನು ಪ್ರಶ್ನಿಸಿಲು ಗ್ರಾಮದಲ್ಲಿನ ದಲಿತರಿಗೆ ಧೈರ್ಯವಿಲ್ಲದಂತಾಗಿದೆ. ಯಾಕೆಂದರೆ ಅವರ ಬಡತನ,ಒಂದು ವೇಳೆ ಕೇಳಿದರೆ ಅವರ ಮೇಲೆ ಹಲ್ಲೆಗಳು ಆಗುವ ಭಯ ಇರುವದರಿಂದ ಕಣ್ಣಿಗೆ ಕಂಡರು ಕಾಣದಂತೆ  ಓದಿದ ಪ್ರಜ್ಞಾವಂತ ಯುವಕರು ಮೌನವಸಿರುವದು ದುರಂತದ ಸಂಗತಿಯಾಗಿದೆ.

ಮೇಲು-ಕೀಳು ಜಾತಿಯ ಬೇಧದಿಂದ ನೊಂದ ಕೆಲವು ದಲಿತರು ದೇವಸ್ಥಾನದಿಂದ, ಹೋಟೆಲ್ ನಿಂದ, ಕಟಿಂಗ್ ಶಾಪ್ ನಿಂದ ಹೊರಗೆ ಇರುವಂತಹ ಅನೇಕ ಘಟನೆಗಳು ಗ್ರಾ‌ಮೀಣ ಭಾಗದಲ್ಲಿ ಸಾಕಷ್ಟು ಉದಾಹರಣೆಗಳು ಇವೆ.

ದಲಿತರು ಸಹ ನಮ್ಮಂತೆ ಮನುಷ್ಯರು ಎಂದು ತಿಳಿಯದೆ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಕುಡಿಸಿ ಅದು ಮುಟ್ಟಿಸಿಕೊಳ್ಳದೆ ಎತ್ತಿ ಅನ್ನ ಸಾಂಬಾರ ಹಾಕಿ ಅವಮಾನ ಮಾಡುತ್ತಾರೆ ಎಂದರೆ ಇವರು ನಮ್ಮಂತೆ ಮನುಷ್ಯರು ಎನ್ನುವ ಅರಿವು ಬರುವದು ಯಾವಾಗ ಎಂಬುದು ಪ್ರಶ್ನೆಯಾಗಿದೆ.

ಆದರೆ ಅಸ್ಪೃಶ್ಯತೆ, ಸಾಮಾಜಿಕ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸಿ, ದಲಿತರಿಗೆ ನ್ಯಾಯ ಕೊಡಿಸಬೇಕಾದ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ ಸರ್ಕಾರ ವೇತನ ಪಡೆದು ತಲೆಕೆಡಿಸಿಕೊಳ್ಳದೆ ಗೊತ್ತಿದ್ದರೂ ಗೊತ್ತಿಲ್ಲದಾಗೆ ಕಣ್ಣು ಮುಚ್ಚಿ ಕುಳಿತಿದೆ.

ನಾಗರಿಕ ಸಮಾಜ ತಲೆ ತಗ್ಗಿಸುವಂತ ಸಮಾಜದ ಪಿಡುಗಾಗಿದೆ ಜಾತೀಯತೆ ಆಚರಣೆ ಮಾಡುವ ಮುಖಂಡರ ವಿರುದ್ಧ ತಾಲೂಕು ಆಡಳಿತ ನಿರ್ದಾಕ್ಷಣ್ಯವಾಗಿ ಕಠಿಣ ಕ್ರಮ ಕೈಗೊಂಡು ಇದಕ್ಕೆ ಕಡಿವಾಣ ಹಾಕಬೇಕು ಇದರ ಬಗ್ಗೆ ಗೊತ್ತಿದ್ದರು ಕ್ರಮ ಕೈಗೊಳ್ಳದ ಸಮಾಜ ಕಲ್ಯಾಣ ಇಲಾಖೆ, ಕಂದಾಯ,ಪೋಲೀಸ ಇಲಾಖೆಯ ಅಧಿಕಾರಿಗಳನ್ನು ಅಮಾನತ್ತು ಮಾಡುವಂತೆ ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;