;

ಕಾರುಣ್ಯ ಆಶ್ರಮದಲ್ಲಿ ಸಚಿವರಾದ ಬಿ.ಶ್ರೀರಾಮುಲು ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿದೆ, ವೆಂಕಟೇಶ ನಾಯಕ…!!!

ಕಾರುಣ್ಯ ಆಶ್ರಮದಲ್ಲಿ ಸಚಿವರಾದ ಬಿ.ಶ್ರೀರಾಮುಲು ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿದೆ — ವೆಂಕಟೇಶ ನಾಯಕ.

ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕರ್ನಾಟಕ ಬಿ ಶ್ರೀರಾಮುಲು ಯುವ ಪಡೆ (ರಿ)ಮಸ್ಕಿ ವತಿಯಿಂದ ಸಚಿವರಾದ ಬಿ. ಶ್ರೀರಾಮುಲು ಅವರ ಹುಟ್ಟುಹಬ್ಬವನ್ನು ಆಶ್ರಮದಲ್ಲಿ ಅನಾಥ ಹಿರಿಯ ವೃದ್ಧ ಜೀವಿಗಳು ಹಾಗೂ ಅನಾಥ ವಯಸ್ಕರ ಬುದ್ಧಿಮಾಂದ್ಯ ಜೀವಿಗಳಿಗೆ ಮಹಾಪ್ರಸಾದ ವಿತರಿಸಿ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಆಚರಿಸಿದರು. ಮಸ್ಕಿ ತಾಲೂಕ ಬಿಜೆಪಿ ಎಸ್. ಟಿ.ಮೋರ್ಚಾ ತಾಲೂಕ ಅಧ್ಯಕ್ಷರಾದ ವೆಂಕಟೇಶ ನಾಯಕ ಮಾತನಾಡಿ ಶ್ರೀರಾಮುಲು ಅವರ ಆಸೆಯಂತೆ ಕಾರುಣ್ಯ ಆಶ್ರಮದಲ್ಲಿ ನೊಂದು ಬೆಂದ ಹಿರಿಯ ಜೀವಿಗಳ ಹಾಗೂ ಬುದ್ಧಿಮಾಂದ್ಯ ಜೀವಿಗಳ ಮಧ್ಯೆ ಅವರ ಹುಟ್ಟುಹಬ್ಬವನ್ನು ನಮ್ಮ ಶರಣು ನಾಯಕ ಅವರ ನೇತೃತ್ವದಲ್ಲಿ ಆಚರಣೆ ಮಾಡುತ್ತಿರುವುದು ನನಗೆ ಬಹಳ ಖುಷಿಯನ್ನು ಉಂಟು ಮಾಡಿದೆ. ಸುಮಾರು 47,000 ಸಾಮೂಹಿಕ ಮದುವೆ ಮಾಡಿದ ಕೀರ್ತಿ ಶ್ರೀರಾಮುಲು ಅವರಿಗೆ ಸಲ್ಲುತ್ತದೆ. ಬಡಜನರ ದೀನದಲಿತರ ಹಿಂದುಳಿದ ವರ್ಗಗಳ ಮತ್ತು ಎಲ್ಲಾ ಸಮಾಜದ ಬಂಧುಗಳ ಪ್ರೀತಿಯನ್ನು ರಾಮುರವರು ಗಳಿಸಿದ್ದಾರೆ. ಅವರು ಆರೋಗ್ಯ ಸಚಿವರಿದ್ದಾಗ ಮಾಡಿದಂತಹ ವಾಜಪೇಯಿ ಆರೋಗ್ಯ ಶ್ರೀ ಇಂದು ಎಷ್ಟೋ ಜನರಿಗೆ ಉಚಿತವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತಿದೆ ಎಲ್ಲಾ ಧರ್ಮಗಳ ಗುರುಹಿರಿಯರ ಜೊತೆ ಸಂಬಂಧವಿಟ್ಟುಕೊಂಡಿರುವ ನಮ್ಮ ಶ್ರೀರಾಮುಲು ಅವರು ನಮ್ಮ ನಾಡಿನ ಹೆಮ್ಮೆ ಇಂದಿನ ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಹಿರಿಯ ಜೀವಿಗಳು ಶ್ರೀರಾಮುಲು ಅವರಿಗೆ ಆಶೀರ್ವಾದ ಮಾಡಿ ಅವರನ್ನು ಜಗತ್ತೇ ತಿರುಗಿ ನೋಡುವಂತಹ ಕ್ಷಣಗಳು ಬರಲಿ ಎಂದು ನಾವೆಲ್ಲ ಪ್ರಾರ್ಥಿಸಿ ರಾಮುಲು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಶುಭ ಹಾರೈಸುತ್ತಿದ್ದೇವೆ ಎಂದು ಮಾತನಾಡಿದರು.

ನಂತರ ಮಾತನಾಡಿದಕರ್ನಾಟಕ ಬಿ ಶ್ರೀರಾಮುಲು ಯುವಪಡೆಯ ರಾಜ್ಯ ಉಪಾಧ್ಯಕ್ಷರಾದ ಶರಣು ನಾಯಕ ನಾವು ಇಂದು ಶ್ರೀರಾಮುಲು ಅವರ ಆದೇಶದಂತೆ ಸರಳ ಸಾಮಾನ್ಯವಾಗಿ ಹುಟ್ಟುಹಬ್ಬದ ಆಚರಿಸಿದ್ದೇವೆ ಏಕೆಂದರೆ ಸ್ವಲ್ಪ ದಿನಗಳಿಂದ ರಾಜ್ಯದಲ್ಲಿ ಮಳೆಯ ರೌದ್ರನರ್ಥನ ಮತ್ತು ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಇಂತಹ ಸಮಯದಲ್ಲಿ ಅದ್ದೂರಿಯಾಗಿ ಯಾರು ನನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಬೇಡಿ ಎಂದು ವಿನಂತಿ ಮಾಡಿಕೊಂಡಿದ್ದರು ನಮ್ಮ ಈ ಕಾರುಣ್ಯ ಆಶ್ರಮದಲ್ಲಿ ಹೋದ ವರ್ಷವೂ ಕೂಡ ಇದೇ ರೀತಿ ಅದ್ದೂರಿಯಾಗಿ ರಾಮುಲು ಅವರ ಹುಟ್ಟುಹಬ್ಬ ಆಚರಣೆ ಮಾಡಿದ್ದೆವು ಇಂದಿನ ಈ ಕಾರ್ಯಕ್ರಮ ಅವರಿಗೆ ಉತ್ತಮ ಆಯಸ್ಸು ಆಯುರಾರೋಗ್ಯ ಕಲ್ಪಿಸುವ ಅತ್ಯದ್ಭುತ ಕಾರ್ಯಕ್ರಮ ಎಂದು ಮಾತನಾಡಿದರು.ಇದೇ ಕಾರ್ಯಕ್ರಮದಲ್ಲಿ ಮಹದೇವ ನಾಯಕ ಸಿಂಹ ಘರ್ಜನೆ ಜಿಲ್ಲಾಧ್ಯಕ್ಷರು ಅವರ ಹುಟ್ಟುಹಬ್ಬವನ್ನು ಇದೇ ಕಾರ್ಯಕ್ರಮದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಿದ್ದು ಹೂಗಾರ ಬಿಜೆಪಿ ಯುವ ಮೋರ್ಚಾ ತಾಲೂಕ ಅಧ್ಯಕ್ಷರು ಸಿಂಧನೂರು. ಬಸವಲಿಂಗ ನಾಯಕ ಹಳ್ಳಿಮಟ್ಟೂರು. ಮಹಾಂತೇಶ ದೇವರ ಗುಡಿ. ಪರಶುರಾಮ್ ಪತ್ರಕರ್ತರು. ಮಹಾದೇವ ನಾಯಕ ಜಿಲ್ಲಾಧ್ಯಕ್ಷರು ಸಿಂಹ ಘರ್ಜನೆ ಸಂಘಟನೆ. ಪ್ರದೀಪ್ ಜಿಮ್ ಸಮಾಜ ಸೇವಕರು. ದೇವರಾಜ ಜಾಲವಾಡಗಿ. ಮಲ್ಲಯ್ಯನಾಯಕ ಕಾನಿಹಾಳ. ರವಿಕುಮಾರ ಎಪಿಎಂಸಿ. ಮಲ್ಲಿಕಾರ್ಜುನ ಮಲ್ಲಾಪುರ. ಮಲ್ಲು ನಾಯಕ ದಿದ್ದಿಗಿ. ರಫಿ ಜಾಲವಾಡಗಿ. ಬಸವರಾಜ ಹಾಗೂ ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಚನ್ನಬಸಯ್ಯ ಶೇಖರಯ್ಯ ಸುಜಾತ ಮರಿಯಪ್ಪ ಮತ್ತಿನ್ನಿತರರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;