ಬಿಜೆಪಿ ಮಹಿಳಾ ಮೋರ್ಚಾದಿಂದ ನೇಕಾರರಿಗೆ ಗೌರವ ಸನ್ಮಾನ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹಳ್ಳಿ ಗ್ರಾಮದಲ್ಲಿ ಕೈಮಗ್ಗ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಮಹಿಳಾ ವಿಜಯನಗರ ಮತ್ತು ಕೂಡ್ಲಿಗಿ ಮಂಡಲದಿಂದ ಹೊಸಳ್ಳಿಯಲ್ಲಿ ಕೈಮಗ್ಗ ನೇಕಾರರ ರನ್ನು ಭಾನುವಾರ ಗೌರವ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವಿಜಯನಗರ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀಬಾಯಿ ಕಾಂತರಾಜ್ ಮಾತನಾಡಿ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಮೋದಿಯವರ ದೇಶದ ಸುರಕ್ಷತೆಗೆ ಹೆಚ್ಚು ಒತ್ತು ನೀಡಿದ್ದಾರೆ ಅಲ್ಲದೆ ಎಲ್ಲಾ ವರ್ಗದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸೇರಿದಂತೆ ಎಲ್ಲ ಉತ್ತಮ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಹೆಚ್ಚಿನ ಅನುಕೂಲ ಒದಗಿಸಿದೆ.

ಇದೇ ಸಂದರ್ಭದಲ್ಲಿ ಕಾನಹೊಸಹಳ್ಳಿ ಶ್ರೀ ಗಜಾನನ ರೇಷ್ಮೆ ಕೈಮಗ್ಗ ನೇಕಾರರ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘದ ಸದಸ್ಯರನ್ನು ಗೌರವ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವಿಜಯನಗರ ಜಿಲ್ಲಾ ಸದಸ್ಯ ಎಲ್ ಗೀತಾ. ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಸದಸ್ಯ ರೇಖಾ ಮಲ್ಲಿಕಾರ್ಜುನ. ಯುವ ಮೋರ್ಚಾ ಜಿಲ್ಲಾ ಸದಸ್ಯ ಸುಲದಹಳ್ಳಿ ಚೌಡಮ್ಮ. ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷ ಎಲ್ ಪವಿತ್ರ. ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾರದಮ್ಮ ಕುಂಬಾರ್. ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನೇತ್ರಾವತಿ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು…

ವರದಿ.ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
