;

ಮಕ್ಕಳಿಗೆ ಲೈಂಗಿಕ ಕಿರುಕುಳ ವಿಕೃತಕಾಮಿ ಅಮಾನತ್ತು, ಶಿಕ್ಷಕ ನಾಪತ್ತೆ….!!!

ಮಕ್ಕಳಿಗೆ ಲೈಂಗಿಕ ಕಿರುಕುಳ ವಿಕೃತಕಾಮಿ ಅಮಾನತ್ತು, ಶಿಕ್ಷಕ ನಾಪತ್ತೆ.

ಸಿಂಧನೂರು : ಜುಲೈ.2. ತಾಲೂಕಿನ ಸಿಂಗಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಜರುದ್ದೀನ್ ಮಕ್ಕಳಿಗೆ ಪಾಠ ಮಾಡುವ ನೆಪದಲ್ಲಿ ಮಕ್ಕಳಿಗೆ ಬೆದರಿಸಿ ಅವರನ್ನು ಬೆತ್ತಲು ಮಾಡಿ ಗುಪ್ತ ಅಂಗಗಳನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದು ಈಗ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಭಯದ ಭೀತಿಯಿಂದ ಶಿಕ್ಷಕ ಅಜರುದ್ದೀನ್ ಕರ್ತವ್ಯಕ್ಕೆ ಗೈರಾಗಿ ತಲೆಮರೆಸಿಕೊಂಡಿದ್ದಾನೆ.

ಶಿಕ್ಷಕ ಅಜರುದ್ದೀನ್ ತನ್ನ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಹಲವು ಮಹಿಳೆಯರ ಜೊತೆಗಿನ ಅಶ್ಲೀಲ ವಿಡಿಯೋಗಳು ವಾಟ್ಸಪ್ ನಲ್ಲಿ ವಿಡಿಯೋಗಳು ಹರಿದಾಡುತ್ತಿದ್ದು ಈ ಶಿಕ್ಷಕ ಶಿಕ್ಷಣ ಇಲಾಖೆಗೆ ಕಪ್ಪು ಮಸಿ ಬಳಿದಿದ್ದಾನೆ.ಮಕ್ಕಳ ಹಾಗೂ ಮಹಿಳೆಯರ ಜೊತೆಗಿನ ರಾಸಲೀಲೆಗಳನ್ನು ಶಿಕ್ಷಕನೇ ತನ್ನ ಮೊಬೈಲ್ ನಲ್ಲಿ ಸೆಲ್ಫಿ ರೀತಿಯಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಈ ವೀಡಿಯೋಗಳು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕಾರಣ ವಿಷಯ ತಿಳಿದ ಶಿಕ್ಷಕ ಅಜರುದ್ದೀನ್ ಶಾಲೆಗೆ ಹೋಗದೆ ತಾನು ವಾಸ ಮಾಡುವ ಕಾರಟಗಿಯ ಮನೆಯಲ್ಲಿ ಇರದೇ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಗ್ರಾಮಸ್ಥರ ದೂರಿನ ಮೇರೆಗೆ ಬಿ ಇ ಓ ಶರಣಪ್ಪ ವಟಗಲ್ ಶಿಕ್ಷಕನ ಮೇಲೆ ಕ್ರಮಕಾಗಿ ಡಿಡಿಪಿಐ ಗೆ ವರದಿ ನೀಡಿದ್ದು ಬಿ ಇ ಓ ವರದಿ ಆಧರಿಸಿ ಡಿಡಿಪಿಐ ವೃಷಬೆಂದ್ರಯ್ಯ ವಿಕೃತಕಾಮಿ ಶಿಕ್ಷಕ ಅಜರುದ್ದೀನ್ ನನ್ನು ಅಮಾನತ್ತು ಮಾಡಿ ಆದೇಶ ಮಾಡಿದ್ದಾರೆ ಎಂದು ತಿಳಿದು ಬಂದಿದೆ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;