;

ತಾಲೂಕು ಆಡಳಿತ ವತಿಯಿಂದ ಫ. ಗು. ಹಳಕಟ್ಟಿ ಜನ್ಮ ದಿನಾಚರಣೆ…!!!

ತಾಲೂಕು ಆಡಳಿತ ವತಿಯಿಂದ ಫ. ಗು. ಹಳಕಟ್ಟಿ ಜನ್ಮ ದಿನಾಚರಣೆ.

ಸಿಂಧನೂರು : ಜುಲೈ 2. ವಚನ ಸಾಹಿತ್ಯದ ಪಿತಾಮಹ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಜನ್ಮದಿನಾಚರಣೆಯು ತಾಲೂಕು ಆಡಳಿತ ವತಿಯಿಂದ ಮಿನಿ ವಿಧಾನಸೌಧದ ತಹಶೀಲ್ದಾರ್ ಸಭಾಂಗಣದಲ್ಲಿ ನಡೆಯಿತು. ದೀಪ ಬೆಳಗಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವೆಂಕಟರಾವ್ ನಾಡಗೌಡ ಅವರು ವಹಿಸಿದ್ದರು.

ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ವಚನ ಸಾಹಿತ್ಯ ಪಿತಾಮಹ’ಎಂದೇ ಪ್ರಸಿದ್ಧರಾದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು. ಧಾರವಾಡದಲ್ಲಿ 1880ರ ಜುಲೈ 2ರಂದು ಜನಿಸಿದರು.ಉನ್ನತ ಶಿಕ್ಷಣವನ್ನು ಮುಗಿಸಿ ಮನೆಗೆ ಬಂದಾಗ ಅನೇಕ ಉದ್ಯೋಗಗಳು ಮನೆ ಬಾಗಿಲಿಗೆ ಬಂದವು ಆದರೆ ಯಾವುದೇ ಆಸಕ್ತಿ ಕೊಡದೇ ಎಲ್ಎಲ್ ಬಿ ಪದವಿ ಪಡೆದ ನಂತರ ವಕೀಲಿ ವೃತ್ತಿ ಆರಂಭಿಸಿದರು. ಬಿಜಾಪುರದಲ್ಲಿ ಸರ್ಕಾರಿ ವಕೀಲರಾಗಿ ಸಲ್ಲಿಸಿದರು.ನೌಕರಿಯನ್ನು ರಾಜಿನಾಮೆ ನೀಡಿದರು, ವಿಜಯಪುರ ನಗರಸಭೆ ಆಯ್ಕೆಯಾದರು. ಸಹಕಾರ ಸಂಘಗಳನ್ನು ಸ್ಥಾಪನೆ ಮಾಡಿದರು,ಶಾಸಕರಾಗಿಯೂ ಆಯ್ಕೆಯಾಗಿದ್ದರು. ಬಿಜಾಪುರದಲ್ಲಿ ಕನ್ನಡ ಶಾಲೆಗಳ ಪ್ರಗತಿಗಾಗಿ ಶ್ರಮಿಸಿದ ಅವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು ಎಂದು ಅವರ ಜೀವನದ ಸಾಧನೆ ಬಗ್ಗೆ ವೀರಭದ್ರಪ್ಪ ಕುರುಕುಂದಿ ಸವಿವರವಾಗಿ ತಿಳಿಸಿದರು.

ಪಂಪಯ್ಯಸ್ವಾಮಿ ಸಾಲಿಮಠ ಅವರು ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ರವರ ವಚನ ಸಾಹಿತ್ಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಎಂ. ದೊಡ್ಡಬಸವರಾಜ,ಮಾಜಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಕೆ. ಕರಿಯಪ್ಪ, ತಾಲೂಕು ದಂಡಾದಿಕಾರಿ ಅರುಣ್. ಹೆಚ್. ದೇಸಾಯಿ, ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಕರೇಗೌಡ ಕುರುಕುಂದಿ, ಸರ್ವೇ ಅಧಿಕಾರಿ ಶಾಂತಕುಮಾರ್ ಹಾಗೂ ತಾಲೂಕು ಅಧಿಕಾರಿಗಳು, ಗೃಹ ರಕ್ಷಕ ದಳದ ಸಿಬ್ಬಂದಿಗಳು, ಸಾರ್ವಜನಿಕರು, ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;