;

ತ್ರೈಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಶಾಸಕ…!!!

ತ್ರೈಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಶಾಸಕ.

ಸಿಂಧನೂರು : ಜುಲೈ 2. ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ.ಸಭೆಯು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಈ ಸಭೆಯಲ್ಲಿ ಶಾಸಕ ವೆಂಕಟರಾವ್ ನಾಡಗೌಡರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯಡಿ ಅನುಷ್ಠಾನಗೊಂಡ ಹಾಗೂ ಮುಂಬರುವ ಯೋಜನೆಗಳ ಕುರಿತು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಯೋಜನಾ ಕ್ರಮಗಳ ಪ್ರಗತಿ ಪರಿಶೀಲನೆ ವೇಳೆ ಸರಿಯಾದ ಮಾಹಿತಿ ಇಲ್ಲದಿರುವ ಅಧಿಕಾರಿಗಳಿಗೆ ತೀವ್ರ ತರಾಟೆ ತೆಗೆದುಕೊಂಡರು.

ಈ ಸಭೆಯಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ ತಾಲೂಕಿನಲ್ಲಿರುವ ಸುಮಾರು ಸೇವಾ ಸಹಕಾರ ಸಂಘಗಳಲ್ಲಿ ಸಂಪೂರ್ಣವಾಗಿ ಅವ್ಯವಹಾರ ನಡೆದಿರುವ ಬಗ್ಗೆ ಸಭೆಗೆ ಮಾಹಿತಿ ತಿಳಿಸಿದ ಅವರು ಬಳಗನೂರು 70 ಲಕ್ಷ , ಜವಳಗೇರದ 50 ಲಕ್ಷ , ದಿನಸಮುದ್ರ 70 ಲಕ್ಷ , ಗೋರೆಬಾಳದಲ್ಲಿ 1 ಕೋಟಿಗೂ ಅಧಿಕ ಅವ್ಯವಹಾರವನ್ನು ಅಧ್ಯಕ್ಷರು ಕಾರ್ಯದರ್ಶಿಗಳು ಸೇರಿಕೊಂಡು ರೈತರು ಕಟ್ಟಿದಂಥ ಮರುಪಾವತಿ ಸಾಲಗಳನ್ನು ಬ್ಯಾಂಕಿಗೆ ಕಟ್ಟಿಸಿಕೊಳ್ಳದೆ ನೇರವಾಗಿ ತಮ್ಮ ಸ್ವಂತಕ್ಕೆ ಬಳಸಿಕೊಳ್ಳುವದು ಮರಣ ಹೊಂದಿದ ರೈತರ ಹೆಸರಿನಲ್ಲಿ ಸಾಲವನ್ನು ಪಡೆದು ಅವ್ಯವಹಾರ ಮಾಡಿದ್ದಾರೆ, ರಸಗೊಬ್ಬರದಲ್ಲಿ ಪ್ರತಿವೂಂದು ಸೊಸೈಟಿಯಲ್ಲಿ 50 ರಿಂದ 1 ಕೋಟಿಗೂ ಅಧಿಕ ಅವ್ಯವಹಾರ ಮಾಡಿದ್ದಾರೆ. ಎಲ್ಲವನ್ನು ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಮುಂದೆನೇ ಗಂಭೀರ ಆರೋಪ ಮಾಡಿದರು.

ಶಾಸಕ ವೆಂಕಟರಾವ್ ನಾಡಗೌಡ ಅವರು ತಾಲೂಕಿನಲ್ಲಿ ಎಷ್ಟು ಸೊಸೈಟಿಗಳಿವೆ ಎಂದು ಮಾಹಿತಿ ಕೇಳಿದಾಗ ದಾಖಲೆ ಇಲ್ಲದೆ ಬಂದಾ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಮಲ್ಲಯ್ಯ ಇವರಿಗೆ ಯೂಸ್ ಲೆಸ್ ಫೆಲೋ ನೀನು ಟಿ ಕುಡಿಯಲುಗೋಷ್ಕರ ಸಭೆಗೆ ಬಂದಿದೀಯಾ ಸಭೆಯಿಂದ ಹೊರಗಡೆ ಹೋಗು ಎಂದಾಗ ಅಧಿಕಾರ್ ಮಲ್ಲಯ್ಯ ವಿಚಲಿತನಾಗಿ ಮುಖ ಪ್ರೇಕ್ಷಕನಾಗಿ ನಿಂತುಕೊಂಡನು, ಯಾವ ಯಾವ ಸೊಸೈಟಿಯಲ್ಲಿ ಎಷ್ಟು ಅವ್ಯವಹಾರ ನಡೆದಿದೆ ಎಂಬುದರ ಬಗ್ಗೆ ಒಂದು ವಾರದೊಳಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದರು.

ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ 9 ಸಮೂದಾಯ ಭವನವನ್ನು ಒಂದು ವಾರದೊಳಗೆ ಮುಗಿಸಬೇಕು,ಸಚಿವರನ್ನು ಕರೆದುಕೊಂಡು ಬಂದು ಉದ್ಘಾಟನೆ ಮಾಡೋಣ ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು, ವಿದ್ಯಾರ್ಥಿ ನಿಲಯದಿಂದ ಬಸ್ ಸೌಕರ್ಯ ಒದಗಿಸಬೇಕು ಎಂದರು.

ಜೆ.ಜೆ.ಎಮ್ ಯೋಜನೆ ಕಾಮಗಾರಿಗಳು ರಾಗಲಪರ್ವಿ,ರೌವಡಕುಂದಾ, ಗೀತಾಕ್ಯಾಂಪ್, ದೇವಿಕ್ಯಾಂಪ್, ಇನ್ನೂ ಮುಂತಾದ ಗ್ರಾಮಗಳಲ್ಲಿನ ಕುಡಿಯುವ ನೀರಿನ ಕೆರೆಗಳ ದುರಸ್ಥಿ ಕಾರ್ಯ ಬೇಗನೆ ಮುಗಿಸಬೇಕೆಂದು ಗ್ರಾ,ಕು,ನಿ, ಸ,ಕಾ,ಅ ,ಅಶೋಕ್ ರಡ್ಡಿ ತಿಳಿಸಿದರು.

ತೊಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನಂದಿ ಬೇವೂರು ರವರು ಕ್ಷೇತ್ರದಲ್ಲಿ ತೊಟಗಾರಿಕೆ ಬೆಳೆಗಳ ವಿಸ್ತಿರ್ಣದ ಬಗ್ಗೆ ಕೇವಲ ಒಂದು ಪೇಪರ್ನಲ್ಲಿ ಬರೆದಿಟ್ಟುಕೊಂಡು ಬಂದು ಮಾಹಿತಿ ಓದಿದರು, ಶಾಸಕರು ಯಾವ ಯಾವ ಗ್ರಾಮದಲ್ಲಿ ತೋಟಗಾರಿಕೆ ಬೆಳೆಗಳನ್ನು ರೈತರು ಬೆಳೆದಿದ್ದಾರೆ ಎಂದು ಮಾಹಿತಿ ಕೇಳಿದಾಗ, ಆಫೀಸ್ ನಲ್ಲಿದೆ ತಂದು ತೋರಿಸುತ್ತೇನೆ ಎಂದರು. ಶಾಸಕರು ಆಫೀಸ್ ನಲ್ಲಿ ಇಟ್ಟು ಸಭೆಗೆ ಯಾಕೆ ಬಂದ್ದಿದೀಯಾ ಎಂದು ಗದರಿಸಿದರು.

ಈ ಸಭೆಯಲ್ಲಿ ತಾಲೂಕಾ ದಂಡಾಧಿಕಾರಿ ಅರುಣ್ ಹೆಚ್. ದೇಸಾಯಿ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪವನಕುಮಾರ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಸಿಪಿಐ ಉಮೇಶ ಕಾಂಬಳೆ, ಡಾ. ಅಯ್ಯನಗೌಡ ತಾಲೂಕಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;