ರೈತರ ಆಹೋ ರಾತ್ರಿ ದರಣಿ.
ರೈತ ಕೃಷಿ ಸಾಲ, ಅದರ ಮೇಲಿನ ವಿವಿಧ ಬಗೆಯ ಚಾರ್ಜುಗಳನ್ನು ವಿಧಿಸುವ ಕ್ರಮವನ್ನು ಖಂಡಿಸಿ, ಸಾಲ ಮನ್ನಾ ಹಾಗೂ ಹೊಸದಾಗಿ ಬೆಳೆ ಸಾಲ ನೀಡದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಕ್ರಮ ಖಂಡಿಸಿ ಬಳ್ಳಾರಿಯಲ್ಲಿ ಬ್ಯಾಂಕ್‌ನ ಕೇಂದ್ರ ಕಚೇರಿ ಎದುರು ರಾಜ್ಯ ರೈತ ಸಂಘ ಹಸಿರುಸೇನೆ ಸಂಘಟನೆಯಿಂದ ನೂರಾರು ರೈತರು ಕುಟುಂಬ ಸಮೇತ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿರಿಸಿದೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಸಾವಿರಾರು ರೈತರು ಕೃಷಿ ಸಾಲ ಪಡೆದಿದ್ದಾರೆ. ಈ ಹಿಂದೆಲ್ಲ ಸಾಧ್ಯವಾದಷ್ಟು ಬೆಳೆ ಸಾಲವನ್ನು ಮರುಪಾವತಿ ಮಾಡಿ ಹೊಸದಾಗಿ ಪುನಃ ಸಾಲ ಪಡೆಯುತ್ತಿದ್ದರು. ಆದರೆ, ಕಳೆದ ವರ್ಷ ಬೆಳೆ ಸಂಪೂರ್ಣವಾಗಿ ನಷ್ಟವಾದ ಹಿನ್ನೆಲೆಯಲ್ಲಿ ಬಹುತೇಕ ರೈತರಿಗೆ ಬೆಳೆ ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲ. ಪರಿಣಾಮ ಬ್ಯಾಂಕ್‌ನವರು ಸಹ ಸಾಲಕ್ಕೆ ಬಡ್ಡಿ ವಿಧಿಸಿದ್ದಾರೆ. ಪ್ರಸಕ್ತ ವರ್ಷ ಕೃಷಿ ಚಟುವಟಿಕೆಗೆ ಹೊಸದಾಗಿ ಕೃಷಿ ಸಾಲ ಕೇಳಿದರೆ ಹಳೆಯ ಸಾಲವನ್ನು ಮರುಪಾವತಿಸಿದಲ್ಲಿ ಮಾತ್ರ ಸಾಲ ನೀಡುವುದಾಗಿ ಬ್ಯಾಂಕ್‌ನವರು ತಿಳಿಸುತ್ತಾರೆ.
ಏಪ್ರಿಲ್ 18 ರಂದು ಈ ಕುರಿತು ಧರಣಿ ನಡೆಸಿ ಬ್ಯಾಂಕ್ ಅಧಿಕಾರಿಗಳ ಗಮನ ಸೆಳೆದಾಗ ಹೊಸದಾಗಿ ಸಾಲ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ರೈತರು ಸಂಬಂಧಪಟ್ಟ ಬ್ಯಾಂಕ್‌ಗಳಲ್ಲಿ ಸಾಲ ಕೇಳಲು ಹೋದಾಗ ನಮಗೆ ಯಾವುದೇ ಆದೇಶ ಬಂದಿಲ್ಲ ಎಂದು ಬ್ಯಾಂಕ್‌ನವರು ಹೇಳಿ ವಿನಾಕಾರಣ ಸತಾಯಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸದ್ಯ ಇರುವ ಬಡ್ಡಿ ಸಾಲವನ್ನು ಬಡ್ಡಿಗಳ ಸಮೇತ ಮನ್ನಾ ಮಾಡಬೇಕು. ಆರ್‌ಬಿಐ ನಿಯಮಗಳಂತೆ ಮುಂದಿನ ದಿನಗಳಲ್ಲಿ ಮಂಜೂರಾದ ಸಾಲದ ಮೊತ್ತವು ಅಸಲಿಗಿಂತ ಒಂದು ರೂಪಾಯಿ ಕೂಡ ಅಧಿಕ ಇರಬಾರದು. ಕೃಷಿ ಸಾಲದ ಮೇಲೆ ವಿವೇಕ ರಹಿತರವಾಗಿ ವಿಧಿಸುತ್ತಿರುವ ಬಡ್ಡಿಯನ್ನು ಕಡಿತಗೊಳಿಸಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು….
ವರದಿ. ವಿರೇಶ್. ಎಚ್. ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
