ಕೊಪ್ಪಳ : ಕೊಪ್ಪಳ ಜಿಲ್ಲಾ ಜನಪ್ರಿಯ ಶಾಸಕರಾದ ಶ್ರೀ ರಾಘವೇಂದ್ರ ಹಿಟ್ನಾಳ್ ಇವರಿಂದ ಹಳೆ ನಿಂಗಾಪುರ ಗ್ರಾಮದ ಸಿ ಸಿ ರಸ್ತೆಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮ….. ಕೊಪ್ಪಳ ಜಿಲ್ಲೆಯ ಯುವಕರ ಕಣ್ಮಣಿ ಎಂದೆ ಹೆಸರಾದ ಶ್ರೀ ರಾಘವೇಂದ್ರ ಹಿಟ್ನಾಳ ರವರು ಇಂದು ಮುಂಜಾನೆ ಹುಲಿಗಿ ಹಾಗೂ ಹೊಸಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಪಟ್ಟಂತಹ ಗ್ರಾಮಗಳಿಗೆ ತೆರಳಿ ಅಲ್ಲಿನ ಕುಂದುಕೊರತೆಗಳನ್ನು ಆಲಿಸುವ ಮುಖಾಂತರವಾಗಿ ಆ ಸಮಸ್ಯೆಗಳಿಗೆ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಮಾತನಾಡಿಸುವ ಮೂಲಕ, ತದನಂತರ ಹಳೆ ನಿಂಗಪೂರ್ ಗ್ರಾಮಕ್ಕೆ ತೆರಳಿ ಅಲ್ಲಿನ ಸಿಸಿ ರಸ್ತೆ ನಿರ್ಮಾಣದ ಕಾರ್ಯಕ್ರಮದಲ್ಲಿ ಭಾಗವಹಿಸಿ,

ತದನಂತರ ಗುರು-ಹಿರಿಯರನ್ನು ಹಾಗೂ ಯುವಕರನ್ನು ಉದ್ದೇಶಿಸಿ ಮಾತನಾಡಿದ ಸನ್ಮಾನ್ಯ ಶ್ರೀ ರಾಘವೇಂದ್ರ ಹಿಟ್ನಾಳ್ ರವರು ನನ್ನ ಜೀವ ಹಾಗೂ ಜೀವನ ಈ ಕ್ಷೇತ್ರಕ್ಕೆ ಹಾಗೂ ಈ ಗ್ರಾಮಕ್ಕೆ ಸೀಮಿತವಾಗಿರುತ್ತದೆ. ಎಂದು ಹೇಳುವುದರ ಮುಖಾಂತರ ನೆನೆಗುದಿಗೆ ಬಿದ್ದಿದ್ದ ಈ ಸಿಸಿ ರಸ್ತೆಯ ಆರಂಭದ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು. ಈ ಕಾರ್ಯಕ್ರಮದಲ್ಲಿ,ತಹಸಿಲ್ದಾರ, ಸಿಇಓ ಹಾಗೂ ಈ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ವಿರುಪಾಕ್ಷಪ್ಪ ಎಂ ಎಂ ಹಳ್ಳಿ, ಶ್ರೀಮತಿ ಅಕ್ಷತಾ ಸಂತೋಷ್ ಪಾಟೀಲ್, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು…

ವರದಿ. ಉಮೇಶ್.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
