ವಿಜಯನಗರ ಜಿಲ್ಲೆ ಕರ್ನಾಟಕ ದಲಿತ ಸಂಘರ್ಷ ಸಮಿತಿ( ಪ್ರೋ ಬಿ.ಕೃಷ್ಣಪ್ಪ ಬಣ ) ವತಿಯಿಂದ ಪೂರ್ವಭಾವಿ ಸಭೆ.
ಕೂಡ್ಲಿಗಿ:-ಕೂಡ್ಲಿಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ನೂತನವಾಗಿ ವಿಜಯನಗರ ಜಿಲ್ಲೆ ಹಾಗೂ ಕೂಡ್ಲಿಗಿ ತಾಲೂಕಿನ ಪ್ರೋ ಬಿ.ಕೃಷ್ಣಪ್ಪ ಬಣದ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಲುವಾಗಿ ವಿಜಯನಗರ ಜಿಲ್ಲಾ ಪ್ರೊಫೆಸರ್ ಬಿ.ಕೃಷ್ಣಪ್ಪ ಸ್ಥಾಪಿತ ಕೂಡ್ಲಿಗಿ ತಾಲೂಕಿನ ಎಲ್ಲಾ ಗ್ರಾಮಗಳ ದಲಿತ ಮುಖಂಡರ ಜಿಲ್ಲಾ ಮತ್ತು ತಾಲ್ಲೂಕು ಸಂಚಾಲಕರ ಆಕಾಂಕ್ಷಿಗಳ ಪಟ್ಟಿ ತಯಾರಿಸಲು ಅಪೇಕ್ಷಿತರನ್ನು ಆಯ್ಕೆ ಮಾಡುವ ಸಲುವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕರೆ ನೀಡಿದ್ದ ಪೂರ್ವಭಾವಿ ಸಭೆಯನ್ನು.ಜಿಲ್ಲಾ ಹಂಗಾಮಿ ಸಂಚಾಲಕ ಎಸ್ ದುರ್ಗೇಶ್ ಇವರ ಮುಖಂಡತ್ವದಲ್ಲಿ, ಗ್ರಾಮ, ಹೋಬಳಿ. ಹಾಗೂ ತಾಲೂಕು ಮಟ್ಟದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು.

ಈ ಸಭೆಯಲ್ಲಿ ವಿಜಯನಗರ ಜಿಲ್ಲೆಯ ಜಿಲ್ಲಾ ಹಂಗಾಮಿ ಸಂಚಾಲಕ ಎಸ್ ದುರ್ಗೇಶ್ ರವರು ಮಾತನಾಡಿ. ಜಿಲ್ಲಾ ರಾಜ್ಯ ಸಮಿತಿಯ ಆದೇಶದ ಮೇರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ನಮ್ಮ ಮಾರ್ಗದರ್ಶಕರು ಆದ ಮುಂಡ್ರಿಗಿ ನಾಗರಾಜ್ ರವರ ಆದೇಶದಂತೆ ತಾಲೂಕು ಹಾಗೂ ಜಿಲ್ಲಾಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡವ ಸಲುವಾಗಿ ಸಭೆ ಕರೆಯಲಾಗಿದ್ದು. ರಾಜ್ಯಮಟ್ಟದ ಪದಾಧಿಕಾರಿಗಳ ಆದೇಶದಂತೆ ನೂತನ ವಿಜಯನಗರ ಜಿಲ್ಲೆ ಹಾಗೂ ಕೂಡ್ಲಿಗಿ ತಾಲ್ಲೂಕಿಗೆ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಲುವಾಗಿ ಜಿಲ್ಲಾ ಮತ್ತು ತಾಲೂಕ ಸಮಿತಿಗೆ ಆಸಕ್ತಿ ಉಳ್ಳವರು ಹೆಸರನ್ನು ನೊಂದಾಯಿಸುವಂತೆ ಸ್ವಇಚ್ಛೆಯಿಂದ ಹೆಸರುಗಳನ್ನು ನೋಂದಾಯಿಸಿರಿ.ಎಂದು ಹೇಳಿದರು.ತದನಂತರ ತಾಲೂಕಿನ ಅಪೇಕ್ಷಿತರ ಪಟ್ಟಿಯನ್ನು ರಾಜ್ಯ ಮತ್ತು ಜಿಲ್ಲಾ ಸಮಿತಿಗೆ ವರದಿ ಕೋಟ್ಟ ನಂತರ ಆಯ್ಕೆ ಸಮಿತಿಯು ಅಂತಿಮವಾಗಿ ಆಯ್ಕೆ ಪಟ್ಟಿ ಪ್ರಕಟ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಸಂಚಾಲಕ ಎಸ್ ದುರುಗೇಶ ಹೇಳಿದರು.. ಜಿಲ್ಲಾ ಸಮಿತಿಗೆ 9ಜನ ಹೆಸರನ್ನು ನೊಂದಾಯಿಸಿದರೇ.ತಾಲೂಕು ಸಮಿತಿಗೆ 17 ಜನರ ಹೆಸರುಗಳನ್ನು ನೋಂದಾಯಿಸಿದರು. ಈ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ದಲಿತ ಮುಖಂಡರಾದ ಗೆದ್ದಲಗಟ್ಟೆ ಹನುಮೇಶ್ ರವರು ಕೆಲವು ವಿಚಾರಗಳನ್ನು ಸಭೆಯಲ್ಲಿ ತಿಳಿಸಿದರು.ಸಭೆಯ ಅಧ್ಯಕ್ಷತೆಯನ್ನು ಕೂಡ್ಲಿಗಿ ತಾಲೂಕು ಸಂಚಾಲಕ ಕಂದಗಲ್ ಪರಶುರಾಮ್. ವಹಿಸಿದ್ದರು. ಈ ಸಭೆಯಲ್ಲಿ ಹೊಸಹಳ್ಳಿ ಗಂಗಾಧರ. ತುಂಬರಗುದ್ದಿ ದುರುಗೇಶ., ಗುಡೆಕೋಟೆ ನಾಗರಾಜ್, ಸಿದ್ದಾಪುರ ಡಿ.ಎಂ.ಈಶ್ವರಪ್ಪ. ಸೇರಿದಂತೆ ಗ್ರಾಮ, ಹೋಬಳಿ, ತಾಲೂಕು ಮಟ್ಟದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು,ಸದಸ್ಯರು,ಕಾರ್ಯಕರ್ತರು ಇತರರು ಭಾಗವಹಿಸಿದ್ದರು…

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
