ಬಿಜೆಪಿ ನಾಯಕರಾದ ನುಪೂರ್ ಶರ್ಮ ಮತ್ತು ನವೀನ ಜಿಂದಾಲ್ ಅವರ ಮೇಲೆ ಎಫ್ ಐ ಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ. ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಗುಲ್ಬರ್ಗ ಜಿಲ್ಲಾ ಕಮಿಟಿ ಆಗ್ರಹ.
ಪ್ರವಾದಿ ಮಹಮ್ಮದ್ ಪೈಗಂಬರ್ ರವರಿಗೆ ನಿಂದನೆ ಮಾಡಿ ಇಸ್ಲಾಂ ಧರ್ಮಕ್ಕೆ ಇಡೀ ಮುಸ್ಲಿಂ ಸಮಾಜಕ್ಕೆ ನೋವುಂಟು ಮಾಡಿದ್ದಾರೆ. ಮತ್ತು ಅವರ ಹೇಳಿಕೆಯಿಂದ ದೇಶದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ. ಮತ್ತು ಹೊರದೇಶದಲ್ಲಿ ನಮ್ಮ ಭಾರತದ ವ್ಯಾಪಾರಕ್ಕೆ ನಿಷೇಧಿಸುವಂತೆ ಪರಿಸ್ಥಿತಿ ತಂದು ನಮ್ಮ ದೇಶಕ್ಕೆ ಅವಮಾನ ಮಾಡಿದ್ದಾರೆ. ದೇಶದಲ್ಲಿ ಗಲಭೆ ಉಂಟು ಮಾಡುವ ಉದ್ದೇಶದಿಂದ ಈ ರೀತಿಯಾಗಿ ಬಿಜೆಪಿ ನಾಯಕರು ನುಪೂರ್ ಶರ್ಮಾ ಮತ್ತು ನವೀನ್ ಜಿಂದಾಲ್ ರವರು ಪ್ರವಾದಿ ಮೊಹಮ್ಮದ್ ಪೈಗಂಬರ ಅವರನ್ನು ನಿಂದನೆ ಮಾಡಿದ್ದಾರೆ.
ಸಂವಿಧಾನ ವಿರೋಧಿ ಹೇಳಿಕೆ ಕೊಟ್ಟವರ ಮೇಲೆ ಬೇರೆ ರಾಜ್ಯಗಳಲ್ಲಿ ಎಫ್ ಐ ಆರ್ ದಾಖಲಾಗಿದೆ. ಆದರೆ ಬಿಜೆಪಿ ಸರ್ಕಾರ ಇಲ್ಲಿವರೆಗೆ ಬಂಧಿಸಿಲ್ಲ. ಆದಕಾರಣ ನಮ್ಮ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಗುಲ್ಬರ್ಗ ಜಿಲ್ಲಾ ಕಮಿಟಿ ಜೇವರ್ಗಿ ಪೊಲೀಸ್ ಠಾಣೆ ಪಿಎಸ್ಐ ಸಂಗಮೇಶ ಅಂಗಡಿಯವರಿಗೆ ಮನವಿ ಸಲ್ಲಿಸಿದರು!
ಈ ಸಂದರ್ಭದಲ್ಲಿ ಮೌಲಾನ ಉಸ್ಮಾನ ಸಾಬ ಸಿಗರತಹಳ್ಳಿ ಅಧ್ಯಕ್ಷರು, ಮೌಲಾನಾ ಅಜದ್ ಖಾನ ಕಾರ್ಯದರ್ಶಿ, ಮೌಲಾನ ಶರ್ಫುದ್ದಿನ್ ಸಾಬ, ಮೌಲನ ರಿಜ್ವಾನ್ ಸಾಬ ಕಾಜಿ, ಅಬ್ದುಲ್ ಗಫಾರ್ ಸಾಬ್ ಬಾಘಬಾನ್, ಜಾಫರ್ ಬಾಘಬಾನ್, ಮೊಯಿದಿನ್ ಇನಾಮ್ದಾರ್, ಅಹಮದ್ ಹುಸೇನ,ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ,ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
