;

ಕಂಬಳಿ ಬೀಸಿ ಮಳೆ ಕರೆದ ಮಾಳಿಂಗರಾಯರು: ದೊಡ್ಡಪ್ಪಗೌಡ ಪಾಟೀಲ…!!!

ಕಂಬಳಿ ಬೀಸಿ ಮಳೆ ಕರೆದ ಮಾಳಿಂಗರಾಯರು: ದೊಡ್ಡಪ್ಪಗೌಡ ಪಾಟೀಲ.

ಜೇವರ್ಗಿ: ತಾಲೂಕಿನ ಮಲ್ಲಾ(ಬಿ) ಗ್ರಾಮದಲ್ಲಿ ನೂತನ ಶ್ರೀ ಮಾಳಿಂಗರಾಯ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಡೊಳ್ಳು ಬಾರಿಸುವ ಮೂಲಕ ಉದ್ಘಾಟನೆ ಮಾಡಿದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಮಾತನಾಡಿದರು. ದೇಶದಲ್ಲಿ ಮಳೆ ಬೆಳೆ ಸಂಪೂರ್ಣವಾಗಿ ಬೀಳುತ್ತಿದೆ ಎಂದರೆ ಅದು ಮಹಾನ ದೈವೀ ಪುರುಷರಾದ ಮಾಳಿಂಗರಾಯ ಆಶೀರ್ವಾದ ಎಂದು ಹೇಳಬಹುದು. ಕಂಬಳಿ ಬೀಸಿ ಮಳೆ ಧರೆಗಿಳಿಸಿದ ಜನಾಂಗದ ಆರಾಧ್ಯದೈವ ಮಾಳಿಂಗರಾಯ ದೇವಸ್ಥಾನವನ್ನು ಉದ್ಘಾಟನೆ ಮಾಡಿದ್ದು ನನ್ನ ಪುಣ್ಯ ಎಂದು ಹೇಳಿದರು. ಸಾಕ್ಷಾತ್ ಗೌರಿಶಂಕರನ್ನು ಭೂಲೋಕಕ್ಕೆ ಕರೆಸಿಕೊಂಡು ತನ್ನ ಮುಂಡಾಸ ಸುತ್ತಿಕೊಳ್ಳುವ ಏಕೈಕ ದೇವರೆಂದರೆ ಮಹಾರಾಷ್ಟ್ರದ ಹುಲಿಜಂತಿ ಮಾಳಿಂಗರಾಯರು. ಇಂತಹ ಪವಾಡಪುರುಷರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಮಲ್ಲಾ(ಬಿ) ಗ್ರಾಮದ ಜನತೆಯ ಪುಣ್ಯವೆಂದು ಹೇಳಬಹುದು. ಅದೇ ರೀತಿಯಾಗಿ ಆಚಾರ-ವಿಚಾರ ಸಂಪ್ರದಾಯಗಳನ್ನು ಇನ್ನೂ ಜೀವಂತವಾಗಿ ಬಳಕೆ ಮಾಡುತ್ತಾ ಬಂದಿರುವ ಜನಾಂಗ ಯಾವುದು ಆದರೆ ಅದು ಕುರುಬ ಜನಾಂಗ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಲಿಂಗ ಬೀರದೇವರು ಕನಕಗುರುಪೀಠ ತಿಂಥಣಿ ಬ್ರಿಜ್, ಶ್ರೀ ಮರೆಪ್ಪ ಮುತ್ಯಾ ಬೀರಲಿಂಗೇಶ್ವರ ಬಸವಪಟ್ಟಣ, ಸತ್ಯಾನಂದ ಮುಖ್ಯ ಶ್ರೀ ರೇವಣ ಸಿದ್ದೇಶ್ವರ ಮಠ ಅಣಜಿಗಿ, ಪದ್ಮಣ್ಣ ಪೂಜಾರಿ ನಿಂಗಯ್ಯ ದೇವರು ಯನಗುಂಟಿ, ಬಸಣ್ಣ ಪೂಜಾರಿ ಅಂದನೂರು, ರಾಜಶೇಖರ್ ಸಿರಿ ಕಾಂಗ್ರೆಸ್ ಯುವ ಮುಖಂಡರು ಧರ್ಮಣ್ಣ ದೊಡ್ಡಮನಿ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ, ಡಾಕ್ಟರ್ ಮಲ್ಲರಾವ್ ಕುಲಕರ್ಣಿ ಮಲ್ಲಾ(ಬಿ), ಸಿದ್ದು ಮಾವನೂರ್ ಜೆಡಿಎಸ್ ಯುವ ಘಟಕದ ಅಧ್ಯಕ್ಷರು ತಾಲೂಕ, ನಿಂಗಣ್ಣ ಬಂಡಾರಿ ಓಬಿಸಿ ಮೋರ್ಚಾ ಬಿಜೆಪಿ ಅಧ್ಯಕ್ಷರು, ರಾಜಶೇಖರ್ ಮುತ್ತುಕೊಡ, ನಿಂಗಣ್ಣ ರದ್ದೇವಾಡಗಿ, ಮಾದೇವಪ್ಪ , ಅಯ್ಯಳಪ್ಪ ಪೂಜಾರಿ, ಜೈರಾಮ್ ರೆಡ್ಡಿ, ನಾಗಣ್ಣ ಗಡ್ಡದ, ಸಿದ್ದರಾಮ ಗಡ್ಡದ, ರಾಜಶೇಖರ್ ಗಡ್ಡದ, ಸಮಸ್ತ ಮಲ್ಲ ಬಿ ಗ್ರಾಮದ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಆಗಮಿಸಿದ ಭಕ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು…

ವರದಿ. ಬಸವರಾಜ್ ಹಿರೇಮಠ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;