ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮೂಲ ಸೌಕರ್ಯವಿಲ್ಲದೆ ದಿನನಿತ್ಯ ರೋಗಿಗಳ ಪರದಾಟ – ಡಾ. ನಾಗವೇಣಿ ಎಸ್ ಪಾಟೀಲ್.
ಮಸ್ಕಿ : ಜೂನ್ 11.ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲ ಸೌಕರ್ಯವಿಲ್ಲದೆ ದಿನನಿತ್ಯ ರೋಗಿಗಳ ಪರದಾಟ, ಸಾರ್ವಜನಿಕ ಸಮಸ್ಯೆ ನಿರ್ವಹಿಸುವ ವೈದ್ಯಾಧಿಕಾರಿಗಳೇ ಸ್ಪಂದಿಸದೆ ಇರುವುದು ಮತ್ತು ಈಗಿರುವ ಸಿಬ್ಬಂದಿಗಳು ಸಾರ್ವಜನಿಕರ ಜೊತೆ ಸರಿಯಾಗಿ ಸ್ಪಂದಿಸದೇ ಇರುವುದು ದಿನನಿತ್ಯ ನಡೆಯುತ್ತಿರುತ್ತದೆ ಎಂದು ಸಮಾಜ ಸೇವಕಿ ಡಾ.ನಾಗವೇಣಿ ಎಸ್.ಪಾಟೀಲ್ ತುರುವಿಹಾಳ ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಇಲ್ಲ, ಸ್ವಚ್ಛತೆ ಇಲ್ಲ, ಸಿಬ್ಬಂದಿಗಳ ಕೊರತೆ ಇದೆ, ಈ ರೀತಿಯ ಸಮಸ್ಯೆಗಳು ಇದ್ದರೂ ಸಹ ಮಸ್ಕಿಯ ತಾಲೂಕು ವೈದ್ಯಾಧಿಕಾರಿಗಳಾದ ಬಸವಶ್ರೀ ರವರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರುವುದಿಲ್ಲ, ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಸರಿಯಾದ ರೀತಿಯ ಚಿಕಿತ್ಸೆಯಿಲ್ಲ ಕೇವಲ ಇವರು ನೆಪ ಮಾತ್ರಕ್ಕೆ ಅಧಿಕಾರಿಗಳು ಎಂದು ತಿಳಿದುಬಂದಿದೆ.

ಇವರು ಸಾರ್ವಜನಿಕರು ಫೋನ್ ಕರೆ ಮಾಡಿದರೆ ಯಾವುದೇ ರೀತಿಯಿಂದ ಸರಿಯಾಗಿ ಸ್ಪಂದನೆ ನೀಡುವುದಿಲ್ಲ, ವೈದ್ಯಾಧಿಕಾರಿಯನ್ನು ವರ್ಗಾವಣೆ ಮಾಡಿ ಇವರ ಮೇಲೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು. ಮಸ್ಕಿಯ ಸಾರ್ವಜನಿಕ ಆಸ್ಪತ್ರೆ ಉಳಿಸಲು ದೊಡ್ಡ ಅಭಿಯಾನವನ್ನು ಕೈಗೊಂಡು ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪತ್ರಿಕಾ ಹೇಳಿಕೆ ಮುಖಾಂತರ ಎಚ್ಚರಿಕೆ ನೀಡಿದರು….

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
