;

ಜೂನ್ 14 ರಂದು ಮುಂಗಾರು ಮಳೆ ತತ್ವಪದೋತ್ಸವದಲ್ಲಿ ಭಾಗವಹಿಸಲು : ಎಂ. ಗಂಗಾಧರ್ ಮನವಿ…!!!

ಜೂನ್ 14 ರಂದು ಮುಂಗಾರು ಮಳೆ ತತ್ವಪದೋತ್ಸವದಲ್ಲಿ ಭಾಗವಹಿಸಲು : ಎಂ. ಗಂಗಾಧರ್ ಮನವಿ.

ಸಿಂಧನೂರು : ಜೂನ್. 11.ದೇಶದಲ್ಲಿ ಮತ್ತು ರಾಜ್ಯದಲ್ಲಿ ಜನತೆ ತಲೆತಲಾಂತರದಿಂದ ಅನ್ಯಾಯದ ಆಕ್ರಮದ ವಿರುದ್ಧ, ಜಾತಿ ತಾರತಮ್ಯದ ವಿರುದ್ಧ, ಮೇಲು ಕೀಳು ವಿರುದ್ಧ ಈ ನಾಡಿನಲ್ಲಿ 3 ಸಾವಿರ ವರ್ಷಗಳ ಇತಿಹಾಸ ನೋಡಿದರೆ ಸೂಫಿ ಸಂತರು, ಬುದ್ದರು, ಅವದೂತರು, ಸಿದ್ದರು, ಶರಣರು, ತತ್ವ ಪದಕಾರರು, ಜನರಲ್ಲಿ ವಿಶ್ವಾಸ ಮೂಡಿಸಿ ಮೇಲು ಕೀಳು, ಹೆಣ್ಣುಗಂಡು , ಬಡವ ಶ್ರೀಮಂತಿಕೆ ಜಾತಿ ಭೇದಬಾವ ತೊಡೆದು ಹಾಕಿ ಮನುಷ್ಯರೆಲ್ಲಾ ಸಮಾನರೆಂದು ಸಾರಿದ್ದಾರೆ. ಆದರಿಂದ ಮುಂಗಾರು ಮಳೆ ತತ್ವಪದೋತ್ಸವನ್ನು 14 ಜೂನ್ 2022 ರಂದು ಲಿಂಗಸುಗೂರು ತಾಲೂಕಿನ ಚಿಕ್ಕ ಹೆಸರೂರು, ಪಾಮನಕಲ್ಲೂರಿನ ಆದಿ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಗರದ ಹೊಸ ಎಪಿಎಂಸಿಯ ಶ್ರಮಿಕ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಎಂ. ಗಂಗಾಧರ ಮಾತನಾಡಿದರು.

ದೇಶವನ್ನು ನಾಶಮಾಡುತ್ತಿರುವ ಮಹಾರೋಗಕ್ಕೆ ಅದ್ವೈತ, ಆರೂಢ, ಅಜಾತವೇ ಔಷಧಿಯಾಗಿದೆ. ಇದಕ್ಕಾಗಿಯೇ ಧರೆಗೆ ದೊಡ್ಡವರು ಶ್ರೀ ಕೊಡೇಕಲ್ಲ ಬಸವಣ್ಣನವರ ಶಾಖಾ ಮಠದ ಅಮರಜ್ಞಾನ ಪೀಠವು, ಹಲವು ತಾಲೀಮುಗಳ ನಂತರ ಮುಂಗಾರು ಮಳೆ ತತ್ವಪದೋತ್ಸವಕ್ಕೆ ಕರೆ ನೀಡಿದೆ. ದಿನಾಂಕ 14 ಜೂನ್ 2022 ರಂದು ನಡೆಯುವ ಈ ಸಮಾರಂಭಕ್ಕೆ ಅರಿವಿನ ನಾಮ, ರೂಪ, ಕ್ರಿಯೆಗಳಾದ ಗುರುಗಳೇ ಗಣ್ಯಾತೀಗಣ್ಯರಾಗಿ ಬರುತ್ತಾರೆ. ನಡೆನುಡಿಯಲ್ಲಿ ನಿತ್ಯ ತತ್ವರಾಧನೆ ಮಾಡುವ ಸಾಧಕರು, ಗುರುಪುತ್ರರು ಇದರ ಶೃಂಗಾರವಾಗಿ ಇರುತ್ತಾರೆ. ಹಗಲು-ರಾತ್ರಿ ತತ್ವಪದ ಭಜನಾಡಿಕೆಯ ಹೊಳೆ ಹರಿಸಲು ಮೇಳಗಳು ಬರಲಿವೆ, ದೂರದ ರಾಯಚೂರು ಕೊಪ್ಪಳ, ಬಳ್ಳಾರಿಯ ಊರುಗಳ ಆಸಕ್ತ ಕಲಾವಿದರು ಇಲ್ಲಿಗೆ ದಯಮಾಡಿಸಲಿದ್ದಾರೆ. ಹಾಗಾಗಿ ಈ ಮಹತ್ವದ ಸಾಂಸ್ಕೃತಿಕ ಸೇವಾ ಸಮಾಗಮವನ್ನು ತನು,ಮನ ಧನದಿಂದ ಜಯಪ್ರದಗೊಳಿಸಬೇಕೆಂದು ಪ್ರಾರ್ಥನೆ ಮಾಡಿಕೊಂಡರು.

ದಿ.14 ಜೂನ್ 2022 ಮಂಗಳವಾರ ಬೆಳಗ್ಗೆ 09-ಕ್ಕೆ ಪುರವಂತಿಗೆ ಸೇವೆ, 10.30ಕ್ಕೆ ಮರಡಿ ಮೇಲೆ ಕೊಡೇಕಲ್ಲ ಶಾಖಾಮಠದ ಶಂಕುಸ್ಥಾಪನೆ, ಧ್ವಜಾರೋಹಣ, ಬೆಳಗ್ಗೆ 11.30 ಕ್ಕೆ ಅಮರ ಜ್ಞಾನಪೀಠದ ಉದ್ಘಾಟನೆ (ಟ್ರಸ್ಟ್ ಅನಾವರಣ) ಮತ್ತು ಮುಂಡಿಗೆ ಸಭೆ, ಮದ್ಯಾಹ್ನ 2 ರಿಂದ ತತ್ವಪದಗಳ ಭಜನೆ ಹಾಡಿಕೆ ಆರಂಭ, ರಾತ್ರಿ 7-00ಕ್ಕೆ ಒಂದಿಲ್ಲದಿರ್ದೊಡೆನ್ನೊಂದಾಗದು ಎಂಬ ವಿಚಾರ ಸಂಕೀಣ, ರಾತ್ರಿ 9 ರಿಂದ ಮತ್ತೆ ತತ್ವಪದ ಭಜನೆ ಹಾಡಿಕೆ ಸೂರ್ಯೋದಯದವರಿಗೆ ದಿ.15 ಜೂನ್ 2022ರಂದು ಬೆಳಗ್ಗೆ 9ಕ್ಕೆ ಭಜನಾ ಮೇಳಗಳಿಗೆ ಪ್ರಶಸ್ತಿ ಪುರಸ್ಕಾರದೊಂದಿಗೆ ಮಹಾಮಂಗಳ ನೇರವೆರುವುದು.

ಆರೂಢ ಜಗದ್ಗುರುಗಳ ಸಾನಿದ್ಯವನ್ನು ಶ್ರೀ ವೃಷಬೇಂದ್ರ ಶ್ರೀಗಳು ಕೊಡೇಕಲ್ಲ ಬಸವೇಶ್ವರ ಮಹಲಿನ ಮಠ ಕೊಡೇಕಲ್ಲ, ಶ್ರೀ ಗಂಗಾಧರ ತಾತನವರು ಶ್ರೀ ಆರೂಢ ಐಕ್ಯಸ್ಥಳ ಚನ್ನಬಸವೇಶ್ವರ(ಗಾದಿಮಾಲಿಕ) ಮಠ ಹಳೆ ಗಲಗ, ಶ್ರೀ ಮೌನೇಶ್ವರ ಶ್ರೀಗಳು ದಕ್ಷಿಣ ಕಾಶಿ, ಜಗದ್ಗುರು ಮೌನೇಶ್ವರ ಮಠ ತಿಂಥಣಿ, ಶ್ರೀ ಲಿಂಗಯ್ಯ ತಾತನವರು ಅಜಾತ ಶ್ರೀ ಚನ್ನಬಸವೇಶ್ವರ ಮಠ ಹಾಲಬಾವಿ , ಶ್ರೀ ಗುರುಸ್ವಾಮಿ ತಾತನವರು ಗಡವಡಕೀಶ್ವರರ ಅದೈತ ಮಠ ಯಲಗಟ್ಟಾ ಸಾನಿಧ್ಯ ವಹಿಸುವವರು.
ಎಸ್.ಬಾಬು ಮಾಸ್ತರ ಬಯಲಾಟ ಕಲೆಯ ವಿದ್ವಾನ್ ರಾಯಚೂರು ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಆರ್.ಮಾನಸಯ್ಯ ಅಧ್ಯಕ್ಷರು ಅಮರಜ್ಞಾನ ಪೀಠ (ಟ್ರಸ್ಟ್) ಚಿಕ್ಕಹೆಸರೂರು ವಹಿಸುವವರು.ಗುರುರಾಜ ಗೌಡೂರು ಕಾರ್ಯದರ್ಶಿಗಳು ಅಮರಜ್ಞಾನ ಜ್ಞಾನ ಪೀಠ ಚಿಕ್ಕಹೆಸರೂರು ಸಮನ್ವಯಕಾರರಾಗಿ ಆಗಮಿಸಲಿದ್ದಾರೆ ಎಂದರು.

ಸಂಚಾಲಕರು: ನಾಗಪ್ಪ ತಳವಾರ, ತಿಪ್ಪಣ್ಣ ಚಿಕ್ಕಹೆಸರೂರು, ಆ‌.ಹುಚ್ಚರಡ್ಡಿ, ಎಂ.ಗಂಗಾಧರ ಮಾಸ್ತರ, ರಾಮು ನಾಯಕ ಅರಳಹಳ್ಳಿ, ಡಾ.ಶರಣಬಸವ, ನಿಜಗುಣಿ ಸರ್ಜಾಪುರ, ತಿಪ್ಪರಾಜ ಗೆಜ್ಜಲಗಟ್ಟಾ, ಬಸವರಾಜ ಹಿರೇಹೆಸರೂರು, ಮತ್ತೆ ಹಿರೇಹೆಸರೂರು, ಗಂಗಾಧರ ಗುಂತಗೋಳ, ಆದೇಶ ನಗನೂರು, ಯಲ್ಲಪ್ಪ ವಂದಿ, ಟಿ.ನಾಗರಾಜ ಚಿಕ್ಕಹೆರೂರು, ಎಂ.ನಿಸಗಳ ಬಸವರಾಜ ಗೋಸ್ವಾರ, ಶಾಂತಕುಮಾರ ಚಿಕ್ಕನಗನೂರು, ಮಹ್ಮದ ಹುಸೇನ್‌ಡೂರು,

ವಿಶೇಷ ಸೂಚನೆ: ತತ್ವಪದೋತ್ಸವದಲ್ಲಿ ಭಾಗವಹಿಸುವ ಭಜನಾ ಮೇಳಗಳು ತಮ್ಮ ತಮ್ಮ ವಾದ್ಯಗಳೊಂದಿಗೆ ಬರಬೇಕು. ತತ್ವಪದೋತ್ಸವದಲ್ಲಿ 24 ಗಂಟೆ ಪ್ರಸಾದ ವ್ಯವಸ್ಥೆ ಇರುತ್ತದೆ. ಕಲಾವಿದರ ನೊಂದಣಿಗಾಗಿ ಆಧಾರ ಕಾರ್ಡು 2 ಫೋಟೋಗಳನ್ನು ತರಬೇಕು. ಭಾಗವಹಿಸುವ ಭಜನಾ ಮೇಳಗಳು ತಮ್ಮ ಸಂಘದ ಹೆಸರನ್ನು ನಂಬರ್ ವ್ಯಾಟ್ಸಪ್ ಮಾಡಬೇಕು ತಿಳಿಸಿದರು.

ಈ ಸಂದರ್ಭದಲ್ಲಿ ತಿಮ್ಮಣ್ಣ ನಾಯಕ ಸಾಗರಕ್ಯಾಂಪ್, ಸತ್ಯಪ್ಪ ಮಾಸ್ತರ ಕುರುಕುಂದ, ವೆಂಕೋಬ ನಾಯಕ ತುರ್ವಿಹಾಳ, ಬಸಪ್ಪ ಗೌಡನಭಾವಿ, ಹೆಚ್.ಆರ್.ಹೊಸಮನಿ,ಯಲ್ಲಪ್ಪ ಗೋಮರ್ಸಿ, ಮಾಬುಸಾಬ ಬೆಳ್ಳಟ್ಟಿ,ಮಾನಪ್ಪ ಸೇರಿದಂತೆ ಇತರರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend