ಶೋಷಿತರ ಸಮುದಾಯಕ್ಕೆ ಪ್ರೊಫೆಸರ್ ಕೃಷ್ಣಪ್ಪ ಕೊಡುಗೆ ಅಪಾರ – ಪೀರಪ್ಪ ಮ್ಯಾಗೇರಿ.
ಬಾಗಲಕೋಟೆ : ಜೂನ್ 11 ಇಂದು ನಗರದ ಹೋಟೆಲ್ ಡ್ರಿಮ್ಸ್ ನಲ್ಲಿ ದಲಿತ ಸಮುದಾಯದ ಅಪರೂಪದ ನಾಯಕ್ ದಲಿತ್ ಸಂಘರ್ಷ ಸಮಿತಿಯ ಜನಕ ಪ್ರೊಫೆಸರ್ ಕೃಷ್ಣಪ್ಪ ಅವರ ಜನ್ಮದಿನೋತ್ಸವನ್ನು ಆಚರಿಸಲಾಯಿತು.
ದಲಿತ ಮುಖಂಡ ಶ್ರೀ ಪೀರಪ್ಪ ಮ್ಯಾಗೇರಿ ಅವರು ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರೊಫೆಸರ್ ಕೃಷ್ಣಪ್ಪ ರವರು ಹೋರಾಟ ಚಳುವಳಿ ಮಾಡಿದಷ್ಟೇ ಅಲ್ಲದೆ ದಲಿತ ಸಮುದಾಯಗಳ ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಿ ಅವುಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ಅಣತಿಯಂತೆ ನಾವು ಎಲ್ಲ ದಲಿತ ಸಂಘಟನೆಗಳು ಒಂದುಗೂಡಿ ಹೋದರೆ ರಾಜ್ಯಾಧಿಕಾರ ಪಡಿಯುವದು ಕಷ್ಟವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಕೀಲರು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರು ನಾಗರಾಜ್ ಮನ್ನಿಕೇರಿ ಮಾತನಾಡಿ ಅತಿ ಶೀಘ್ರದಲ್ಲಿ ದಲಿತ ಸಂಘಟನೆಗಳು ಮತ್ತು ಎಲ್ಲಾ ಮುಖಂಡರನ್ನು ಬಾಗಲಕೋಟ ಜಿಲ್ಲೆಯಲ್ಲಿ ಸೇರಿಸಿ ದಲಿತ ಸಮುದಾಯಗಳ ವಿಷಯವಾಗಿ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಸಂದರ್ಭದಲ್ಲಿ ಪ್ರೊಫೆಸರ್ ಕೃಷ್ಣಪ್ಪ ಅವರ ಸೇವೆಯನ್ನು ಸ್ಮರಣಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಉದ್ಯಮಿಗಳು ಎಂ. ಆರ್ ಶಿಂದೆ, ಕೇಳುಡೆಪ್ಪ ಭೈರಮಟ್ಟಿ, ಚೇತನ್ ದೊಡ್ಡಮನಿ, ಅಭಿಷೇಕ್ ತಳ್ಳಿಕೇರಿ, ವಿಠ್ಠಲ್ ಬೆವೂರ, ಪ್ರಕಾಶ್ ಮ್ಯಾಗೇರಿ ದುರಗಪ್ಪ ನಾಯಕ್, ಮಂಜುಕುಮಾರ್ ಮಲಘಾಣ, ಸುರೇಶ ಮಾದರ್ ಇನ್ನು ಅನೇಕರು ಉಪಸ್ಥಿತರಿದ್ದರು….

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
