ಕೂಡ್ಲಿಗಿ ತಾಲೂಕಿನ ಗುಡೆಕೋಟೆ (ಸಿದ್ದಾಪುರ) ಮುರಾರ್ಜಿ ಶಾಲೆಯಲ್ಲಿ ಗುಡೆಕೋಟೆ ಅರಣ್ಯ ಇಲಾಖೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗುಡೆಕೋಟೆ ವಲಯ ಅರಣ್ಯ ಅಧಿಕಾರಿಗಳಾದ ಶ್ರೀಮತಿ ರೇಣುಕಮ್ಮ ಮತ್ತು ಉಪ ವಲಯ ಅರಣ್ಯ ಅಧಿಕಾರಿ ಹೊನ್ನೂರ ಸ್ವಾಮಿ ಮತ್ತು ಸಿಬ್ಬಂದಿ ವರ್ಗದವರು ಮುರಾರ್ಜಿ ಶಾಲೆಯ ಮಕ್ಕಳಿಗೆ ಬೀಜ ಉಂಡೆ ವಿಧಾನವನ್ನು ಮಾಡುವುದರ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಕ್ಕಳಿಗೆ ತರಬೇತಿ ನೀಡಿದರು. 200ಕ್ಕೂ ಹೆಚ್ಚು ವಿದ್ಯಾರ್ಥಿ ಇಪ್ಪತ್ತೆರಡು ಸಾವಿರದ ಇನ್ನೂರು ಇಪ್ಪತ್ತೆರಡು ಬೀಜದ ಉಂಡೆ ತಯಾರಿಸುವ ಕೆಲಸಕ್ಕೆ ಮುಂದಾಗಿದ್ದರು. ವಿದ್ಯಾರ್ಥಿಗಳು ಪರಿಸರಕ್ಕೆ ಪೂರಕವಾದ ಬೀಜದ ಉಂಡೆ ತಯಾರಿಕೆಯಲ್ಲಿ ತೊಡಗಿದ್ದು, ನೇರಳೆ, ಅಂಟುವಾಳ ಕಾಯಿ, ಸಾಗುವಾನಿ, ಮಾವು, ಹುಣಸೆ, ಸೇರಿದಂತೆ ಬೀಜಗಳನ್ನು ಹಾಕಿ ಮಣ್ಣಿನ ಉಂಡೆ ಕಟ್ಟುವ ಮೂಲಕ ಪರಿಸರಕ್ಕೆ ಉಪಯೋಗ ಅಗಲೆಂದು ಈ ಕೆಲಸಕ್ಕೆ ಮುಂದಾಗಿದ್ದಾರೆ. ಮಕ್ಕಳು ಸಹ ತುಂಬಾ ಉತ್ಸಾಹದಿಂದ ಬೀಜದ ಉಂಡೆಗಳನ್ನು ತಯಾರು ಮಾಡಿದರು. ಪ್ರಮುಖವಾಗಿ ಈ ಬೀಜದ ಉಂಡೆಗಳನ್ನು ಕೊಟ್ಟಿಗೆಯ ಗೊಬ್ಬರ, ಗಂಜಲ, ಕೆಮ್ಮಣ್ಣು ಮಿಶ್ರಣ ಮಾಡಿ ತಯಾರು ಮಾಡುತ್ತಿದ್ದು, ಮಕ್ಕಳು ಹಾಗೂ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಹೆಚ್ಚು ತಿಳುವಳಿಕೆ ನೀಡುವುದರ ಜೂತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಈ ಕಾರ್ಯಕ್ರಮ ಮಾಡಲಾಗಿದೆ. ಮಕ್ಕಳು ತಯಾರು ಮಾಡಿದ ಬೀಜದ ಉಂಡೆಗಳನ್ನು ಸ್ವಲ್ಪ ದಿನದ ನಂತರ ನಾವೇ ನಿಮ್ಮ ಶಾಲೆಗೆ ಭೇಟಿ ನೀಡಿ ನಮ್ಮ ಅರಣ್ಯ ಇಲಾಖೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಅರಣ್ಯ ಇಲಾಖೆಯವರು ತಿಳಿಸಿದರು. ಮುರಾರ್ಜಿ ಶಾಲೆಯ ಪ್ರಾಂಶುಪಾಲರಾದ ಪ್ರವೀಣ್ ಮಾತನಾಡಿ ಪರಿಸರ ಉಳಿದರೆ ಮಾತ್ರ ಮಾನವ ಕುಲಕ್ಕೆ ಉಳಿಗಾಲ ಇದೆ ಪರಿಸರ ಸಮತೋಲನ ಕಾಪಾಡಲು ಪ್ರತಿಯೊಬ್ಬರು ಸಸಿ ನೆಟ್ಟು ಬೆಳೆಸಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.

ಶಾಲೆಯ ಶಿಕ್ಷಕರಾದ ತಿಪ್ಪೇರುದ್ರಪ್ಪ ಮಾತನಾಡಿ ಪರಿಸರ ಚೆನ್ನಾಗಿದ್ದರೆ ಶುದ್ಧ ಗಾಳಿ ದೊರಕುತ್ತದೆ ಕಾಲಕಾಲಕ್ಕೆ ಮಳೆ ಬೆಳೆಯು ಬರುತ್ತದೆ ಪರಿಸರ ಮನುಷ್ಯನಿಗೆ ಅವಿಭಾಜ್ಯ ಅಂಗ ಪರಿಸರ ಇಲ್ಲಾಂದರೆ ನಾವು ಬದುಕಲು ಸಾಧ್ಯವಿಲ್ಲ ಶುದ್ಧಗಾಳಿ ನೆರಳು ನೀಡುವುದು ಪರಿಸರದಲ್ಲಿದೆ ಶಾಸಕೋಶ ದಂತೆ ವರ್ತಿಸುವ ವೃಕ್ಷಗಳು ನಮಗೆ ಅಗತ್ಯ ಹೀಗಾಗಿ ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಆಮ್ಲಜನಕ ಪರಿಸರದಲ್ಲಿ ವೃದ್ಧಿಯಾಗಲು ಪ್ರತಿಯೊಬ್ಬರು ಸಸಿ ನೆಟ್ಟು ನೀರೆರೆದು ಬೆಳೆಸಬೇಕೆಂದು ಮಕ್ಕಳಿಗೆ ತಿಳಿಸಿದರು. ಇನ್ನು ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಪ್ರವೀಣ್, ಶಿಕ್ಷಕರಾದ ತಿಪ್ಪೇರುದ್ರಪ್ಪ, ದಿಲೀಪ್, ಪ್ರಕಾಶ್, ಅನಿತಾ, ನಿಲಯ ಪಾಲಕರಾದ ಮಧುಕುಮಾರ್, ಸುಜಾತ, ಮಾರಯ್ಯ, ಕಾರ್ತಿಕ್, ನವೀನ್ ಹಾಗೂ ಉಪ ವಲಯ ಅರಣ್ಯ ಅಕಾರಿಗಳಾದ ಮಹೇಶ್, ಹೊನ್ನೂರಸ್ವಾಮಿ, ವೆಂಕಟೇಶ, ಎಸ್ ಓಬಳೇಶ, ಸಿದ್ದಾಪುರ ಗ್ರಾಮದ ಮುಖಂಡ ಜಿ. ಮಲ್ಲಿಕಾರ್ಜುನ, ಯೋಗಾನಂದ ಹಾಗೂ ಕರ್ನಾಟಕ ಪತ್ರಕರ್ತ ಸಂಘದ ಗೌರವಾಧ್ಯಕ್ಷರಾದ ಡಿ.ಎಂ ಈಶ್ವರಪ್ಪ ಸಿದ್ದಾಪುರ, ಶಾಲೆಯ ಸಿಬ್ಬಂದಿ ವರ್ಗದವರು ಶಾಲೆಯ ಮಕ್ಕಳು ಅರಣ್ಯ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು….

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
